
ನವದೆಹಲಿ[ನ.06]: ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ ದೇಸಿ ಕ್ರಿಕೆಟ್‌ನಲ್ಲಿ ಹಲವು ಬದಲಾವಣೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಕೆಲ ಸಲಹೆಗಳನ್ನು ನೀಡಿದ್ದಾರೆ.
ಐಪಿಎಲ್ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್!
ಪ್ರಮುಖವಾಗಿ ಏಕದಿನ ಮಾದರಿಯ ದೇಸಿ ಟೂರ್ನಿಗಳಲ್ಲಿ 50 ಓವರ್‌ಗಳ 2 ಇನ್ನಿಂಗ್ಸ್ ಬದಲಿಗೆ 25 ಓವರ್‌ಗಳ 4 ಇನ್ನಿಂಗ್ಸ್‌ಗಳನ್ನು ಆಡಿಸಲು ಪ್ರಸ್ತಾಪವಿರಿಸಿದ್ದಾರೆ. ‘ಎ’ ಹಾಗೂ ‘ಬಿ’ ತಂಡಗಳ ನಡುವೆ ಪಂದ್ಯ ನಡೆಯುವಾಗ, ‘ಎ’ ತಂಡ ಮೊದಲು 25 ಓವರ್ ಬ್ಯಾಟ್ ಮಾಡಲಿದೆ. ಬಳಿಕ ‘ಬಿ’ ತಂಡ 25 ಓವರ್ ಆಡಲಿದೆ. ನಂತರ ‘ಎ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಎಷ್ಟು ವಿಕೆಟ್ ಉಳಿಸಿಕೊಂಡಿತ್ತೋ ಅಷ್ಟು ವಿಕೆಟ್‌ಗಳೊಂದಿಗೆ 2ನೇ ಇನ್ನಿಂಗ್ಸ್ ಮುಂದುವರಿಸಿ ‘ಬಿ’ ತಂಡಕ್ಕೆ ಗುರಿ ನಿಗದಿ ಪಡಿಸಲಿದೆ. ಒಂದೊಮ್ಮೆ ‘ಎ’ ತಂಡ 25 ಓವರ್ ಒಳಗೇ ಆಲೌಟ್ ಆದರೆ, ಗುರಿ ಬೆನ್ನತ್ತಲು ‘ಬಿ’ ತಂಡಕ್ಕೆ 50 ಓವರ್ ಸಿಗಲಿದೆ. ಪ್ರತಿ ಇನ್ನಿಂಗ್ಸ್ ಮಧ್ಯೆ 15 ನಿಮಿಷ ವಿರಾಮವಿರಲಿದೆ ಎಂದು ಸಚಿನ್ ಹೊಸ ಮಾದರಿಯನ್ನು ವಿವರಿಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಕೊಹ್ಲಿ ಪತ್ರ!
ಈ ರೀತಿಯ ಬದಲಾವಣೆಗಳು ಎರಡೂ ತಂಡಗಳಿಗೂ ಉಪಯುಕ್ತವಾಗಿದ್ದು, ತಂಡವೊಂದು ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಇಬ್ಬನಿ ಬೀಳುವ ಸಂದರ್ಭದಲ್ಲಿ ಟಾಸ್ ಗೆದ್ದ ತಂಡ ತನಗೆ ಅನುಕೂಲಕರವಾದ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗಾದರೆ ಎರಡನೇ ಬಾರಿಗೆ ಬೌಲಿಂಗ್ ಮಾಡುವ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟಪಡಬೇಕಾಗುತ್ತದೆ. ಇದರಿಂದ ಸಮಬಲದ ಹೋರಾಟ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಸಚಿನ್ ಸಾಮರ್ಥ್ಯ ಟೆಸ್ಟ್ ಮಾಡಿದ್ದ ಕಪಿಲ್!
ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಬಿಸಿಸಿಐ ತೀರ್ಮಾನ ಕೈಗೊಂಡಿದೆ. ಕೆಲದಿನಗಳ ಹಿಂದಷ್ಟೇ ಭಾರತ ತಂಡ ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ಒಪ್ಪಿಕೊಂಡಿದೆ. ಹೀಗಾಗಿ ಮುಂದೊಂದು ದಿನ ಸಚಿನ್ ಸಲಹೆಯನ್ನು ಬಿಸಿಸಿಐ ಪರಿಗಣಿಸಿದರೆ ಅಚ್ಚರಿಯಿಲ್ಲ. ಅಂದಹಾಗೆ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್‌ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದ್ದು, ಇದು ಐತಿಹಾಸಿಕ ಹಗಲು-ರಾತ್ರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.