ಸುಶಾಂತ್‌ಗೆ ಆತ್ಮಹತ್ಯೆ: ಕ್ರಿಕೆಟ್ ತರಬೇತಿ ನೀಡಿದ ಕಿರಣ್ ಮೋರೆಗೆ ಆಘಾತ!

By Suvarna News  |  First Published Jun 14, 2020, 7:24 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಎಲ್ಲರಿಗೂ ಶಾಕ್ ನೀಡಿದೆ. ಅದರಲ್ಲೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಿರಣ್ ಮೋರೆಗೆ ತೀವ್ರ ಆಘಾತ ತಂದಿದೆ. ಮೋರೆ ಹಾಗೂ ಸುಶಾಂತ್ ಆತ್ಮೀಯತೆಗೆ ಹಲವು ಕಾರಣಗಳಿದೆ. ಅದರಲ್ಲಿ ಪ್ರಮುಖವಾಗಿರುವುದು ಎಂ.ಎಸ್.ಧೋನಿ, ಅನ್‌ಟೋಲ್ಡ್ ಸ್ಟೋರಿ.


ಮುಂಬೈ(ಜೂ.14): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿಭಾನ್ವಿತ ನಟ, ಎಲ್ಲಾ ಸವಾಲಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಮಗಧೀರ, ಆತ್ಮಹತ್ಯೆ ಕುರಿತು ಸಿನಿಮಾ ಮಾಡಿದ್ದ ಸುಶಾಂತ್, ಸೂಸೈಡ್ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಯುವ ನಟನ ಸಾವಿಗೆ ಪ್ರಧಾನಿ ಮೋದಿ, ಬಾಲಿವುಡ್ ಸೆಲೆಬ್ರೆಟಿ ಹಾಗೂ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ಕಿರಣ್ ಮೊರೆ ಆಘಾತ ವ್ಯಕ್ತಪಡಿಸಿದ್ದಾರೆ.

ಧೋನಿ ಅನ್‌ಟೋಲ್ಡ್ ಸ್ಟೋರಿ ಹೇಳಿ ತನ್ನ ಕತೆ ಯಾರಿಗೂ ಹೇಳದೆ ಹೋದ ಸುಶಾಂತ್ !

Tap to resize

Latest Videos

2016ರಲ್ಲಿ ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರ ಬಿಡುಗಡೆಯಾಗಿತ್ತು. ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ಅದ್ಭುತವಾಗಿ ಅಭಿನಯಿಸಿದ್ದರು. ಧೋನಿಯ ಎಲ್ಲಾ ಕ್ರಿಕೆಟ್ ಶೈಲಿಯನ್ನು ಕರಗತ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ರಜಪೂತ್‌ಗೆ ಕ್ರಿಕೆಟ್ ತರಬೇತಿ ನೀಡಿದ್ದು, ಇದೇ ಕಿರಣ್ ಮೋರೆ.

ಬಾಲಿವುಡ್ ನಟ ಸುಶಾಂತ್ ಸೂಸೈಡ್, ಮತ್ತೆ ಲಾಕ್‌ಡೌನ್‌ಗೆ ಮೋದಿ ಡಿಸೈಡ್?ಜೂ.14ರ ಟಾಪ್ 10 ಸುದ್ದಿ!...

ಬಾಲಿವುಡ್‌ ನಟನಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟು ಕಿರಣ್ ಮೋರೆ ಸೈ ಎನಿಸಿಕೊಂಡಿದ್ದರು. ಮೋರೆ ಹೇಳಿದ ಎಲ್ಲಾ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಸುಶಾಂತ್ ಬಹುಬೇಗನೆ ವೃತ್ತಿಪರ ಕ್ರಿಕಿಟಿನಷ್ಟು ಬ್ಯಾಟಿಂಗ್ ಪರ್ಫಾಮೆನ್ಸ್ ನೀಡಿದ್ದರು. ಇದೀಗ ಇದೇ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಾಗ ಕಿರಣ್ ಮೋರೆಗೆ ಆಘಾತವಾಗಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಆಘಾತ ತಂದಿದೆ. ಎಂ.ಎಸ್.ಧೋನಿ ಚಿತ್ರಕ್ಕಾಗಿ ಸುಶಾಂತ್ ಸಿಂಗ್‌ಗೆ ಕ್ರಿಕೆಟ್ ತರಬೇತಿ ನೀಡಿದ್ದೆ. ಇದೀಗ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹುಬೇಗನ ಅಗಲಿಬಿಟ್ಟೆ ಗೆಳೆಯ ಎಂದು ಕಿರಣ್ ಮೋರೆ ಟ್ವೀಟ್ ಮಾಡಿದ್ದಾರೆ.
 

click me!