ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಚೊಚ್ಚಲ ಟೆಸ್ಟ್ ತ್ರಿಶತಕ ಬಾರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಅಜೇಯ 335 ರನ್ ಬಾರಿಸಿದ್ದು, ಇದೀಗ ಆಸೀಸ್ 3 ವಿಕೆಟ್ ಕಳೆದುಕೊಂಡು 589 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಅಡಿಲೇಡ್[ನ.30]: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[335] ಪಾಕಿಸ್ತಾನ ವಿರುದ್ಧ ಅಡಿಲೇಡ್’ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ತ್ರಿಶತಕ ಬಾರಿಸಿದ್ದಾರೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ದಾಖಲಾಗಿದೆ. ಇದೀಗ 589 ರನ್ ಬಾರಿಸಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಮುಷ್ತಾಕ್ ಅಲಿ ಟ್ರೋಫಿ: ರಾಹುಲ್-ಪಡಿಕ್ಕಲ್ ಅಬ್ಬರ, ಫೈನಲ್ ಪ್ರವೇಶಿಸಿದ ಕರ್ನಾಟಕ
ಮೊದಲ ದಿನದಾಟದ ಅಂತ್ಯಕ್ಕೆ 166 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಾರ್ನರ್, ಪಾಕ್ ಬೌಲರ್’ಗಳ ಮೇಲೆ ಸವಾರಿ ಮಾಡಿದರು. 389 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು. ಈ ದೀರ್ಘ ಇನಿಂಗ್ಸ್’ನಲ್ಲಿ 37 ಮನಮೋಹಕ ಬೌಂಡರಿಗಳು ಸೇರಿದ್ದವು. ಡಿಸೆಂಬರ್ 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಬಾರಿಸಿದ ಬಳಿಕ ಉಳಿದ್ಯಾವ ಕ್ರಿಕೆಟಿಗರೂ 275 ರನ್’ಗಳ ಸಮೀಪವೂ ಬಂದಿರಲಿಲ್ಲ. ಆದರೀಗ ವಾರ್ನರ್ ತ್ರಿಶತಕ ಸಿಡಿಸುವ ಮೂಲಕ ಬರೋಬ್ಬರಿ 3 ವರ್ಷಗಳ ಬಳಿಕ ಸುದೀರ್ಘ ಇನಿಂಗ್ಸ್ ಕಟ್ಟಿದ್ದಾರೆ.
ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!
ಡೇವಿಡ್ ವಾರ್ನರ್ ಆಕರ್ಷಕ ತ್ರಿಶತಕ[335*] ಹಾಗೂ ಮಾರ್ನಸ್ ಲಬುಶೇನ್ ಸಮಯೋಚಿತ [162] ಶತಕದ ನೆರವಿನಿಂದ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 589 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಅಂದಹಾಗೆ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತ ಕೂಡಾ ಹೌದು.
ವಾರ್ನರ್ ದಾಖಲೆಯ ಝಲಕ್ ಇಲ್ಲಿದೆ ನೋಡಿ...
3 ವರ್ಷಗಳ ಬಳಿಕ ದಾಖಲಾಯ್ತು ತ್ರಿಶತಕ ಚೊಚ್ಚಲ ತ್ರಿಶತಕ
* 2016ರ ಡಿಸೆಂಬರ್‌ನಲ್ಲಿ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ತ್ರಿಶತಕ ಬಾರಿಸಿದ್ದರು.
* ಆಡಿಲೇಡ್ ಓವಲ್ ಮೈದಾನದಲ್ಲಿ ದಾಖಲಾದ ಮೊದಲ ತ್ರಿಶತಕ
* ಡೇ&ನೈಟ್ ಟೆಸ್ಟ್ ಪಂದ್ಯದಲ್ಲಿ ದಾಖಲಾದ 2ನೇ ತ್ರಿಶತಕ[1st ಅಜರ್ ಅಲಿ]
*ಪಾಕ್ ಎದುರು ತ್ರಿಶತಕ ಬಾರಿಸಿದ ನಾಲ್ಕನೇ ಕ್ರಿಕೆಟಿಗ
[ಈ ಮೊದಲು ಗ್ಯಾರಿ ಸೋಬರ್ಸ್[1958] ಮಾರ್ಕ್ ಟೇಲರ್[1998] ಸೆಹ್ವಾಗ್[2004]]
*ಆಸ್ಟ್ರೇಲಿಯಾ ಪರ ತ್ರಿಶತಕ ಬಾರಿಸಿದ 7ನೇ ಕ್ರಿಕೆಟಿಗ
[ಈ ಮೊದಲು ಸರ್. ಡಾನ್ ಬ್ರಾಡ್ಮನ್[2 ಬಾರಿ], ಬಾಬ್ ಸಿಮ್ಸನ್,ಬಾಬ್ ಕೌಪರ್, ಮಾರ್ಕ್ ಟೇಲರ್, M ಹೇಡನ್, M ಕ್ಲಾರ್ಕ್]
* ಆಸ್ಟ್ರೇಲಿಯಾ ಪರ ತ್ರಿಶತಕ ಬಾರಿಸಿದ 7ನೇ ಕ್ರಿಕೆಟಿಗ
ಈ ಮೊದಲು ಸರ್ ಡಾನ್ ಬ್ರಾಡ್ಮನ್[2 ಸಲ], ಬಾಬ್ ಸಿಮ್ಸನ್, ಬಾಬ್ ಕೌಪರ್, ಮಾರ್ಕ್ ಟೇಲರ್, ಮ್ಯಾಥ್ಯೂ ಹೇಡನ್, ಮೈಕೆಲ್ ಕ್ಲಾರ್ಕ್
* ಬ್ರಾಡ್ಮನ್[334] ಟೇಲರ್[334*] ದಾಖಲೆ ಮುರಿದ ವಾರ್ನರ್ 335* [ಆಸೀಸ್ ಪರ ಗರಿಷ್ಠ ರನ್ ಮ್ಯಾಥ್ಯೂ ಹೇಡನ್ Zim 380)
* ಪಾಕ್ ವಿರುದ್ಧ ಎರಡನೇ ಗರಿಷ್ಠ ಸ್ಕೋರರ್ ವಾರ್ನರ್ 335*[ಮೊದಲು ಗ್ಯಾರಿ ಸೋಬರ್ಸ್ 365*]
* ಪಾಕ್ ವಿರುದ್ಧ ತ್ರಿಶತಕ ಬಾರಿಸಿದ ನಾಲ್ಕನೇ ಆಸೀಸ್ ಆರಂಭಿಕ
* ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 16ನೇ ಆರಂಭಿಕ ಬ್ಯಾಟ್ಸ್’ಮನ್