ಟೀಂ ಇಂಡಿಯಾ ಟಿ20 ವಿಶ್ವಕಪ್ ಸರಣಿಗೆ ಸೆಪ್ಟೆಂಬರ್ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಇನ್ನೂ ಉದ್ಘಾಟನೆಯಾಗಬೇಕಿರುವ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದೆ. ಅದರಲ್ಲೇನು ವಿಶೇಷ ಅಂತೀರಾ? ಈ ಸ್ಟೋರಿ ನೋಡಿ.
ಮೆಲ್ಬರ್ನ್(ಏ.17): ಭಾರತ ತಂಡ ಈ ವರ್ಷ ಐಸಿಸಿ ಟಿ20 ವಿಶ್ವಕಪ್ ಹಾಗೂ ಬಹುನಿರೀಕ್ಷಿತ ಟೆಸ್ಟ್ ಸರಣಿಯನ್ನು ಆಡಲು ಆಸ್ಪ್ರೇಲಿಯಾಗೆ ಪ್ರಯಾಣಿಸಬೇಕಿದ್ದು, ಕೊರೋನಾ ಸೋಂಕಿನ ಭೀತಿಯಿಂದ ಈ ಎರಡೂ ಟೂರ್ನಿಗಳು ರದ್ದಾಗುವ ಇಲ್ಲವೇ ಮುಂದೂಡಲ್ಪಡುವ ಸಾಧ್ಯತೆ ಇದೆ.
India Lockdown ಬಡ ವಲಸಿಗನ ಹೃದಯ ಗೆದ್ದ ವೇಗಿ ಮೊಹಮ್ಮದ್ ಶಮಿ
undefined
ಟೂರ್ನಿಗಳನ್ನು ಹೇಗಾದರೂ ಮಾಡಿ ನಡೆಸಲು ತನ್ನಲ್ಲಿರುವ ಆಯ್ಕೆಗಳನ್ನು ಪಟ್ಟಿ ಮಾಡುತ್ತಿರುವ ಕ್ರಿಕೆಟ್ ಆಸ್ಪ್ರೇಲಿಯಾ, ಭಾರತ ತಂಡಕ್ಕೆ ಅಡಿಲೇಡ್‌ನಲ್ಲಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಇನ್ನೂ ಉದ್ಘಾಟನೆಯಾಗದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಇಡೀ ಹೋಟೆಲ್‌ನಲ್ಲಿ ಭಾರತ ತಂಡ ಮಾತ್ರ ಇರಲಿದ್ದು, ಆಟಗಾರರಿಗೆ ಆಹಾರ ಹಾಗೂ ಅಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.
138 ಕೋಣೆಗಳಿರುವ ಐಶಾರಾಮಿ ಹೋಟೆಲ್:
ಅಡಿಲೇಡ್ ಓವಲ್ ಹೋಟೆಲ್ ಸೆಪ್ಟೆಂಬರ್‌ನಲ್ಲಿ ಉದ್ವಾಟನೆಯಾಗಲಿದ್ದು, ವಿಶ್ವದ ನಂಬರ್ 01 ಟೆಸ್ಟ್ ತಂಡಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಈ ಹೋಟೆಲ್ ಹೊಂದಿರಲಿದೆ. ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ಆರಂಭವಾಗಲಿದೆ. ಆದರೆ ಈ ಕ್ರೀಡಾಕೂಟಕ್ಕೆ ಕೊರೋನಾ ವೈರಸ್ ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಟಿ20 ವಿಶ್ವಕಪ್ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ದ ದ್ವಿಪಕ್ಷೀಯ ಸರಣಿ ಹಾಗೂ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳನ್ನಾಡಲಿದೆ. ಟೆಸ್ಟ್ ಸರಣಿ ರದ್ದಾದರೆ ಕ್ರಿಕೆಟ್ ಆಸ್ಪ್ರೇಲಿಯಾ ಪ್ರಸಾರ ಹಕ್ಕು ಹಣ 300 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 2300 ಕೋಟಿ ರು.) ನಷ್ಟವಾಗಲಿದೆ.