ಪ್ರೀತಿ ಬಲೆಯಲ್ಲಿ National Crush ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?

By Suvarna News  |  First Published Aug 5, 2023, 12:26 PM IST

ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಸ್ಮೃತಿ ಮನಸೋತಿದ್ದು ಯಾರಿಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಬೆಂಗಳೂರು(ಆ.05) ಸ್ಮೃತಿ ಮಂಧನಾ..! ಭಾರತ ಮಹಿಳಾ ಕ್ರಿಕೆಟ್​ನ ಸೂಪರ್ ಸ್ಟಾರ್ ಆಟಗಾರ್ತಿ. ಈ ಮಹಾರಾಷ್ಟ್ರ ಬ್ಯೂಟಿ ತನ್ನ ಅದ್ಭುತ ಬ್ಯಾಟಿಂಗ್​ನಿಂದ ಎಷ್ಟು ಫೇಮಸ್ಸೋ, ಅದೇ ಥರ ತನ್ನ ಅಂದ-ಚೆಂದದಿಂದಲೂ ಅಷ್ಟೇ ಫೇಮಸ್​. ಅದೆಷ್ಟೋ ಯುವಕರ ಪಾಲಿನ ನ್ಯಾಷನಲ್‌ ಕ್ರಶ್. ಆದ್ರೆ, ಈ ನ್ಯಾಷನಲ್ ಕ್ರಶ್ ಮಾತ್ರ ಅದಾಗ್ಲೇ ಮತ್ತೊಬ್ಬನಿಗೆ ಮನಸು ಕೊಟ್ಟುಬಿಟ್ಟಿದ್ದಾಳೆ. 

ಬಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಜೊತೆ ಸ್ಮೃತಿ ಪ್ಯಾರ್..!

Tap to resize

Latest Videos

ಹೌದು, ಮಂಧನಾ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಬಾಲಿವುಡ್​ನ ಯಂಗ್ ಮ್ಯೂಸಿಕ್ ಡೈರೆಕ್ಟರ್​ ಪಲಾಷ್ ಮುಚ್ಚಲ್​ ಜೊತೆಗೆ ಸ್ಮೃತಿ ಮಂಧನಾ ರಿಲೇಷನ್​ಶಿಪ್​ ನಲ್ಲಿದ್ದಾರೆ ಅನ್ನೋ ಸುದ್ದಿ ಹರಡಿದೆ. ಪಲಾಷ್‌ ಮುಚ್ಚಲ್ ಖ್ಯಾತ ಬಾಲಿವುಡ್‌ ಹಾಡುಗಾರ ಪಲಾಕ್‌ ಮುಚ್ಚಲ್ ಸಹೋದರರಾಗಿದ್ದಾರೆ. ಇನ್ನು ಪಲಾಷ್ ಮುಚ್ಚಲ್​ ಜೊತೆಗೆ ಸ್ಮೃತಿ ರಿಲೇಷನ್​ಶಿಪ್​ ನಲ್ಲಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಟೀಂ ಇಂಡಿಯಾ ಏಕದಿನ ಮತ್ತು ಟಿ20 ಸರಣಿಗಾಗಿ ಬಾಂಗ್ಲಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಸ್ಮೃತಿ ತಮ್ಮ ಬರ್ತ್​​​ಡೇ ಆಚರಿಸಿಕೊಂಡಿದ್ರು. ಈ ಕಾರ್ಯಕ್ರಮಕ್ಕೆ ಪಲಾಷ್ ಕೂಡ ಅಟೆಂಡ್ ಆಗಿ, ಸ್ಮೃತಿಗೆ ವಿಶ್ ಮಾಡಿದ್ರು. 

ಕೆರಿಬಿಯನ್ ನಾಡಿಂದ ಚಾರ್ಟರ್‌ ಫ್ಲೈಟ್‌ನಲ್ಲಿ ಭಾರತಕ್ಕೆ ಬಂದಿಳಿದ ಕೊಹ್ಲಿ..! ಅದನ್ನೂ ಟ್ರೋಲ್ ಮಾಡಿದ ಫ್ಯಾನ್ಸ್‌..!

ಪಲಾಶ್ ಕೈ ಮೇಲೆ ಸ್ಮತಿ ಮಂದಾನ ಹೆಸರಿನ ಟ್ಯಾಟೂ..!

ಪಲಾಶ್ ಸ್ಮೃತಿ ಮಂದಾನರನ್ನ ಎಷ್ಟು ಪ್ರೀತಿಸುತ್ತಾರಂದ್ರೆ,  ತಮ್ಮ ಕೈ ಮೇಲೆ SM18 ಅಂತ ಹಚ್ಚೆ ಹಾಕಿಸಿಕೊಂಡಿದ್ದಾರೆ. ನಂಬರ್ 18 ಮಂಧನಾ ಜೆರ್ಸಿ ನಂಬರ್​ ಆಗಿದೆ. ಇನ್ನು ಇವರಿಬ್ಬರು ಇತ್ತೀಚೆಗೆ ಬಾಲಿವುಡ್​ ಸಿನಿಮಾ ಶೂಟಿಂಗ್​ ಸೆಟ್​ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿವೆ. ಇದಲ್ಲದೇ ಹಲವು ಕಾರ್ಯಕ್ರಮಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 

ಇಷ್ಟು ದಿನ ಕೇವಲ ಕೇವಲ ಮ್ಯೂಸಿಕ್ ಡೈರೆಕ್ಟರ್​ ಆಗಿದ್ದ ಪಲಾಷ್ ಮುಚ್ಚಲ್ ಸದ್ಯದಲ್ಲೇ, ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.  ಸಿನಿಮಾವೊಂದನ್ನು ನಿರ್ದೇಶನ ಮಾಡುವುದರ ಜೊತೆಗೆ, ನಿರ್ಮಾಣ ಕೂಡ ಮಾಡಲಿದ್ದಾರೆ. 

ಟೀಂ ಇಂಡಿಯಾಗೆ ಬಿಗ್ ಶಾಕ್‌..! ಕೆ ಎಲ್‌ ರಾಹುಲ್‌ ಏಷ್ಯಾಕಪ್‌ಗೆ ಡೌಟ್; ಮತ್ತೋರ್ವ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..?

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿರೋ ಸ್ಮೃತಿ ಮಂಧನಾ,  ಏಷ್ಯನ್​ ಗೇಮ್ಸ್​​ನಲ್ಲಿ ಮೊದಲೆರೆಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ತಂಡದ ರೆಗ್ಯುಲರ್ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್​ರನ್ನ 2 ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಇದರಿಂದ ತಂಡದ ನಾಯಕತ್ವದ ಜವಾಬ್ದಾರಿ ಸ್ಮೃತಿ ಹೆಗಲೇರಿದೆ. ಒಟ್ಟಿನಲ್ಲಿ ಇಷ್ಟು ದಿನ ಸಿಂಗಲ್ ಆಗಿದ್ದ ಸ್ಮೃತಿ, ಈಗ ಮಿಂಗಲ್ ಆಗಿದ್ದಾರೆ. ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ.
 

click me!