ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಒಂದು ಪೋಸ್ಟ್‌ಗೆ 11.45 ಕೋಟಿ ರುಪಾಯಿ ಸಂಪಾದನೆ ವರದಿ
ಈ ವರದಿ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಕಿಂಗ್ ಕೊಹ್ಲಿ
ಇದು ನಿಜವಲ್ಲ ಎಂದು ಸ್ಪಷ್ಟನೆ ನೀಡಿದ ಟೀಂ ಇಂಡಿಯಾ ಮಾಜಿ ನಾಯಕ
ನವದೆಹಲಿ(ಆ.12): ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ 2023ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಮಾಡುವ ಪ್ರತಿ ಪೋಸ್ಟ್‌ಗೆ ಬರೋಬ್ಬರಿ 11.45 ಕೋಟಿ ರು. ಪಡೆಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಈ ವಿಚಾರ ವಿರಾಟ್ ಕೊಹ್ಲಿ ಗಮನಕ್ಕೆ ಬರುತ್ತಿದ್ದಂತೆಯೇ ಈ ಸುದ್ದಿ ಶುದ್ಧ ಸುಳ್ಳು ಎಂದು ಸ್ವತಃ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ಸಾಮಾಜಿಕ ಜಾಲತಾಣದಿಂದ ನಾನು ಸಂಪಾದಿಸುತ್ತಿರುವ ಮಾಹಿತಿಯು ನಿಜವಲ್ಲ ಎಂದು ಬರೆದುಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತಂತೆ ಎಕ್ಸ್ ಮಾಡಿರುವ(ಟೀಟ್) ವಿರಾಟ್ ಕೊಹ್ಲಿ, "ಇಲ್ಲಿಯವರೆಗೆ ನಾನು ನನ್ನ ಜೀವನದಲ್ಲಿ ಏನೆಲ್ಲಾ ಪಡೆದುಕೊಂಡಿದ್ದೇನೋ ಅದಕ್ಕೆ ನಾನು ಋಣಿಯಾಗಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಗಳಿಸುತ್ತಿದ್ದೇನೆ ಎನ್ನಲಾಗುವ ಸುದ್ದಿಯು ನಿಜವಲ್ಲ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲಾ ಗಾಳಿ ಸುದ್ದಿಗೆ ತೆರೆ ಬಿದ್ದಿದೆ.
While I am grateful and indebted to all that I’ve received in life, the news that has been making rounds about my social media earnings is not true. 🙏
— Virat Kohli (@imVkohli)
undefined
ವಿರಾಟ್ ಕೊಹ್ಲಿ 2023ರಲ್ಲಿ ಇನ್‌ಸ್ಟಾಗ್ರಾಂನಲ್ಲಿ (Virat Kohli Instagram Post) ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಮಾಡುವ ಪ್ರತಿ ಪೋಸ್ಟ್‌ಗೆ ಬರೋಬ್ಬರಿ 11.45 ಕೋಟಿ ರು. ಪಡೆಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು. ಕ್ರಿಕೆಟಿಗರ ಪೈಕಿ ಇದು ಗರಿಷ್ಠ ಎನಿಸಿದ್ದು, ಜಾಗತಿಕ ಮಟ್ಟದಲ್ಲಿ ಕ್ರೀಡಾಪಟುಗಳ ಪೈಕಿ 3ನೇ ಸ್ಥಾನದಲ್ಲಿರುವ ಕೊಹ್ಲಿ, ಒಟ್ಟಾರೆ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿತ್ತು.
2023ರ ಇನ್‌ಸ್ಟಾಗ್ರಾಂ ಶ್ರೀಮಂತ ಭಾರತೀಯ ಸೆಲಿಬ್ರಿಟಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ 25,52,69,526 ಫಾಲೋವರ್ಸ್ ಹೊಂದಿರುವ ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿದ್ದರೆ, ಖ್ಯಾತ ನಟಿ ಪ್ರಿಯಾಂಕ ಚೋಪ್ರಾ88,538,623 ಫಾಲೋವರ್ಸ್ ಹೊಂದುವ ಮೂಲಕ 29ನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ A+ ದರ್ಜೆಯನ್ನು ಹೊಂದಿದ್ದು, ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ ವಿರಾಟ್ ಕೊಹ್ಲಿ ಒಂದು ಪ್ರೊಮೋಷನ್ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 11+ ಕೋಟಿ ರುಪಾಯಿ ಜೇಬಿಸಿಗಿಳಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಕೂಡಾ ಥ್ರಿಲ್ ಆಗಿದ್ದರು. ಆದರೆ ಸ್ವತಃ ವಿರಾಟ್ ಕೊಹ್ಲಿಯೇ ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್ ಬೆಲೆ 100 ಕುಟುಂಬಗಳ ವರ್ಷದ ಆದಾಯ..!
ದಿಗ್ಗಜ ಫುಟ್ಬಾಲಿಗರಾದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ(Cristiano Ronaldo) ಹಾಗೂ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (Lionel Messi) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ರೊನಾಲ್ಡೋ ಪ್ರತಿ ಪೋಸ್ಟ್‌ಗೆ 26.75 ಕೋಟಿ ರು. ಪಡೆಯುತ್ತಿದ್ದು, ಮೆಸ್ಸಿ 21.49 ಕೋಟಿ ರು. ಗಳಿಸುತ್ತಿದ್ದಾರೆ ಎಂದು ಸಹಾ ವರದಿಯಾಗಿತ್ತು. ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ 60 ಕೋಟಿ(600 ಮಿಲಿಯನ್) ಹಿಂಬಾಲಕರನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎನ್ನುವ ದಾಖಲೆಯನ್ನು ರೊನಾಲ್ಡೋ ಬರೆದಿದ್ದಾರೆ. ಮೆಸ್ಸಿಗೆ 48.2, ಕೊಹ್ಲಿಗೆ 25.6 ಕೋಟಿ ಹಿಂಬಾಲಕರಿದ್ದಾರೆ.
ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ: ಟೀಂ ಇಂಡಿಯಾ(Team India) ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಂಡ ಬಳಿಕ ಸುಮಾರು ಒಂದು ತಿಂಗಳ ಕಾಲ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಮಹತ್ವದ ಏಷ್ಯಾಕಪ್ ಟೂರ್ನಿಯ ವೇಳೆಗೆ ಭಾರತ ಕ್ರಿಕೆಟ್ ತಂಡ ಕೂಡಿಕೊಳ್ಳಲಿದ್ದಾರೆ.