ಭಾರತಕ್ಕೀಗ ಹೊಸ ತಂಡ ಕಟ್ಟುವ ಸವಾಲು; 2024ರ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ಸಿದ್ದತೆ..!

By Kannadaprabha News  |  First Published Nov 12, 2022, 10:22 AM IST

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಭಾರತದ ಹೋರಾಟ ಅಂತ್ಯ
2024ರ ಟಿ20 ವಿಶ್ವಕಪ್ ಟೂರ್ನಿಗೆ ಈಗಿನಿಂದಲೇ ಸಿದ್ದತೆ
ಟಿ20 ತಂಡಕ್ಕೆ ನಾಯಕತ್ವ ಬದಲಾವಣೆ ಅನಿವಾರ್ಯ


ಬೆಂಗಳೂರು(ನ.12) ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಹೀನಾಯ ಸೋಲಿನೊಂದಿಗೆ ಮುಕ್ತಾಯವೇನೋ ಆಗಿದೆ. ಅದಕ್ಕೆ ಮಾಜಿ ಕ್ರಿಕೆಟಿಗರು, ಕ್ರೀಡಾ ತಜ್ಞರು, ಕ್ರಿಕೆಟ್‌ ಅಭಿಮಾನಿಗಳು ತಂಡ ಹಾಗೂ ತಂಡದ ಆಡಳಿತವನ್ನು ಹೀನಾಮಾನವಾಗಿ ತರಾಟೆಗೆ ತೆಗೆದುಕೊಂಡದ್ದೂ ಆಗಿದೆ. ಇದೀಗ ಭವಿಷ್ಯದತ್ತ ದೃಷ್ಟಿನೆಡುವ ಸಮಯ. 2024ರಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ಮುಂದಿನ ಟಿ20 ವಿಶ್ವಕಪ್‌ ನಡೆಯಲಿದೆ. ಇದಕ್ಕಾಗಿ ಹೊಸ ಹುಮ್ಮಸ್ಸಿನ ತಂಡವೊಂದನ್ನು ಕಟ್ಟುವ ಸವಾಲು ಭಾರತದ ಮುಂದಿದೆ. ಅದಕ್ಕಾಗಿ ಇಡೀ ತಂಡವನ್ನು ಪರಿಷ್ಕರಿಸಬೇಕಿಲ್ಲ. ಹಲವು ತಿದ್ದುಪಡಿಗಳು, ಬದಲಾವಣೆಗಳು ಆಗಬೇಕಿದೆ. ಅದಕ್ಕೆ ಏನೆಲ್ಲ ಆಗಬೇಕು? ಬಿಸಿಸಿಐ ಆಯ್ಕೆ ಸಮಿತಿ ತೆಗೆದುಕೊಳ್ಳಬೇಕಿರುವ ಕಠಿಣ ನಿರ್ಧಾರಗಳು ಏನೇನು? ಎಂಬಿತ್ಯಾದಿ ವಿಶ್ಲೇಷಣೆ ಇಲ್ಲಿದೆ...

ನಾಯಕತ್ವ ಬದಲಾವಣೆ ಅನಿವಾರ್ಯ

Latest Videos

undefined

ನಾಯಕರಾಗಿ ರೋಹಿಲ್‌ ಶರ್ಮಾ ವೈಫಲ್ಯ ಇದೀಗ ಎಲ್ಲರ ಕೆಂಗಣ್ಣಿಗೆ ಪಾತ್ರವಾಗಿದೆ. ಪ್ರತಿ ಪಂದ್ಯಕ್ಕೂ ಅತ್ಯಗತ್ಯವಾಗಿರುವ ವ್ಯೂಹ ರಚನೆ, ಅದರ ಅನುಷ್ಠಾನದಲ್ಲಿ ರೋಹಿತ್‌ ಪದೇ ಪದೇ ವಿಫಲರಾಗುತ್ತಿದ್ದಾರೆ. ಬಹುಶಃ ಅವರ ಬತ್ತಳಿಕೆ ಬರಿದಾಗಿದೆ. ಅಲ್ಲದೆ, 2024ಕ್ಕೆ ಅವರು 37ನೇ ವಯಸ್ಸಲ್ಲಿರುತ್ತಾರೆ. ಹಾಗಾಗಿ, ಮುಂದಿನ ವಿಶ್ವಕಪ್‌ ವೇಳೆಗೆ ತಂಡಕ್ಕೆ ಹೊಸ ವ್ಯಕ್ತಿಯ ಚುಕ್ಕಾಣಿ ಸೂಕ್ತ, ಹಾರ್ದಿಕ್‌ ಪಾಂಡ್ಯ ಆ ಸ್ಥಾನ ತುಂಬಲು ಸಮರ್ಥ ಎನ್ನುತ್ತಾರೆ ತಜ್ಞರು. ಅದಕ್ಕವರು ಕಾರಣವನ್ನೂ ಕೊಡುತ್ತಾರೆ. ಚೊಚ್ಚಲ ಬಾರಿ ಐಪಿಎಲ್‌ನಲ್ಲಿ ತಂಡ ಮುನ್ನಡೆಸಿ ಟ್ರೋಫಿ ಗೆದ್ದ ಹಾರ್ದಿಕ್‌, ಐರ್ಲೆಂಡ್‌ ವಿರುದ್ಧ ಸರಣಿಗೆ ಭಾರತ ತಂಡದ ನಾಯಕರಾಗಿದ್ದರು. ಬರುವ ನ್ಯೂಜಿಲೆಂಡ್‌ ವಿರುದ್ಧದ ಸರಣಿಗೂ ಅವರದೇ ನಾಯಕತ್ವ. ಇದು ಅವರು ಭವಿಷ್ಯದ ನಾಯಕ ಎಂಬುದರ ಸ್ಪಷ್ಟಸುಳಿವು.

ಆಫ್ಘನ್‌, ಇಂಗ್ಲೆಂಡ್‌ ಮಾದರಿ?

ಟಿ20ಗೆ ಆಕ್ರಮಣಶೀಲತೆ ಬಹಳ ಮುಖ್ಯ. ಈ ಬಾರಿ ಭಾರತ ಕಂಡ ಬಹುದೊಡ್ಡ ಲೋಪ ಇದು. ಈ ನಿಟ್ಟಿನಲ್ಲಿ ಭಾರತಕ್ಕೆ ಅಷ್ಘಾನಿಸ್ತಾನ, ಇಂಗ್ಲೆಂಡ್‌ ಮಾದರಿ ಆಗಬಹುದು. ಯಾಕೆಂದರೆ, ಅವೆರಡೂ ತಂಡಗಳು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತವೆ. ವಿಕೆಟ್‌ ಬಿದ್ದರೂ, ಹೊಸದಾಗಿ ಕ್ರೀಸ್‌ಗಿಳಿಯುವ ಬ್ಯಾಟರ್‌ ಅಳುಕಿಲ್ಲದೆ ಬ್ಯಾಟ್‌ ಬೀಸುತ್ತಾರೆ. ಯಾವ ಹಂತದಲ್ಲೂ ರನ್‌ರೇಟ್‌ ಕಡಿಮೆ ಆಗಬಾರದು ಎಂಬುದು ಇದರ ಹಿಂದಿನ ಉದ್ದೇಶ. ಬೌಲಿಂಗ್‌ನಲ್ಲೂ ಈ ತಂಡಗಳು ವಿಭಿನ್ನತೆ ಹೊಂದಿವೆ. ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ತನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳುತ್ತವೆ. ಒಬ್ಬ ಆಟಗಾರ ವಿವಿಧ ಪಾತ್ರಗಳನ್ನು ನಿರ್ವಹಿಸುವ ಕೌಶಲ್ಯವನ್ನೂ ಹೊಂದಿರುತ್ತಾರೆ. ಆಧುನಿಕ ಟಿ20 ಆಟಕ್ಕೆ ಬೇಕಿರುವ ಈ ತಂತ್ರಗಳನ್ನು ಭಾರತ ನಿಸ್ಸಂಶಯವಾಗಿ ಅಳವಡಿಸಿಕೊಳ್ಳಬಹುದು.

ಸ್ಟ್ರೈಕ್‌ರೇಟ್‌ಗೆ ಪ್ರಾಮುಖ್ಯತೆ ಅಗತ್ಯ

ಭಾರತದ ವೈಫಲ್ಯಕ್ಕೆ ತಂಡದ ಅಗ್ರ ಕ್ರಮಾಂಕದ ಕಳಪೆ ಸ್ಟೆ್ರೖಕ್‌ರೇಟ್‌ ಕೂಡ ಕಾರಣ. 40 ಎಸೆತಗಳಲ್ಲಿ 50 ರನ್‌ ಗಳಿಸುವುದಕ್ಕಿಂತ 10 ಎಸೆತಗಳಲ್ಲಿ 25 ರನ್‌ ಗಳಿಸುವ ಬ್ಯಾಟರ್‌ಗೆ ಪ್ರಾಶಸ್ತ್ಯ. ಭಾರತದ ಈಗಿನ ಆರಂಭಿಕರಾದ ರೋಹಿತ್‌, ರಾಹುಲ್‌ರ ಸ್ಟೆ್ರೖಕ್‌ರೇಟ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇವರ ಜಾಗಕ್ಕೆ ಬಿಸಿಸಿಐ ಮುಂದೆ ಹಲವು ಆಯ್ಕೆಗಳಿವೆ. ಪೃಥ್ವಿ ಶಾ ಟಿ20ಯಲ್ಲಿ 152ರ ಸ್ಟೆ್ರೖಕ್‌ರೇಟ್‌ ಹೊಂದಿದ್ದಾರೆ. ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ಗೆ ಹೆಚ್ಚಿನ ಅವಕಾಶ ಕೊಟ್ಟು ನೋಡಬಹುದು. ಯಶಸ್ವಿ ಜೈಸ್ವಾಲ್‌ ಸಹ ಸ್ಫೋಟಕ ಆರಂಭ ನೀಡಬಲ್ಲ ಆಟಗಾರ. ಸೌರಾಷ್ಟ್ರದ ಸಮಥ್‌ರ್‍ ವ್ಯಾಸ್‌ 2022ರಲ್ಲಿ 177.4ರ ಸ್ಟೆ್ರೖಕ್‌ರೇಟ್‌ ಹೊಂದಿದ್ದಾರೆ. ಇವರನ್ನೂ ಪರಿಗಣಿಸಬಹುದು.

ಇನ್ನಿಂಗ್ಸ್‌ ಕಟ್ಟುವ ಛಾತಿ ಬೇಕು!

ಆರಂಭಿಕ ಆಘಾತ ಆದರೂ ರನ್‌ರೇಟ್‌ ಕುಸಿಯದಂತೆ ಇನ್ನಿಂಗ್‌್ಸ ಕಟ್ಟುವ ಛಾತಿ ಇರುವ ಆಟಗಾರರಿಗೆ ಬಿಸಿಸಿಐ ಅವಕಾಶ ನೀಡಬೇಕಿದೆ. ಸದ್ಯಕ್ಕೆ ಟಿ20ಯಲ್ಲಿ ನಂ.1 ಆಗಿರುವ ಸೂರ್ಯಕುಮಾರ್‌ ಸುತ್ತ ಮಧ್ಯಮ ಕ್ರಮಾಂಕವನ್ನು ಕಟ್ಟಬೇಕಿದೆ. ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿರ್ವಹಿಸಬಲ್ಲ ಆಟಗಾರರು ಅಗತ್ಯ. ವಿದರ್ಭದ ಜಿತೇಶ್‌ ಶರ್ಮಾ ಐಪಿಎಲ್‌, ಮುಷ್ತಾಕ್‌ ಅಲಿ ಟಿ20ಯಲ್ಲಿ ಅಬ್ಬರಿಸಿದ್ದಾರೆ. ಟಿ20ಯಲ್ಲಿ ಇವರ ಸ್ಟೆ್ರೖಕ್‌ರೇಟ್‌ 143 ಇದೆ. ಪಂಜಾಬ್‌ನ ಪ್ರಭ್‌ಸಿಮ್ರನ್‌ ಸಿಂಗ್‌, ಕರ್ನಾಟಕದ ಅಭಿನವ್‌ ಮನೋಹರ್‌, ಮಧ್ಯಪ್ರದೇಶದ ರಜತ್‌ ಪಾಟಿದಾರ್‌, ಮಹಾರಾಷ್ಟ್ರದ ರಾಹುಲ್‌ ತ್ರಿಪಾಠಿ, ಹೈದ್ರಾಬಾದ್‌ನ ತಿಲಕ್‌ ವರ್ಮಾ ಹೀಗೆ ಅನೇಕ ಆಯ್ಕೆಗಳು ಬಿಸಿಸಿಐ ಮುಂದಿವೆ.

ಆಲ್ರೌಂಡರ್‌ಗಳೇ ಮ್ಯಾಚ್‌ವಿನ್ನ​ರ್ಸ್

ಟಿ20ಯಲ್ಲಿ ಆಲ್ರೌಂಡರ್‌ಗಳ ಪಾತ್ರ ದೊಡ್ಡದು. ಹಾರ್ದಿಕ್‌ ಜೊತೆ ಇನ್ನೂ ಕೆಲ ಗುಣಮಟ್ಟದ ವೇಗದ ಬೌಲಿಂಗ್‌ ಆಲ್ರೌಂಡರ್‌ಗಳು ಬೇಕಿದೆ. ವೆಂಕಟೇಶ್‌ ಅಯ್ಯರ್‌ರನ್ನು ಆರಿಸಿದರೂ ಸೂಕ್ತ ಅವಕಾಶ ಕೊಡಲಿಲ್ಲ. ಕಾಶ್ಮೀರದ ಅಬ್ದುಲ್‌ ಸಮದ್‌ ಸಹ ರೇಸ್‌ನಲ್ಲಿದ್ದಾರೆ. ಇಬ್ಬರೂ 4 ಓವರ್‌ ಬೌಲ್‌ ಮಾಡಬಲ್ಲರು. ಜೊತೆಗೆ ಟಿ20ಯಲ್ಲಿ 160ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

T20 World Cup ಗೆಲ್ಲದ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ; ಹಿರಿಯರಿಗೆ ಗೇಟ್‌ಪಾಸ್?

ಬುಮ್ರಾಗೆ ಬೇಕಿದೆ ಬೆಂಬಲ

ಮುಂದಿನ ವಿಶ್ವಕಪ್‌ ವಿಂಡೀಸ್‌-ಅಮೆರಿಕದಲ್ಲಿ ನಡೆಯುವುದನ್ನು ಗಮನದಲ್ಲಿಟ್ಟು ಭಾರತ ತನ್ನ ಬೌಲಿಂಗ್‌ ಪಡೆ ಸಿದ್ಧಪಡಿಸಬೇಕು. ಬೂಮ್ರಾ ನೇತೃತ್ವದ ಬೌಲಿಂಗ್‌ ಪಡೆಗೆ ಮೊನಚಿರುವ ವೇಗಿಗಳ ಅಗತ್ಯವಿದೆ. ಅಶ್‌ರ್‍ದೀಪ್‌ ಭರವಸೆ ಮೂಡಿಸಿದ್ದಾರೆ. ಮುಸ್ಸಂಜೆಯಲ್ಲಿರುವ ಭುವನೇಶ್ವರ್‌, ಶಮಿ ಜಾಗಕ್ಕೆ ಆವೇಶ್‌ ಖಾನ್‌, ಮೊಹಮದ್‌ ಸಿರಾಜ್‌, ಪ್ರಸಿದ್‌್ಧ ಕೃಷ್ಣ, ಯಶ್‌ ಠಾಕೂರ್‌, ಕುಲ್ದೀಪ್‌ ಸೆನ್‌, ಟಿ.ನಟರಾಜನ್‌, ಉಮ್ರಾನ್‌ ಮಲಿಕ್‌, ಮೊಹ್ಸಿನ್‌ ಖಾನ್‌ರಂಥ ಪ್ರತಿಭೆಗಳನ್ನು ಪರಿಗಣಿಸಬಹುದು. ಸ್ಪಿನ್‌ ಬಳಗಕ್ಕೂ ಬಲ ತುಂಬಬೇಕಿದೆ. ಅಶ್ವಿನ್‌ ಜಾಗಕ್ಕೆ ವಾಷಿಂಗ್ಟನ್‌, ರಾಹುಲ್‌ ಚಹರ್‌, ರವಿ ಬಿಷ್ಣೋಯ್‌ರಂಥವರನ್ನು ಆರಿಸಬಹುದು.

ಪ್ಲ್ಯಾನ್‌ ‘ಬಿ’ ಬೇಕೇ ಬೇಕು

ಎಲ್ಲಕ್ಕಿಂತ ಮುಖ್ಯವಾಗಿ ಪ್ಲ್ಯಾನ್‌ ‘ಬಿ’ ಇಟ್ಟುಕೊಳ್ಳುವುದನ್ನು ಭಾರತ ರೂಢಿಸಿಕೊಂಡರೆ ಉತ್ತಮ. ಪ್ರತಿ ಸ್ಥಾನಕ್ಕೂ ಪರಾರ‍ಯಯ ಆಟಗಾರರನ್ನು ಸಿದ್ಧಗೊಳಿಸುವ ಕೆಲಸ ಆಗಬೇಕು. ಇಂಗ್ಲೆಂಡ್‌, ಪಾಕಿಸ್ತಾನ ಈ ವಿಶ್ವಕಪ್‌ನ ಆರಂಭದಲ್ಲಿ ಎಡವಿದರೂ, ಅಗತ್ಯವಿದ್ದಾಗ ಪರಾರ‍ಯಯ ಆಟಗಾರರ ಸೇವೆ ಲಭ್ಯವಾಗಿದ್ದೇ ಫೈನಲ್‌ಗೇರಲು ಕಾರಣ. ಕೆಲವೇ ಕೆಲವು ಆಟಗಾರರ ಮೇಲೆ ಅತಿಯಾದ ಅವಲಂಬನೆ ಅಪಾಯಕಾರಿ ಎನ್ನುವ ಪಾಠವನ್ನು ಭಾರತ ಕಲಿಯಬೇಕಿದೆ.

click me!