ಧೋನಿ ಸಾಟಿ ಇಲ್ಲದ ಬೆಂಝ್, ಪಾಂಡೆ ಅದೇ ಕಾರಿನ ಆಲ್ಟೋ ವರ್ಶನ್!

Suvarna News   | Asianet News
Published : Feb 03, 2020, 06:14 PM ISTUpdated : Feb 03, 2020, 06:17 PM IST
ಧೋನಿ ಸಾಟಿ ಇಲ್ಲದ ಬೆಂಝ್, ಪಾಂಡೆ ಅದೇ ಕಾರಿನ ಆಲ್ಟೋ ವರ್ಶನ್!

ಸಾರಾಂಶ

ಟೀಂ ಇಂಡಿಯಾ ಹಿರಿಯ ಕ್ರಿಕೆಟ್ ಎಂ.ಎಸ್.ಧೋನಿ ಸ್ಥಾನ ತುಂಬಬಲ್ಲ ಮತೊಬ್ಬ ಕ್ರಿಕೆಟಿಗನಿಲ್ಲ. ಧೋನಿ ಟೀಂ ಇಂಡಿಯಾದಿಂದ ದೂರ ಉಳಿದ ಬಳಿಕ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಸಮರ್ಥ ಫಿನೀಶರ್ ಇಲ್ಲದಂತಾಗಿದೆ. ಇದೀಗ ಕನ್ನಡಿಗ ಮನೀಶ್ ಪಾಂಡೆ ಧೋನಿ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅತ್ಯುತ್ತಮ ಊದಾಹರಣೆ ಮೂಲಕ ವಿವರಿಸಿದ್ದಾರೆ.

ಮೌಂಟ್ ಮೌಂಗನುಯಿ(ಫೆ.03): ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯತ್ತ ಚಿತ್ತ ಹರಿಸಿದೆ. ಏಕದಿನ ಸರಣಿಯಲ್ಲಿ ಭಾರತದ ಪರ ಮನೀಶ್ ಪಾಂಡೆ ಉತ್ತಮ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲ, ಎಂ.ಎಸ್.ಧೋನಿ ಬಳಿಕ ಪಂದ್ಯ ಫಿನೀಶ್ ಮಾಡಬಲ್ಲ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಧೋನಿ ರೀತಿ ಪಂದ್ಯ ಫಿನೀಶ್ ಮಾಡೋ ಸಾಮರ್ಥ್ಯ ಕನ್ನಡಿಗನಿಗಿದೆ; ಅಕ್ತರ್ ಹೇಳಿದ ಸತ್ಯ!

ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿರುವ ಮನೀಶ್ ಪಾಂಡೆಯನ್ನು ಎಂ.ಎಸ್.ಧೋನಿಗೆ ಹೋಲಿಸಲಾಗುತ್ತಿದೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೊಸ ಊದಾಹರಣೆ ಮೂಲಕ ವಿವರಿಸಿದ್ದಾರೆ. ಎಂ.ಎಸ್.ಧೋನಿ ಮರ್ಸಡೀಸ್ ಬೆಂಝ್ ಕಾರಾಗಿದ್ದಾರೆ, ಮನೀಶ್ ಪಾಂಡೆ ಬೆಂಝ್ ಕಾರಿನ ಅಲ್ಟೋ ವರ್ಶನ್ ಎಂದು ಹೇಳಿದ್ದಾರೆ. ಈ ಮೂಲಕ ಧೋನಿ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ನೆರವಾದ ಕನ್ನಡಿಗರು; ಸ್ಫರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ.

ಧೋನಿ ಹಾಗೂ ಮನೀಶ್ ಪಾಂಡೆ ಆಡುವ ಶೈಲಿ ಒಂದೇ ರೀತಿ ಇದೆ. ಒತ್ತಡ ಪರಿಸ್ಥಿತಿಯನ್ನು ಮನೀಶ್ ಪಾಂಡೆ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.  ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮನೀಶ್ ಪಾಂಡೆ ಆಡಿದ  4 ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!
ಬಾಂಗ್ಲಾದೇಶ ಮಾತ್ರವಲ್ಲ ಪಾಕಿಸ್ತಾನವೂ ಟಿ20 ವಿಶ್ವಕಪ್‌ನಿಂದ ಔಟ್! ಸಿದ್ದತೆ ನಿಲ್ಲಿಸಿದ ಪಾಕ್!