ಕೊನೆಯ ಟಿ20 ಪಂದ್ಯದಲ್ಲಿ ಬುಮ್ರಾ ನಿರ್ಮಿಸಿದ ವಿಶ್ವದಾಖಲೆ ಗಮನಿಸಿದ್ರಾ..?

By Suvarna News  |  First Published Feb 3, 2020, 6:21 PM IST

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ  ವಿಶ್ವದಾಖಲೆ ಬರೆದಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 


ಮೌಂಟ್‌ ಮಾಂಗನ್ಯುಯಿ(ಫೆ.03): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕೊನೆಯ ಪಂದ್ಯದಲ್ಲಿ ತಮ್ಮ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ದುಬಾರಿಯಾಗಿದ್ದ ಬುಮ್ರಾ, ಕೊನೆಯ ಟಿ20 ಪಂದ್ಯದಲ್ಲಿ ಲೈನ್ ಅಂಡ್ ಲೆಂಗ್ತ್ ಕಂಡುಕೊಂಡಿದ್ದಾರೆ. ಇದರ ಜತೆಗೆ ಹೊಸ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ.

ಕಿವೀಸ್ ಸರಣಿಯಿಂದ ಹೊರಬಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

Latest Videos

undefined

ನ್ಯೂಜಿಲೆಂಡ್ ವಿರುದ್ಧ ಮೌಂಟ್‌ ಮಾಂಗನ್ಯುಯಿಯಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಬುಮ್ರಾ ಹಾಕಿದ ಮೊದಲ ಓವರ್‌ನಲ್ಲೇ ವಿಶ್ವದಾಖಲೆ ನಿರ್ಮಾಣವಾಯಿತು. ಹೌದು, ಪಂದ್ಯದ ಎರಡನೇ ಓವರ್ ಹಾಕಿದ ಬುಮ್ರಾ ಮೇಡನ್ ಓವರ್ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 7 ಮೇಡನ್ ಓವರ್ ಮಾಡಿದ ವಿಶ್ವದ ಮೊದಲ ಬೌಲರ್ ಎನ್ನುವ ಗೌರವಕ್ಕೆ ಬುಮ್ರಾ ಪಾತ್ರರಾದರು. ಈ ಮೊದಲು ಶ್ರೀಲಂಕಾದ ಮಾಜಿ ಕ್ರಿಕೆಟಿಗ ನುವಾನ್ ಕುಲಸೇಖರ 6 ಮೇಡನ್ ಓವರ್ ಮಾಡಿದ್ದರು.  ಬೇ ಓವಲ್‌ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಬುಮ್ರಾ 4 ಓವರ್ ಮಾಡಿ ಒಂದು ಮೇಡನ್ ಸಹಿತ 12 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. 

ಕಿವೀಸ್ ಸರಣಿ ಗೆದ್ದು ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ ಕೊಹ್ಲಿ!

ಟೀಂ ಇಂಡಿಯಾ ಆಟಗಾರರ ಅದ್ಭುತ ಪ್ರದರ್ಶನದ ನೆರವಿನಿಂದ ಮೊದಲ ಬಾರಿಗೆ ಕಿವೀಸ್‌ ನೆಲದಲ್ಲಿ ವಿರಾಟ್ ಪಡೆ ಟಿ20 ಸರಣಿ ಜಯಿಸಿ ಸಂಭ್ರಮಿಸಿತ್ತು. ಇನ್ನು 5ನೇ ಟಿ20 ಪಂದ್ಯದಲ್ಲಿ ಬುಮ್ರಾ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ 163 ರನ್ ಗಳಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಪಡೆದ ಕಿವೀಸ್ 9 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 7 ರನ್‌ಗಳ ಜಯ ದಾಖಲಿಸುವುದರ ಜತೆಗೆ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. 
 

click me!