
ಬೆಂಗಳೂರು(ಡಿ.30): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಆ ಮೂಲಕ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲೋ ಕನಸು ಕನಸಾಗೆ ಉಳಿದಿದೆ. ಆದ್ರೆ, ಈ ಹೀನಾಯ ಸೋಲಿಗೆ ಕಾರಣಗಳೇನು ಗೊತ್ತಾ..? ಈ ನಾಲ್ಕು ತಪ್ಪುಗಳೇ ರೋಹಿತ್ ಶರ್ಮಾ ಪಡೆಯನ್ನ ಸೋಲಿನ ಸುಳಿಯಲ್ಲಿ ಮುಳುಗಿಸಿದ್ವು. ಯಾವು ಆ ತಪ್ಪಗಳು ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!
ಟೀಂ ಇಂಡಿಯಾ ಸೋಲಿಗೆ ಈ ವೈಫಲ್ಯಗಳೇ ಕಾರಣ..!
ಯೆಸ್, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕನ್ನೋ ಕನಸು ಕನಸಾಗೇ ಉಳಿದಿದೆ. ಹರಿಣಗಳ ನಾಡಲ್ಲಿ ಟೀಂ ಇಂಡಿಯಾಗೆ ಮತ್ತೊಮ್ಮೆ ನಿರಾಸೆಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ರೋಹಿತ್ ಶರ್ಮಾ ಪಡೆಯ ಈ ವೈಫಲ್ಯಗಳೇ ಕಾರಣ. ಎರಡನೇ ಪಂದ್ಯದಲ್ಲಿ ಈ ತಪ್ಪುಗಳಿಂದ ಪಾಠ ಕಲಿಯಬೇಕು. ಇಲ್ಲವಾದ್ರೆ ವೈಟ್‌ವಾಶ್ ಮುಖಭಂಗ ಫಿಕ್ಸ್.
ರಾಹುಲ್ ಜಿಯು-ಜಿತ್ಸು ಆಟ ನೋಡಿ ಭಜರಂಗ್ ಪೂನಿಯಾ ಶಾಕ್! ವಿಡಿಯೋ ವೈರಲ್
ಎರಡೂ ಇನ್ನಿಂಗ್ಸ್‌ಗಳಲ್ಲೂ ಓಪನರ್ಗಳು ಫೇಲ್..!
ಹೌದು, ಓಪನರ್ಗಳಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಎರಡೂ ಇನ್ನಿಂಗ್ಸ್ಗಳಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿದ್ರು. ತಂಡಕ್ಕೆ ಉತ್ತಮ ಅರಂಭ ಒದಗಿಸುವಲ್ಲಿ ವಿಫಲರಾದ್ರು. ಇದ್ರಿಂದ ನಂತರ ಬಂದ ಬ್ಯಾಟರ್ಸ್ ಒತ್ತಡದಲ್ಲೇ ಬ್ಯಾಟ್ ಬೀಸಬೇಕಾಯ್ತು. ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ಫ್ಲಾಪ್ ಶೋ ಮುಂದುವರಿಸಿದ್ರು. ವೆಸ್ಟ್ ಇಂಡೀಸ್ ಸರಣಿಯಲ್ಲಿ ಮಿಂಚಿದ್ದ ಜೈಸ್ವಾಲ್, ಈ ಬಾರಿ ನಿರಾಸೆ ಮೂಡಿಸಿದ್ರು. ಬವುಮಾ ಪಡೆ ಡೆಡ್ಲಿ ಬೌಲಿಂಗ್ ದಾಳಿಯನ್ನ ಎದುರಿಸುವಲ್ಲಿ ವಿಫಲರಾದ್ರು.
ಒಂದೇ ಒಂದು ಬಿಗ್ ಪಾರ್ಟ್ನರ್‌ಶಿಪ್ ಬರಲಿಲ್ಲ..!
ಟೆಸ್ಟ್ ಮ್ಯಾಚ್ ಅಂದ್ರೇನೆ ಜೊತೆಯಾಟ. ಆದ್ರೆ, ಇಡೀ ಪಂದ್ಯದಲ್ಲಿ ಟೀಮ್ ಇಂಡಿಯಾದಿಂದ ಒಂದೇ ಒಂದು ಬಿಗ್ ಪಾರ್ಟ್ನರ್‌ಶಿಪ್ ಬರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ರಾಹುಲ್ ಟೇಲೆಂಡರ್ಸ್ ಜೊತೆಗೂಡಿ ತಂಡದ ಮೊತ್ತವನ್ನ 240ರ ಗಡಿ ದಾಟಿಸಿದ್ರು. ಇನ್ನು 2ನೇ ಇನ್ನಿಂಗ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕ್ರೀಸ್ಗೆ ಬಂದ ಬ್ಯಾಟರ್ಸ್ ಪಿಚ್ ಕಂಡೀಷ್‌ನ್‌ಗೆ ತಕ್ಕಂತೆ ಬ್ಯಾಟ್ ಬೀಸುವಲ್ಲಿ ವಿಫಲರಾದ್ರು. ಟೆಸ್ಟ್‌ನಲ್ಲಿ ದೊಡ್ಡ ಜೊತೆಯಾಟ ಬಂದ್ರೆ ಮಾತ್ರ ಎದುರಾಳಿ ಸೈನ್ಯದ ಮೇಲೆ ಕೌಂಟರ್ ಅಟ್ಯಾಕ್ ಮಾಡಲು ಸಾಧ್ಯ.
ಟೀಂ ಇಂಡಿಯಾಗೆ ಶುರುವಾಗಿದೆ ವೇಗಿಗಳ ಕೊರತೆ! ಹೀಗಾಗಲು ಕಾರಣವೇನು?
ವರ್ಕೌಟ್ ಆಗದ ಬೌಲಿಂಗ್ ಕಾಂಬಿನೇಷನ್..!
ಬೌಲರ್ಗಳ ಪಾಲಿಗೆ ಸ್ವರ್ಗವಾಗಿದ್ದ ಸೆಂಚುರಿಯನ್ ಪಿಚ್ ಮೇಲೆ ಆಫ್ರಿಕಾ ಬೌಲರ್ಸ್ ಅಬ್ಬರಿಸಿದ್ರು. ಆದ್ರೆ, ಭಾರತದ ಬೌಲರ್ಸ್ ಮಾತ್ರ ಫೇಲ್ ಆದ್ರು. ತಂಡದಲ್ಲಿ ಅನುಭವಿ ಮೊಹಮ್ಮದ್ ಶಮಿ ಇಲ್ಲದ ಕೊರತೆ ಎದ್ದು ಕಾಣಿಸ್ತು. ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಧಮ್ಮೇ ಇರಲಿಲ್ಲ. ಇದ್ರಿಂದ ಬೌಲಿಂಗ್ ಭಾರವೆಲ್ಲಾ ಬುಮ್ರಾ ಮತ್ತು ಸಿರಾಜ್ ಮೇಲೆ ಬಿತ್ತು. ಸ್ಪಿನ್ನರ್ ಅಶ್ವಿನ್ ತಂಡದಲ್ಲಿದ್ದು, ಇಲ್ಲದಂತಿದ್ರು. ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ತಂಡಕ್ಕೆ ಆಸರೆಯಾಗಲಿಲ್ಲ. ಅಸಲಿಗೆ ವೇಗಿಗಳಿಗೆ ಅನುಕೂಲವಾಗಿದ್ದ ಅಶ್ವಿನ್ರನ್ನ ಆಡಿಸಿದ್ದೇ ಬಿಗ್ ಮಿಸ್ಟೇಕ್.
ಒಟ್ಟಿನಲ್ಲಿ ರೋಹಿತ್ ಸೈನ್ಯ ಈ ತಪ್ಪುಳಿಂದ ಪಾಠ ಕಲಿಯಬೇಕಿದೆ. 2ನೇ ಟೆಸ್ಟ್‌ನಲ್ಲಿ ಹೊಸ ಗೇಮ್‌ಪ್ಲಾನ್, ರಣತಂತ್ರದೊಂದಿಗೆ ಕಣಕ್ಕಿಳಿಬೇಕಿದೆ
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.