ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಕಾಲ ಕೆಳಗೆ ಟ್ರೋಫಿ ಇಟ್ಕೊಂಡ ಮಿಚೆಲ್‌ಗೆ ಕ್ಲಾಸ್

Published : Nov 20, 2023, 02:03 PM IST
ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಕಾಲ ಕೆಳಗೆ ಟ್ರೋಫಿ ಇಟ್ಕೊಂಡ ಮಿಚೆಲ್‌ಗೆ ಕ್ಲಾಸ್

ಸಾರಾಂಶ

ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲು ಚಾಚಿಕೊಂಡು ಕುಳಿತು ಫೋಟೋಗೆ ಫೋಸ್ ನೀಡಿರುವ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಒಂದು ವೇಳೆ ಭಾರತ ಕಪ್ ಗೆದ್ದಿದ್ದರೆ ತಲೆಮೇಲೆ ಹೊತ್ತು ತಿರುಗುತ್ತಿದ್ದರು. ಆದರೆ ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಎಂದು ನೆಟ್ಟಿಗರು ಮಿಚೆಲ್ ಮಾರ್ಷ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಹಮದಾಬಾದ್(ನ.20): ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ರೋಹಿತ್ ಶರ್ಮಾ ಪಡೆಯ ವಿರುದ್ದ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೋಟ್ಯಾಂತರ ಭಾರತೀಯರ ಕನಸನ್ನು ನುಚ್ಚುನೂರು ಮಾಡಿದೆ. ಟೀಂ ಇಂಡಿಯಾ ಕಪ್ ಗೆಲ್ಲಬಹುದು ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಕೋಟ್ಯಾಂತರ ಭಾರತೀಯ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ತೋರಿದ ಅನುಚಿತ ವರ್ತನೆ ಟೀಂ ಇಂಡಿಯಾ ಫ್ಯಾನ್ಸ್ ಕೆರಳುವಂತೆ ಮಾಡಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲು ಚಾಚಿಕೊಂಡು ಕುಳಿತು ಫೋಟೋಗೆ ಫೋಸ್ ನೀಡಿರುವ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಒಂದು ವೇಳೆ ಭಾರತ ಕಪ್ ಗೆದ್ದಿದ್ದರೆ ತಲೆಮೇಲೆ ಹೊತ್ತು ತಿರುಗುತ್ತಿದ್ದರು. ಆದರೆ ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಎಂದು ನೆಟ್ಟಿಗರು ಮಿಚೆಲ್ ಮಾರ್ಷ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.

ಭಾರತ ಮಣಿಸಿ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಚ್ಚರಿ ನಿರ್ಧಾರ ಪ್ರಕಟಿಸಿದ ಪ್ಯಾಟ್ ಕಮಿನ್ಸ್‌..!

ಇಲ್ಲಿಯವರೆಗೂ ಯಾವುದೇ ಅಧಿಕೃತ ಹ್ಯಾಂಡಲ್‌ನಿಂದ ಈ ಫೋಟೋ ಫೋಸ್ಟ್ ಆಗಿಲ್ಲ. ಹೀಗಾಗಿ ಐಸಿಸಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಇದುವರೆಗೂ ಈ ಫೋಸ್ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತದ ಹಲವು ನೆಟ್ಟಿಗರು ಮಿಚೆಲ್ ಮಾರ್ಷ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದು ಹೀಗೆ..

ಇನ್ನು ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಹೇಳುವುದಾದರೇ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ(54), ಕೆ ಎಲ್ ರಾಹುಲ್(66) ಬಾರಿಸಿದ ಅರ್ಧಶತಕ ಹಾಗೂ ನಾಯಕ ರೋಹಿತ್ ಶರ್ಮಾ(47) ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ ಉಳಿದ ಬ್ಯಾಟರ್‌ಗಳ ವೈಪಲ್ಯದಿಂದಾಗಿ ಭಾರತ ಕೇವಲ 240 ರನ್‌ಗಳಿಗೆ ಸರ್ವಪತನ ಕಂಡಿತು.

ಒಂದು ದಶಕದಿಂದಲೂ ಭಾರತಕ್ಕೆ ನಿರಂತರ ಹಾರ್ಟ್‌ ಬ್ರೇಕ್‌! ಸೇಡಿಗೆ ಚಾನ್ಸ್‌ ಕೊಡದ ಆಸೀಸ್‌!

ಇನ್ನು ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಒಂದು ಹಂತದಲ್ಲಿ 47 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಸಿಲುಕಿತ್ತು. ಆದರೆ ಟ್ರಾವಿಸ್ ಹೆಡ್(137) ಹಾಗೂ ಮಾರ್ನಸ್ ಲಬುಶೇನ್(58) ಶತಕದ ಜತೆಯಾಟವಾಡುವ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!