ರೋಹಿತ್ ವಾರ್ಷಿಕ ಆದಾಯ ರಿಪೋರ್ಟ್ ಬಹಿರಂಗ!

By Web Desk  |  First Published Nov 30, 2019, 2:59 PM IST

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎಂಡೋರ್ಸ್‌ಮೆಂಟ್ ಆದಾಯ ರಿಪೋರ್ಟ್ ಬಹಿರಂಗವಾಗಿದೆ. ಜಾಹೀರಾತುಗಳಿಂದ ರೋಹಿತ್ ಶರ್ಮಾ ಗಳಿಸೋ ಆದಾಯವೆಷ್ಟು? ಈ ಕುರಿತ ಮಾಹಿತಿ ಇಲ್ಲಿದೆ.
 


ಮುಂಬೈ(ನ.30): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅಭ್ಯಾಸ ಆರಂಭಿಸಿದ್ದಾರೆ. ಭಾರತ ತಂಡದ ಕೀ ಪ್ಲೇಯರ್ ಬ್ರ್ಯಾಂಡ್ ವ್ಯಾಲ್ಯೂ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. 2019ರ ವಿಶ್ವಕಪ್ ಟೂರ್ನಿ ಬಳಿಕ ರೋಹಿತ್ ಆದಾಯ ಗಳಿಕೆಯಲ್ಲೂ ಗಣನೀಯ ಏರಿಕೆ ಕಂಡಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವದಾಖಲೆ ಡಬಲ್ ಸೆಂಚುರಿಗೆ 5 ವರ್ಷದ ಸಂಭ್ರಮ!

Tap to resize

Latest Videos

undefined

ರೋಹಿತ್ ಶರ್ಮಾ ಎಂಡೋರ್ಸ್‌ಮೆಂಟ್‌ಗಳಿಂದಲೇ ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ರೋಹಿತ್ ಶರ್ಮಾ ಪ್ರಮುಖವಾಗಿ CEAT ಟೈಯರ್ಸ್,  ಆಡಿಡಾಸ್, ಹುಬ್ಲೋಟ್ ವಾಚಸ್, ರಿಲಿಸ್ಪ್ರೆ, ರಸ್ನಾ, ಟ್ರುಸಾಕ್ಸ್, ಶಾರ್ಪ್ ಎಲೆಕ್ಟ್ರಾನಿಕ್ಸ್, ಡ್ರೀಮ್ 11 ಸೇರಿದಂತೆ ಹಲವು ಬ್ರಾಂಡ್ ಪ್ರಮೋಶನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  ರೋಹಿತ್ ಶರ್ಮಾ ಎಂಡೋರ್ಸ್‌ಮೆಂಟ್, ಜಾಹೀರಾತುಗಳಿಂದ ವಾರ್ಷಿಕವಾಗಿ ಬರೋಬ್ಬರಿ 75 ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ.

ಇದನ್ನೂ ಓದಿ: ನಂಬಿ ಬಂದ ಸ್ನೇಹಿತನನ್ನು ನಡು ದಾರಿಯಲ್ಲಿ ಬಿಟ್ಟ ರೋಹಿತ್!

ರೋಹಿತ್ ಶರ್ಮಾ ಪ್ರತಿ ವರ್ಷ ಕನಿಷ್ಠ 75 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ರೋಹಿತ್ ಆದಾಯದಲ್ಲಿ ಏರಿಕೆಯಾಗುತ್ತಲೇ ಇದೆ. ರೋಹಿತ್ ಶರ್ಮಾ ಜಾಹೀರಾತು, ಪ್ರಮೋಶನ್, ಶೂಟ್ ಸೇರಿದಂತೆ ಯಾವುದೇ ಎಂಡೋರ್ಸ್‌ಮೆಂಟ್‌ಗೆ ಪ್ರತಿ ದಿನ 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. 

ಇದನ್ನೂ ಓದಿ: ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!.

ರೋಹಿತ್ ಶರ್ಮಾ 20ಕ್ಕೂ ಹೆಚ್ಚು ಬ್ರ್ಯಾಂಡ್ ಪ್ರಮೋಶನ್ ಮಾಡುತ್ತಿದ್ದಾರೆ. ಹೀಗಾಗಿ 32ರ ಹರೆಯದ ರೋಹಿತ್ ಶರ್ಮಾ ವಾರ್ಷಿಕವಾಗಿ 75 ಕೋಟಿ ರೂಪಾಯಿಗಳಿಸುತ್ತಿದ್ದಾರೆ. ಇದರಲ್ಲಿ ಬಿಸಿಸಿಐ ಸಂಭಾವನೆ, ಪಂದ್ಯದ ಸಂಭಾವನೆ, ಪ್ರಶಸ್ತಿ ಮೊತ್ತ ಸೇರಿಲ್ಲ ಎಂದು ರೋಹಿತ್ ಶರ್ಮಾ ಜಾಹೀರಾತು ಹಾಗೂ ಎಂಡೋರ್ಸ್‌ಮೆಂಟ್ ನಿಭಾಯಿಸುವ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ಹೇಳಿದೆ. 

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!