Latest Videos

ಫೈನಲ್ ಸೋಲಿನ ನೋವಿನಲ್ಲಿರುವ ಹೃದಯಗಳಿಗೆ ಆನಂದ್ ಮಹೀಂದ್ರ ಸೋಮವಾರದ ಮೋಟಿವೇಶನ್!

By Suvarna NewsFirst Published Nov 20, 2023, 3:29 PM IST
Highlights

ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಬಹುತೇಕರು ನಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಆನಂದ್ ಮಹೀಂದ್ರ ಮಂಡೇ ಮೋಟಿವೇಶನ್ ಹಂಟಿಕೊಂಡಿದ್ದಾರೆ. ದೇಶದ ವಿವಿಧ ಭಾಗದಿಂದ ಬಂದು, ಕುಟುಂಬವಾಗಿ ಆಡಿ ನಮ್ಮ ಹೃದಯ ಗೆದ್ದಿದ್ದಾರೆ ಎಂದು ಮಹೀಂದ್ರ ಹೇಳಿದ್ದಾರೆ. 

ಮುಂಬೈ(ನ.20) ಐಸಿಸಿ ವಿಶ್ವಕಪ್ ಸೋಲಿನ ನೋವು ಮಾಸುತ್ತಿಲ್ಲ. ಇಡೀ ಟೂರ್ನಿಯಲ್ಲಿ ಸೋಲಿಲ್ಲದ ಸರದನಾಗಿ ಫೈನಲ್ ಪ್ರವೇಶಿಸಿ, ಟ್ರೋಫಿ ಕೈಚೆಲ್ಲಿರುವುದು ಕೋಟ್ಯಾಂತರ ಅಭಿಮಾನಿಗಳ ಹೃದಯ ಒಡೆದಿದೆ. ಅರಗಿಸಿಕೊಳ್ಳಲು ಸಾಧ್ಯವಾಗದ ಸೋಲಿನ ನೋವು ತೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಉದ್ಯಮಿ ಆನಂದ್ ಮಹೀಂದ್ರ ಆಘಾತದ ನಡುವೆ ತಮ್ಮ ಸೋಮವಾರದ ಪ್ರೇರಣೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆನಂದ್ ಮಹೀಂದ್ರಾಗೆ ಮಂಡೇ ಮೋಟಿವೇಶನ್ ನೀಡಿದ್ದು ಇದೇ ಟೀಂ ಇಂಡಿಯಾ. ಟೀಂ ಇಂಡಿಯಾ ಸೋತಿಲ್ಲ, ನಮ್ಮ ಹೃದಯ ಗೆದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.

 ನಾವೇಕೆ ಸೋತಿಲ್ಲ? ತಂಡ ಜೊತೆಯಾಗಿ ಸಂಭ್ರಮ ಆಚರಿಸುವುದು ಸುಲಭ. ಆದರೆ ಇಂತಹ ಸಂದರ್ಭದಲ್ಲಿ ನೋವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಬೆಂಬಲಿಸುವುದು ಸುಲಭದ ಮಾತಲ್ಲ. ಮೆನ್ ಇನ್ ಬ್ಲೂ ಭಾರತದ ವಿವಿಧ ಭಾಗದಿಂದ, ವಿಭಿನ್ನ ಹಿನ್ನಲೆಯಿಂದ ಬಂದವರು. ಆದರೆ ಒಂದೇ ಕುಟುಂಬವಾಗಿ ಆಡಿ ನಮ್ಮ ಹೃದಯ ಗೆದ್ದರು. ಈಗಲೂ ಟೀಂ ಇಂಡಿಯಾ ನನ್ನ ಸೋಮವಾರದ ಪ್ರೇರಣೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.  

ವಿಶ್ವಕಪ್ ಫೈನಲ್ ಸೋಲಿನ ನೋವಿಗೆ ಕಣ್ಣೀರಾದ ಟೀಂ ಇಂಡಿಯಾ, ತುಂಬಿ ಬಂತು ಫ್ಯಾನ್ಸ್ ಕಣ್ಣಾಲಿ!

ಆನಂದ್ ಮಹೀಂದ್ರ ಟ್ವೀಟ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ ಕ್ರಿಕೆಟಿಗರ ರಾಜ್ಯಗಳನ್ನು ಸೂಚಿಸಿದ್ದಾರೆ. ದೇಶದ ವಿವಿಭದ ಭಾಗದ ಕ್ರಿಕೆಟಿಗರು ಜೊತೆಯಾಗಿ ಸಂಘಟಿತ ಹೋರಾಟ ನಡೆಸಿದ್ದಾರೆ. ಈ ಹೋರಾಟ, ಪ್ರದರ್ಶನ ನಮ್ಮ ಹೃದಯ ಗೆದ್ದಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

 

This sums up why we didn’t lose. It’s easy for teams to celebrate together;harder to support & share each other’s pain.The Men in Blue came from around the country and from vastly different backgrounds but played as a family and won our hearts. They’re STILL my pic.twitter.com/BHatUZ7dKH

— anand mahindra (@anandmahindra)

 

ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿ ವಿಶ್ವಕಪ್ ಟ್ರೋಫಿ ಕೈಚೆಲ್ಲಿತು. ಲೀಗ್ ಹಂತದ 9 ಪಂದ್ಯ, ಸೆಮಿಫೈನಲ್ ಪಂದ್ಯ ಸೇರಿ ಒಟ್ಟು 10 ಪಂದ್ಯದಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ 10 ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿತ್ತು. ಭಾರತವೇ ಗೆಲುವಿನ ಫೇವರಿಟ್ ತಂಡವಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟಿತು. 240 ರನ್ ಸಿಡಿಸಿ ಭಾರತ ಆಲೌಟ್ ಆಗಿತ್ತು. ಈ ಗುರಿಯನ್ನು ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಿಲಿಸಿತು. ಟ್ರಾವಿಸ್ ಹೆಡ್ ಶತಕ ಸಿಡಿಸಿ ಭಾರತಕ್ಕೆ ವಿಲನ್ ಆದರು. 

ಇಂದು, ಎಂದೆಂದು ನಿಮ್ಮ ಜೊತೆ ನಾವಿದ್ದೇವೆ; ಟೀಂ ಇಂಡಿಯಾ ಧೈರ್ಯ ತುಂಬಿದ ಪ್ರಧಾನಿ ಮೋದಿ!

ಸೋಲಿನ ನೋವಿನಲ್ಲಿ ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಭಾವುಕರಾದರು. 

click me!