
ದುಬೈ(ಸೆ.03): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿದೆ. ಸೂಪರ್ 4 ಹಂತದಲ್ಲಿ ಇಂಡೋ ಪಾಕ್ ಹೋರಾಟ ನಡೆಯಲಿದೆ. ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಮಣಿಸಿತ್ತು. ಇದೀಗ ಮತ್ತೆ ಅದೇ ಕುತೂಹಲ ಮನೆ ಮಾಡಿದೆ. ಇದರ ನಡುವೆ ಟೀಂ ಇಂಡಿಯಾದ ಪ್ರದರ್ಶನ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟಿ20 ಮಾತ್ರವಲ್ಲ, ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲೂ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಸಿದೆ. ಆದರೆ ಟೀಂ ಇಂಡಿಯಾದ ಪ್ರಾಬಲ್ಯ ಕೇವಲ ಹಣದಿಂದ, ಆದಾಯದಿಂದ ಮಾತ್ರ, ಪ್ರದರ್ಶನದಿಂದ ಅಲ್ಲ ಎಂದು ಹಫೀಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಫೀಜ್ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ. ನಿಮಗೆ ಪ್ರೋಫೆಸರ್ ಎಂದು ಯಾರು ಹೆಸರಿಟ್ಟರು? ನಿಮಗಿಂತ ಚೆನ್ನಾಗಿ ರಿಕ್ಷಾವಾಲ ಮಾತನಾಡುತ್ತಾನೆ. ಭಾರತದ ಪ್ರದರ್ಶನ ಹೇಗಿದೆ ಅನ್ನೋದು ವಿಶ್ವಕ್ಕೆ ತಿಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.
ಟೀಂ ಇಂಡಿಯಾಗೆ(Team India) ಇತರೆಡೆ ಅತ್ಯಂತ ಗೌರವ ನೀಡಲಾಗುತ್ತದೆ. ನಮ್ಮ ಸಮಾಜದಲ್ಲಿ ಹೇಗೆ ಅಂದರೆ ಯಾರು ಹೆಚ್ಚು ಆದಾಯ ಗಳಿಸುತ್ತಾರೋ ಅವರ ಮೇಲೆ ಪ್ರೀತಿ ಹೆಚ್ಚು. ಅವರಿಗೆ ಹೆಚ್ಚು ಸಿಹಿ ಮುತ್ತು ಸಿಗುತ್ತದೆ. ಹೀಗೆ ಬಿಸಿಸಿಐ(BCCI) ಆದಾಯವನ್ನು ಸೃಷ್ಟಿಸುವ ಹಾಗೂ ಹೆಚ್ಚಿನ ಆದಾಯ ಗಳಿಸುವ ಕ್ರಿಕೆಟ್ ಸಂಸ್ಥೆ. ಹೀಗಾಗಿ ಟೀಂ ಇಂಡಿಯಾ ಆಟಗಾರರಿಗೆ ಹೆಚ್ಚಿನ ಗೌರವವಿದೆ. ಆದರೆ ಪ್ರದರ್ಶನ ವಿಚಾರಕ್ಕೆ ಬಂದರೆ ಟೀಂ ಇಂಡಿಯಾ ಏನೂ ಇಲ್ಲ. ಪಾಕಿಸ್ತಾನ(Pakistan) ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಮಹೊಮ್ಮದ್ ಹಫೀಜ್(Mohammad Hafeez) ಹೇಳಿದ್ದಾರೆ.
RAVINDRA JADEJA INJURY ಟೀಂ ಇಂಡಿಯಾಗೆ ಬಿಗ್ ಶಾಕ್, ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಔಟ್!
ನಾಳೆ ಭಾರತ-ಪಾಕಿಸ್ತಾನ
ಏಷ್ಯಾಕಪ್ ಟಿ20 ಟೂರ್ನಿಯಲ್ಲಿ(Asia Cup 2022) 2ನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ನಿಗದಿಯಾಗಿದೆ. ಭಾನುವಾರ ಬದ್ಧವೈರಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹಾಂಕಾಂಗ್(Hong Kong) ವಿರುದ್ಧ ಶುಕ್ರವಾರ ನಡೆದ ನಾಕೌಟ್ ಪಂದ್ಯದಲ್ಲಿ 155 ರನ್‌ಗಳ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ, ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಿತು. ‘ಎ’ ಗುಂಪಿನಿಂದ ಭಾರತ, ಪಾಕಿಸ್ತಾನ ‘ಬಿ’ ಗುಂಪಿನಿಂದ ಶ್ರೀಲಂಕಾ, ಅಷ್ಘಾನಿಸ್ತಾನ ಸೂಪರ್-4ಗೇರಿದ್ದು ನಾಲ್ಕೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಶುಕ್ರವಾರದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಪಾಕಿಸ್ತಾನ 20 ಓವರಲ್ಲಿ 2 ವಿಕೆಟ್‌ಗೆ 193 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಹಾಂಕಾಂಗ್ 10.4 ಓವರಲ್ಲಿ ಕೇವಲ 38 ರನ್‌ಗೆ ಆಲೌಟ್ ಆಯಿತು. ಎರಡಂಕಿ ತಲುಪಲಿಲ್ಲ: ಹಾಂಕಾಂಗ್‌ನ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ತಲುಪಲಿಲ್ಲ. ಇತರೆ ಮೂಲಕ ದೊರೆತ 10 ರನ್, ಹಾಂಕಾಂಗ್‌ನ ಎಲ್ಲಾ ಬ್ಯಾಟರ್‌ಗಳ ವೈಯಕ್ತಿಕ ಮೊತ್ತಕ್ಕಿಂತ ಹೆಚ್ಚೆನಿಸಿಕೊಂಡಿತು. ನಾಯಕ ನಿಜಾಖತ್ ಖಾನ್ 8 ರನ್ ಗಳಿಸಿದ್ದು ಗರಿಷ್ಠ ವೈಯಕ್ತಿಕ ಮೊತ್ತ. ಸ್ಪಿನ್ನರ್ ಶದಾಬ್ ಖಾನ್ 4, ಮೊಹಮದ್ ನವಾಜ್ 3 ವಿಕೆಟ್ ಕಿತ್ತರು. ವೇಗಿ ನಸೀಂ ಶಾಗೆ 2 ವಿಕೆಟ್ ಸಿಕ್ಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.