INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

Published : Oct 13, 2019, 03:14 PM ISTUpdated : Oct 14, 2019, 06:46 PM IST
INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

ಸಾರಾಂಶ

ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಫಾಲೋ ಆನ್‌ಗೆ ತುತ್ತಾಗಿದ್ದ ಸೌತ್ ಆಫ್ರಿಕಾ 2ನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲಿಲ್ಲ. ಭಾರತೀಯರ ಬೌಲರ್‌ಗಳ ಅದ್ಭುತ ದಾಳಿಗೆ ಸೌತ್ ಆಫ್ರಿಕಾ ತತ್ತರಿಸಿತು.  

ಪುಣೆ(ಅ.13): ವಿಶಾಪಟ್ಟಣಂದಲ್ಲಿ ಗೆಲುವು ಸಾಧಿಸಿ ಪುಣೆಗೆ ಆಗಮಿಸಿದ್ದ ವಿರಾಟ್ ಕೊಹ್ಲಿ ಸೈನ್ಯ ಗೆಲುವಿನ ಓಟ ಮುಂದುವರಿಸಿದೆ.  ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 137 ರನ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯದ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಗೆದ್ದುಕೊಂಡಿದೆ. 

 

ಇದನ್ನೂ ಓದಿ: 22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

ಪುಣೆ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 601  ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಮಯಾಂಕ್ ಅಗರ್ವಾಲ್ ಶತಕ, ವಿರಾಟ್ ಕೊಹ್ಲಿ ದ್ವಿಶತಕ, ರವೀಂದ್ರ ಜಡೇಜಾ 91, ಚೇತೇಶ್ವರ್ ಪೂಜಾರ 58 ಹಾಗೂ ಅಜಿಂಕ್ಯ ರಹಾನೆ 59 ರನ್ ಸಿಡಿಸಿದ್ದರು.

"

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ 275 ರನ್‌ಗೆ ಆಲೌಟ್ ಆಗೋ ಮೂಲಕ ಫಾಲೋ ಆನ್‌ಗೆ ತುತ್ತಾಯಿತು. ಆರ್ ಅಶ್ವಿನ್ 4 ಹಾಗೂ ಉಮೇಶ್ ಯಾದವ್ 3 ವಿಕೆಟ್ ಕಬಳಿಸಿದ್ದರು. ನಾಲ್ಕನೇ ದಿನದಲ್ಲಿ ಫಾಲೋ ಆನ್ ಹೇರಿದ ಭಾರತ, ಮತ್ತೆ ಸೌತ್ ಆಫ್ರಿಕಾ ತಂಡಕ್ಕೆ ಬ್ಯಾಟಿಂಗ್ ನೀಡಿತು.

2ನೇ ಇನಿಂಗ್ಸ್‌ನಲ್ಲೂ ಸೌತ್ ಆಫ್ರಿಕಾ ಚೇತರಿಸಿಕೊಳ್ಳಲಿಲ್ಲ. ರವೀಂದ್ರಲ ಜಡೇಜಾ, ಉಮೇಶ್ ಯಾದವ್ ಮಿಂಚಿನ ದಾಳಿಗೆ ಸೌತ್ ಆಫ್ರಿಕಾ ನಲುಗಿತು. ಹೀಗಾಗಿ 189 ರನ್‌ಗಳಿಗೆ ಸೌತ್ ಆಫ್ರಿಕಾ ಆಲೌಟ್ ಆಯಿತು. ಈ ಮೂಲಕ ಇನಿಂಗ್ಸ್ ಹಾಗೂ 137  ರನ್ ಭರ್ಜರಿ ಗೆಲುವು ಸಾಧಿಸಿತು. 2-0 ಅಂತರದಿಂದ ಸರಣಿ ಗೆದ್ದ ಭಾರತ ಇದೀಗ ಕ್ಲೀನ್ ಸ್ವೀಪ್‌ನತ್ತ ಚಿತ್ತ ಹರಿಸಿದೆ.

ಅಕ್ಟೋಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ