Rishabh Pant  

(Search results - 142)
 • Team India T20 Cricket vice captaincy KL Rahul Rishabh Pant and Jasprit Bumrah in the fray kvn

  CricketSep 18, 2021, 11:34 AM IST

  ಟೀಂ ಇಂಡಿಯಾ ಟಿ20 ಉಪನಾಯಕತ್ವಕ್ಕೆ ಮೂವರು ಕ್ರಿಕೆಟಿಗರ ಪೈಪೋಟಿ..!

  ಉಪನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಮೂವರು ಆಟಗಾರರ ಹೆಸರು ಕೇಳಿಬರುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರಿಗೂ ಐಪಿಎಲ್‌ ತಂಡ ಮುನ್ನಡೆಸಿದ ಅನುಭವವಿದೆ.

 • Official Announcement Rishabh Pant to continue as Delhi Capitals captain in IPL 2021 kvn

  CricketSep 18, 2021, 9:20 AM IST

  IPL 2021 ಡೆಲ್ಲಿ ಕ್ಯಾಪಿಟಲ್ಸ್‌ ನಾಯಕನಾಗಿ ರಿಷಭ್ ಪಂತ್‌ ಮುಂದುವರಿಕೆ

  2021ರ ಐಪಿಎಲ್‌ನ ಮೊದಲ ಭಾಗದಲ್ಲಿ ಕಾಯಂ ನಾಯಕ ಶ್ರೇಯಸ್‌ ಅಯ್ಯರ್‌ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ, ರಿಷಭ್‌ರನನ್ನು ನಾಯಕರನ್ನಾಗಿ ನೇಮಿಸಿತ್ತು. ಇದೀಗ ಗಾಯದಿಂದ ಶ್ರೇಯಸ್‌ ಚೇತರಿಸಿಕೊಂಡಿದ್ದ ತಂಡವನ್ನು ಕೂಡಿಕೊಂಡಿದ್ದಾರೆ. ಈ ವೇಳೆ ಮತ್ತೆ ಶ್ರೇಯಸ್‌ರನ್ನೇ ನಾಯಕರನ್ನಾಗಿ ಮುಂದುವರೆಸುವುದೇ ಎಂಬ ಕುತೂಹಲ ಮೂಡಿತ್ತು.
   

 • Rohit Sharma KL Rahul and Rishabh Pant are in Line For Team India T20 Captaincy kvn

  CricketSep 17, 2021, 3:55 PM IST

  ಯಾರಾಗಲಿದ್ದಾರೆ ಟೀಂ ಇಂಡಿಯಾ ಮುಂದಿನ ಟಿ20 ಕ್ಯಾಪ್ಟನ್‌..?

  ದುಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ, ಉಪ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಚರ್ಚಿಸಿ, ಅವರ ಸಲಹೆ ಪಡೆದು ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ ಎಂದು ವಿರಾಟ್‌ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾಗೂ ತಮ್ಮ ನಿರ್ಧಾರ ತಿಳಿಸಿರುವುದಾಗಿ ತಿಳಿಸಿದ್ದಾರೆ. ಟೀಂ ಇಂಡಿಯಾ ಮೂವರು ಆಟಗಾರರ ನಡುವೆ ಟಿ20 ನಾಯಕತ್ವಕ್ಕೆ ಸ್ಪರ್ಧೆಯಿದೆ ಎನ್ನಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಮುಂದಿನ ಟಿ20 ನಾಯಕ ಯಾರಾಗಬಹುದು ಎನ್ನುವ ಚರ್ಚೆಯೂ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಜೋರಾಗಿದೆ.
   

 • Ind vs Eng Leeds Test Ball thrown at Mohammed Siraj by Headingley crowd Says Rishabh Pant kvn

  CricketAug 27, 2021, 12:47 PM IST

  Ind vs Eng ಲೀಡ್ಸ್ ಟೆಸ್ಟ್: ವೇಗಿ ಸಿರಾಜ್‌ ಮೇಲೆ ಬಾಲ್‌ ಎಸೆದ ಇಂಗ್ಲೆಂಡ್‌ ಪ್ರೇಕ್ಷಕರು!

  ‘ಫೀಲ್ಡಿಂಗ್‌ ವೇಳೆ ಕೆಲ ಪ್ರೇಕ್ಷಕರು ಸಿರಾಜ್‌ ಮೇಲೆ ಬಾಲ್‌ ಎಸೆದಿದ್ದಾರೆ. ಇದರಿಂದ ಕೊಹ್ಲಿ ನಿರಾಸೆಗೊಂಡಿದ್ದಾರೆ. ನೀವು ಏನೇ ಮಾಡಿ, ಆದರೆ ಫೀಲ್ಡರ್‌ಗಳ ಮೇಲೆ ವಸ್ತುಗಳನ್ನು ಎಸೆಯುವುದು ತಪ್ಪು. ಇದು ಕ್ರಿಕೆಟ್‌ಗೆ ಒಳ್ಳೆಯದ್ದಲ್ಲ’ ಎಂದು ಪಂತ್ ಹೇಳಿದ್ದಾರೆ.

 • Team India Cricketer Rishabh Pant returns to Team India enter Bio bubble Coach Ravi Shastri give warm welcome kvn

  CricketJul 23, 2021, 1:03 PM IST

  ಕೋವಿಡ್‌ನಿಂದ ರಿಷಭ್ ಪಂತ್‌ ಗುಣಮುಖ: ಬಯೋಬಬಲ್‌ ಪ್ರವೇಶ

  ಹಲ್ಲುನೋವಿನ ಕಾರಣ ಡೆಂಟಿಸ್ಟ್‌ ಬಳಿ ತೆರಳಿದ್ದಾಗ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. 10 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿದ ಪಂತ್‌, 2 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದರು. ಎರಡೂ ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಕಾರ್ಡಿಯೋ ಪರೀಕ್ಷೆಗೆ ಒಳಗಾದರು. ಅವರ ಫಿಟ್ನೆಸ್‌ ಪರೀಕ್ಷೆ ಪೂರ್ಣಗೊಂಡ ಬಳಿಕ ತಂಡವನ್ನು ಸೇರಿಕೊಳ್ಳಲು ಅನುಮತಿ ನೀಡಲಾಯಿತು.
   

 • Impossible To Wear Mask All The Time Says BCCI President Sourav Ganguly kvn

  CricketJul 17, 2021, 1:26 PM IST

  ಆಟಗಾರರು ಯಾವಾಗಲೂ ಮಾಸ್ಕ್‌ ಧರಿಸಲು ಆಗಲ್ಲ: ಸೌರವ್ ಗಂಗೂಲಿ

  ಶುಭ್‌ಮನ್‌ ಗಿಲ್‌ ಗಾಯಕ್ಕೆ ಒಳಗಾಗಿ ತಂಡದಿಂದ ಹೊರಬಿದ್ದಿರುವುದರಿಂದ ಇಂಗ್ಲೆಂಡ್ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಯಾರು ರೋಹಿತ್ ಶರ್ಮಾ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರವ್, ಈ ವಿಚಾರಗಳಿಗೆ ನಾನು ಮಧ್ಯ ಪ್ರವೇಶಿಸುವುದಿಲ್ಲ, ಇದನ್ನೆಲ್ಲ ತಂಡದ ಆಡಳಿತ ಮಂಡಳಿ ತೀರ್ಮಾನಿಸಲಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

 • Team india throwdown specialist Dayanand Garani tests corona positive in England after Rishabh pant ckm

  CricketJul 15, 2021, 5:48 PM IST

  ಭಾರತ-ಇಂಗ್ಲೆಂಡ್ ಸರಣಿಗೆ ಸಂಕಷ್ಟ; ಪಂತ್ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾಫ್‌ಗೆ ಕೊರೋನಾ!

  • ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಂಗ್ಲರ ನಾಡಿನಲ್ಲಿ ಬೀಡುಬಟ್ಟಿದೆ ಟೀಂ ಇಂಡಿಯಾ
  • ಸರಣಿ ಆಯೋಜನೆಗೆ ಬಹುದೊಡ್ಡ ಅಡ್ಡಿ, ಪಂತ್ ಬೆನ್ನಲ್ಲೇ ಭಾರತ ತಂಡದ ಸ್ಟಾಫ್‌ಗೆ ಕೊರೋನಾ
  • ಆಗಸ್ಟ್ 4 ರಿಂದ ಟೆಸ್ಟ್ ಸರಣಿ ಆರಂಭ, ಇದರ ನಡುವೆ ಒಬ್ಬೊಬ್ಬರಿಗೆ ಕೊರೋನಾ ಸೋಂಕು
 • Team India Wicket keeper Batsman Rishabh Pant Tests Positive For COVID-19 In England Says Report kvn

  CricketJul 15, 2021, 3:00 PM IST

  ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

  ಲಂಡನ್‌: ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿಸಿ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಸದಸ್ಯರೊಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಯ್ದ ಕೌಂಟಿ ಆಟಗಾರರನ್ನೊಳಗೊಂಡ ತಂಡದ ಎದುರು ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದ್ದ ಭಾರತ ತಂಡಕ್ಕೆ ಇದೀಗ ಆಘಾತ ಎದುರುರಾಗಿದೆ. ಅಷ್ಟಕ್ಕೂ ಕೋವಿಡ್ 19 ಸೋಂಕು ತಗುಲಿಸಿಕೊಂಡ ಟೀಂ ಇಂಡಿಯಾ ಆಟಗಾರ ಯಾರು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
   

 • Rishabh Pant to Mohammed Siraj here are young Indian cricketers and their latest cars

  CricketJun 27, 2021, 4:16 PM IST

  ರಿಷಭ್‌ ಪಂತ್‌ - ಸಿರಾಜ್‌ : ಯುಂಗ್‌ ಕ್ರಿಕೆಟಿಗರ ಲಕ್ಷುರಿ ಕಾರುಗಳು!

  ಟೀಮ್‌ಇಂಡಿಯಾದ ಆಟಗಾರರು ಜನಪ್ರಿಯತೆ ಹಾಗೂ ಗಳಿಕೆ ಎರಡರಲ್ಲೂ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಆಟಗಾರ ಪರಿಶ್ರಮ ಹಾಗೂ ಸಾಧನೆಗೆ ಅನುಗುಣವಾಗಿ ಹೆಚ್ಚು ಹಣ, ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ. ಒಬ್ಬ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಲಕ್ಷಾಂತರ ಹಣ ಸಂಪಾದನೆ ಶುರಮಾಡುತ್ತಾನೆ.   ಕಳೆದ ಕೆಲವು ವರ್ಷಗಳಲ್ಲಿ ಅನೇಕ ಯುವ ಆಟಗಾರರು ಟೀಮ್‌ ಇಂಡಿಯಾಕ್ಕೆ ಸೇರ್ಪಡೆ ಆಗಿದ್ದು  ಸಖತ್‌ ಫೇಮಸ್‌ ಆಗಿದ್ದಾರೆ. ಅವರ ಆಟದ ಜೊತೆ ಲೈಫ್‌ಸ್ಟೈಲ್‌ ಸಹ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟ್ ತಂಡದ  ಯುವ ಆಟಗಾರ ಯಾವ ಕಾರುಗಳನ್ನು ಹೊಂದಿದ್ದಾರೆ ಗೊತ್ತಾ?

 • Ind vs NZ WTC Final Tim Southee Drops Rishabh Pant Catch in Southampton kvn

  CricketJun 23, 2021, 4:10 PM IST

  ಟಿಮ್‌ ಸೌಥಿ ಜೀವದಾನ: ರಿಷಭ್ ಪಂತ್ ಬಚಾವ್‌..!

  ಪಂತ್ 5 ರನ್‌ ಗಳಿಸಿದ್ದಾಗ ಜೇಮಿಸನ್‌ ಬೌಲಿಂಗ್‌ನಲ್ಲಿ ಬ್ಯಾಟ್ ಅಂಚು ಸವರಿದ ಚೆಂಡು ಎರಡನೇ ಸ್ಲಿಪ್‌ನಲ್ಲಿದ್ದ ಟಿಮ್ ಸೌಥಿ ಬಳಿ ಹೋಯಿತಾದರು, ಚೆಂಡಿನ ವೇಗವನ್ನು ಗ್ರಹಿಸಲಾರದೇ ಕ್ಯಾಚನ್ನು ಕೈಚೆಲ್ಲಿದರು. ಇದರಿಂದ ಪಂತ್‌ಗೆ ಜೀವದಾನ ಸಿಕ್ಕಂತಾಗಿದೆ.

 • Team India Cricketer Rohit Sharma Shares Pic With Rishabh Pant at Southampton kvn

  CricketJun 4, 2021, 9:21 AM IST

  ನಾವೀಗ ಸೌಥಾಂಪ್ಟನ್‌ನಲ್ಲಿದ್ದೇವೆಂದು ಪೋಸ್ ಕೊಟ್ಟ ರೋಹಿತ್-ಪಂತ್

  ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಸ್ಟೇಡಿಯಂನ ಬಾಲ್ಕನಿಯಲ್ಲಿ ನಿಂತು, ನಾವು ಸೌಥಾಂಪ್ಟನ್‌ನಲ್ಲಿದ್ದೇವೆ ಎಂದು ಪಂತ್ ಜತೆ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
   

 • Were Bollywood actress Sara Ali Khan and Cricketer Rishabh Pant dating once

  CricketMay 31, 2021, 4:05 PM IST

  ಬಾಲಿವುಡ್‌ನ ಈ ನಟಿ ಜೊತೆ ಡೇಟಿಂಗ್ ಮಾಡ್ತಾ ಇದ್ರಾ ಕ್ರಿಕೆಟಿಗ ರಿಷಬ್‌ ಪಂತ್‌?

  ಕ್ರಿಕೆಟಿಗೂ ಬಾಲಿವುಡ್‌ಗೂ ಬಹಳ ಹಳೆಯ ಸಂಬಂಧ. ಕ್ರಿಕೆಟ್ ತಾರೆಯರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್ ನಡೆಸುವುದು ಹೊಸದೇನಲ್ಲ. ಟೀಮ್‌ ಇಂಡಿಯಾದ ಯಂಗ್‌ ಪ್ರಾಮಿಸ್ಸಿಂಗ್‌ ಆಟಗಾರ ರಿಷಭ್ ಪಂತ್, ಐಪಿಎಲ್ 2018ರ ಸಮಯದಲ್ಲಿ ತಮ್ಮ ಆಟದ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ಹಾಗೇ ಅವರ ಪರ್ಸನಲ್‌ ಲೈಪ್‌ ಕೂಡ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ  ಪಂತ್‌ ಬಾಲಿವುಡ್‌ನ ನಟಿಯೊಂದಿಗೆ ಡೇಟ್‌ ಮಾಡುತ್ತಿರುವುದಾಗಿ ವರದಿಗಳು ಹೇಳಿದ್ದವು. ಯಾರಾದು ಆ ನಟಿ?

 • Team India Cricketer Rishabh Pant Gets First COVID 19 Vaccine kvn

  CricketMay 14, 2021, 11:13 AM IST

  ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ರಿಷಭ್‌ ಪಂತ್‌

  ನಾನಿಂದು ಮೊದಲ ಡೋಸ್ ಲಸಿಕೆ ಪಡೆದುಕೊಂಡೆ. ಯಾರೆಲ್ಲಾ ಲಸಿಕೆ ಪಡೆಯಲು ಅರ್ಹರಿದ್ದೀರೋ ಅವರೆಲ್ಲಾ ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ರಿಷಭ್‌ ಪಂತ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 • Former Cricketer Sunil Gavaskar predicts Rishabh Pant to become a successful captain kvn

  CricketMay 13, 2021, 5:16 PM IST

  ರಿಷಭ್ ಪಂತ್ ಯಶಸ್ವಿ ನಾಯಕನಾಗಲಿದ್ದಾರೆ: ಗವಾಸ್ಕರ್ ಭವಿಷ್ಯ

  ರಿಷಭ್ ಪಂತ್‌ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅತ್ಯದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಪಂತ್‌ ಬಳಿ ನಾಯಕತ್ವದ ಕಿಚ್ಚು ಇದೆ. ಅದನ್ನು ಬೆಳೆಯಲು ಬಿಟ್ಟರೆ ಮುಂದೆ ಸಹಜವಾಗಿಯೇ ಪ್ರಜ್ವಲಿಸಲಿದೆ. ಹೌದು, ಪಂತ್ ಕೂಡಾ ತಪ್ಪು ಮಾಡಬಹುದು. ಹಾಗಂತ ಯಾವ ನಾಯಕ ತಪ್ಪು ಮಾಡೊಲ್ಲ ಹೇಳಿ? ಎಂದು ಸ್ಪೋರ್ಟ್ಸ್‌ ಸ್ಟಾರ್‌ಗೆ ಬರೆದ ಲೇಖನದಲ್ಲಿ ರಿಷಭ್ ಪಂತ್‌ ನಾಯಕತ್ವದ ಗುಣಗಾನ ಮಾಡಿದ್ದಾರೆ.

 • ICC Test Rankings Team India Wicket keeper Batsman Rishabh Pant moves to 6th spot kvn

  CricketMay 6, 2021, 9:14 AM IST

  ಟೆಸ್ಟ್ ರ‍್ಯಾಂಕಿಂಗ್‌: ಮೊದಲ ಬಾರಿಗೆ ಟಾಪ್‌ 10ನಲ್ಲಿ ಪಂತ್‌ಗೆ ಸ್ಥಾನ

  ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಮಾರ್ಚ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ರಿಷಭ್ ಪಂತ್ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಪಂತ್ ಇದೀಗ ತಮ್ಮ ವೃತ್ತಿಜೀವನದ ಶ್ರೇಷ್ಠ 6ನೇ ಸ್ಥಾನ ಪಡೆದಿದ್ದಾರೆ.