ಕೋವಿಡ್‌ನಿಂದ ರಿಷಭ್ ಪಂತ್‌ ಗುಣಮುಖ: ಬಯೋಬಬಲ್‌ ಪ್ರವೇಶ

By Suvarna NewsFirst Published Jul 23, 2021, 1:03 PM IST
Highlights

* ಕೋವಿಡ್‌ 19ನಿಂದ ಗುಣಮುಖರಾದ ರಿಷಭ್‌ ಪಂತ್‌

* ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ವಿಕೆಟ್‌ ಕೀಪರ್‌ಗೆ ಕೋವಿಡ್ ದೃಢ

* ಕೋಚ್‌ ರವಿಶಾಸ್ತ್ರಿ, ಪಂತ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಡರ್ಹಮ್(ಜು.23)‌: ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಗುರುವಾರ ಭಾರತ ತಂಡದ ಬಯೋ ಬಬಲ್‌ ಪ್ರವೇಶಿಸಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡಿರುವ ಅವರು, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಲು ಫಿಟ್‌ ಆಗಿದ್ದಾರೆ. 

ಹಲ್ಲುನೋವಿನ ಕಾರಣ ಡೆಂಟಿಸ್ಟ್‌ ಬಳಿ ತೆರಳಿದ್ದಾಗ ಅವರಿಗೆ ಕೊರೋನಾ ಸೋಂಕು ತಗುಲಿರಬಹುದು ಎನ್ನಲಾಗಿದೆ. 10 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿದ ಪಂತ್‌, 2 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದರು. ಎರಡೂ ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಕಾರ್ಡಿಯೋ ಪರೀಕ್ಷೆಗೆ ಒಳಗಾದರು. ಅವರ ಫಿಟ್ನೆಸ್‌ ಪರೀಕ್ಷೆ ಪೂರ್ಣಗೊಂಡ ಬಳಿಕ ತಂಡವನ್ನು ಸೇರಿಕೊಳ್ಳಲು ಅನುಮತಿ ನೀಡಲಾಯಿತು.

हार 🌺 के बाद ही जीत है और जितने वाले को कहते है बाज़ीगर😎🤣
Thrilled to be back. Thank you for this grand welcome pic.twitter.com/qy8QN2waqv

— Rishabh Pant (@RishabhPant17)

ಭಾರತ-ಕೌಂಟಿ ಇಲೆವನ್‌ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಕೋವಿಡ್ ದೃಢಪಟ್ಟಿದ್ದರಿಂದ ಕೌಂಟಿ ಇಲೆವನ್ ವಿರುದ್ದ ಮೂರು ದಿನಗಳ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಪಂತ್‌ ಬದಲಿಗೆ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್‌. ರಾಹುಲ್‌ ವಿಕೆಟ್ ಕೀಪರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅಭ್ಯಾಸ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದೆ.

Covid return back in the house. Brilliant. Noisier dressing room already pic.twitter.com/VQQCMiNKDq

— Ravi Shastri (@RaviShastriOfc)

ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದೆ. ಈ ಸರಣಿಯಿಂದಲೇ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ.
 

click me!