
ನವದೆಹಲಿ(ಏ.17): ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ, ಮಂಡಿ ಮುರಿದಿದ್ದರೂ 2015ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದಾಗಿ ಬಹಿರಂಗಪಡಿಸಿದ್ದಾರೆ.
2015ರ ವಿಶ್ವಕಪ್ ಮೊದಲ ಪಂದ್ಯದಲ್ಲೇ ಮೊಣಕಾಲು ಗಾಯಕ್ಕೆ ತುತ್ತಾದೆ. ಇದಾದ ಬಳಿಕ ನೋವಿನ ಮಾತ್ರೆ ತಿಂದುಕೊಂಡೆ ಇಡೀ ಟೂರ್ನಿ ಆಡಿದೆ. ತಂಡದ ಸಹ ಆಟಗಾರರು ಹಾಗೂ ಫಿಸಿಯೋಗಳ ಬೆಂಬಲದಿಂದ ಟೂರ್ನಿಯುದ್ಧಕ್ಕೂ ಆಡಲು ಸಾಧ್ಯವಾಯಿತು ಎಂದು ಶಮಿ ಹೇಳಿದ್ದಾರೆ.
India Lockdown ಬಡ ವಲಸಿಗನ ಹೃದಯ ಗೆದ್ದ ವೇಗಿ ಮೊಹಮ್ಮದ್ ಶಮಿ
‘ಟೂರ್ನಿಯುದ್ದಕ್ಕೂ ನೋವಿನಲ್ಲೇ ಆಡಿದೆ. ಆಸ್ಪ್ರೇಲಿಯಾ ವಿರುದ್ಧ ಸೆಮಿಫೈನಲ್‌ಗೂ ಮುನ್ನ, ನನ್ನಿಂದ ಸಾಧ್ಯವಿಲ್ಲ ಎಂದು ಸಹ ಆಟಗಾರರಿಗೆ ತಿಳಿಸಿದೆ. ನಾಯಕ ಧೋನಿ, ಈ ಸಮಯದಲ್ಲಿ ಹೊಸ ಬೌಲರ್‌ನನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ. ನೀನೇ ಆಡಬೇಕು ಎಂದು ಸ್ಫೂರ್ತಿ ತುಂಬಿದರು’ ಎಂದು ಶಮಿ ಹೇಳಿಕೊಂಡಿದ್ದಾರೆ. ಸೆಮೀಸ್‌ನಲ್ಲಿ ಸೋತು ಭಾರತ ಹೊರಬಿದ್ದ ಬಳಿಕ, ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿ, 2016ರ ಜುಲೈ ವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದರು.
2015ರ ಸೆಮಿಫೈನಲ್‌ನಲ್ಲಿ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕ ಹಾಗೂ ಭಾರತೀಯ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.