ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಯಹತ್ಯೆ ಸುದ್ದಿಗೆ ಕೇಳುತ್ತಿದ್ದಂತೆ, ನಟ ಬದುಕುಳಿದರೆ ಸಾಕು ಎಂದು ಎಲ್ಲರು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥೀಸುವ ಮೊದಲೇ ಸುಶಾಂತ್ ಎಲ್ಲರನ್ನೂ ಅಗಲಿದ್ದರು. ಸುಶಾಂತ್ ದಿಢೀರ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋದೂ ಇನ್ನೂ ನಿಗೂಢ. ಆದರೆ ಸುಶಾಂತ್ ಸಾವು ಟೀಂ ಇಂಡಿಯಾ ಕ್ರಿಕೆಟಿರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.
ಮುಂಬೈ(ಜೂ.14): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಅಭಿಮಾನಿಗಳನ್ನು ಮಾತ್ರವಲ್ಲ, ಬಹುತೇಕ ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ. ಸದಾ ಕ್ರೀಯಾಶೀಲವಾಗಿದ್ದ ಸುಶಾಂತ್ ಸಾವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು ಸಂತಾಪ ಸೂಚಿಸಿದ್ದಾರೆ. ಕ್ರಿಕೆಟಿಗರ ಜೊತೆ ನಿಕಟ ಸಂಪರ್ಕವಿದ್ದ ಸುಶಾಂತ್ ಸಾವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಘಾತ ತಂದಿದೆ.
ಧೋನಿ ಅನ್‌ಟೋಲ್ಡ್ ಸ್ಟೋರಿ ಹೇಳಿ ತನ್ನ ಕತೆ ಯಾರಿಗೂ ಹೇಳದೆ ಹೋದ ಸುಶಾಂತ್ !
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಸುಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಇಂತಹ ಘಟನೆಗಳು ಮರುಕಳಿಸದಿರಲಿ. ಭಾರತದ ಯುವ ಶಕ್ತಿಗೆ ಮಾನಸಿಕ ಆರೋಗ್ಯ ಹಾಗೂ ಸಲಹೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಶಾಂತ್‌ಗೆ ಆತ್ಮಹತ್ಯೆ: ಕ್ರಿಕೆಟ್ ತರಬೇತಿ ನೀಡಿದ ಕಿರಣ್ ಮೋರೆಗೆ ಆಘಾತ!...
ಸಚಿನ್ ತೆಂಡುಲ್ಕರ್
ಯುವ ಹಾಗೂ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಸಾವು ಆಘಾತ ತಂದಿದೆ. ಸುಶಾಂತ್ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಸುಶಾಂತ್ ಕುಟುಂಬ ಹಾಗೂ ಆಪ್ತರಿಗೆ ನೋವು ಭರಿಸುವ ಶಕ್ತಿ ನೀಡಲಿ
ವಿರಾಟ್ ಕೊಹ್ಲಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನೋವು ತಂದಿದೆ. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಗವಂತ ಸುಶಾಂತ್ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ನೀಡಲಿ
ರೋಹಿತ್ ಶರ್ಮಾ
ಸುಶಾಂತ್ ಸಾವಿನಿಂದ ಮನಸ್ಸು ತುಂಬಾ ನೋವಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ.
ಪಾಕಿಸ್ತಾನ ಕ್ರಿಕೆಟಿಗರಾದ ಶೋಯೆಬ್ ಮಲಿಕ್, ವಹಾಬ್ ರಿಯಾಜ್ ಸೇರಿದಂತೆ ಹಲವರು ಸುಶಾಂತ್ ಸಿಂಗ್ ರಜೂಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.