ಇಂಗ್ಲೆಂಡ್‌ ಎದುರಿನ ಪಂದ್ಯಕ್ಕೆ ರಿಂಕುಗೆ ಇಲ್ಲ ಸ್ಥಾನ; ವರ್ಕೌಟ್ ಆಗುತ್ತಾ ಗಂಭೀರ್ ಗೇಮ್ ಪ್ಲಾನ್?

Published : Jan 22, 2025, 12:55 PM ISTUpdated : Jan 22, 2025, 01:16 PM IST
ಇಂಗ್ಲೆಂಡ್‌ ಎದುರಿನ ಪಂದ್ಯಕ್ಕೆ ರಿಂಕುಗೆ ಇಲ್ಲ ಸ್ಥಾನ; ವರ್ಕೌಟ್ ಆಗುತ್ತಾ ಗಂಭೀರ್ ಗೇಮ್ ಪ್ಲಾನ್?

ಸಾರಾಂಶ

ಇಂದು ಕೋಲ್ಕತ್ತಾದಲ್ಲಿ ಭಾರತ-ಇಂಗ್ಲೆಂಡ್ ಮೊದಲ ಟಿ20 ಪಂದ್ಯ. ಶಮಿ ವಾಪಸಾತಿ, ನಿತೀಶ್ ರೆಡ್ಡಿ ಸೇರ್ಪಡೆಯಿಂದ ರಿಂಕು ಸಿಂಗ್‌ಗೆ ಸ್ಥಾನ ಸಿಗುವುದು ಅನುಮಾನ. ಗಂಭೀರ್ ರಣತಂತ್ರದಿಂದ ರಿಂಕು ಹೊರಗುಳಿಯುವ ಸಾಧ್ಯತೆ. ಸಂಜೆ 7ಕ್ಕೆ ಪಂದ್ಯ ಆರಂಭ.

ಕೋಲ್ಕತಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಕೋಲ್ಕತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆಯಲಿದೆ. ಮೊದಲ ಟಿ20 ಪಂದ್ಯಕ್ಕೆ ಈಗಾಗಲೇ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಘೋಷಣೆಯಾಗಿದೆ. ಇನ್ನು ಭಾರತದ ಆಡುವ ಹನ್ನೊಂದರ ಬಳಗ ಟಾಸ್ ವೇಳೆ ತಿಳಿಯಲಿದೆ. ಇದೀಗ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ರಣತಂತ್ರ ಹೆಣೆದಿದ್ದು, ಹೀಗಾದಲ್ಲಿ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್, ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.

ಮೊಹಮ್ಮದ್ ಶಮಿ ಕಮ್‌ಬ್ಯಾಕ್: ಟೀಂ ಇಂಡಿಯಾ ಅನುಭವಿ ವೇಗಿ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ಟೀಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಹೌದು, 2023ರ ಏಕದಿನ ವಿಶ್ವಕಪ್‌ ಬಳಿಕ ಮೊಹಮದ್‌ ಶಮಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಅವರ ಮೇಲೆ ಎಲ್ಲರ ಕಣ್ಣಿದೆ. ಶಮಿ ಮುಂದಿನ ತಿಂಗಳು ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿರುವ ಕಾರಣ, ಅವರ ಫಾರ್ಮ್‌ ಹಾಗೂ ಫಿಟ್ನೆಸ್‌ ಅನ್ನು ಆಯ್ಕೆಗಾರರು ಗಮನಿಸಲಿದ್ದಾರೆ. ಹೀಗಾಗಿ ಮೊಹಮ್ಮದ್ ಶಮಿ ಆಡುವ ಹನ್ನೊಂದರ ಬಳಗ ಕೂಡಿಕೊಂಡರೆ, ರಿಂಕು ಸಿಂಗ್ ತಮ್ಮ ಸ್ಥಾನ ಬಿಟ್ಟುಕೊಡಬೇಕಾದ ಆತಂಕಕ್ಕೆ ಸಿಲುಕಿದ್ದಾರೆ.

ಇಂದಿನಿಂದ ಭಾರತ vs ಇಂಗ್ಲೆಂಡ್‌ ಟಿ20 ಕದನ ಆರಂಭ! ಶಮಿ ಮೇಲೆ ಎಲ್ಲರ ಕಣ್ಣು

ರಿಂಕು ಪಾಲಿಗೆ ವಿಲನ್ ಆಗ್ತಾರಾ ನಿತೀಶ್ ರೆಡ್ಡಿ:

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಈಗಾಗಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ತಾವೆಷ್ಟು ಅಪಾಯಕಾರಿ ಬ್ಯಾಟರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇದರ ಜತೆಗೆ ಉಪಯುಕ್ತ ಮಧ್ಯಮ ವೇಗದ ಬೌಲರ್ ಆಗಿರುವುದು ಸಾಬೀತು ಮಾಡಿ ತೋರಿಸಿದ್ದಾರೆ. ಹೀಗಾಗಿ ಗೌತಮ್ ಗಂಭೀರ್, ರಿಂಕು ಸಿಂಗ್ ಅವರನ್ನು ಹೊರಗಿಟ್ಟು ನಿತೀಶ್ ಕುಮಾರ್ ರೆಡ್ಡಿಗೆ ಮಣೆ ಹಾಕುವ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಜರ್ಸಿಯಲ್ಲಿ ಪಾಕಿಸ್ತಾನ ಹೆಸರು ನಿರಾಕರಿಸಿದ ಟೀಂ ಇಂಡಿಯಾ

ಆಟಗಾರರ ಪಟ್ಟಿ

ಭಾರತ (ಸಂಭವನೀಯ): ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ,, ನಿತೀಶ್‌ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್,  ಅಕ್ಷರ್‌ ಪಟೇಲ್, ಮೊಹಮ್ಮದ್ ಶಮಿ, ವರುಣ್‌ ಚಕ್ರವರ್ತಿ, ಅರ್ಶ್‌ದೀಪ್‌ ಸಿಂಗ್.

ಇಂಗ್ಲೆಂಡ್‌ (ಆಡುವ 11): ಫಿಲ್ ಸಾಲ್ಟ್‌, ಬೆನ್ ಡಕೆಟ್‌, ಜೋಸ್ ಬಟ್ಲರ್‌ (ನಾಯಕ), ಹ್ಯಾರಿ ಬ್ರೂಕ್‌, ಲಿಯಾಮ್ ಲಿವಿಂಗ್‌ಸ್ಟನ್‌, ಜೇಕೋಬ್ ಬೆಥ್‌ಹೆಲ್‌, ಓವರ್‌ಟನ್‌, ಆ್ಯಟ್ಕಿನ್ಸನ್‌, ಜೋಫ್ರಾ ಆರ್ಚರ್‌, ಆದಿಲ್ ರಶೀದ್‌, ಮಾರ್ಕ್ ವುಡ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!
IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!