Asianet Suvarna News Asianet Suvarna News

ರಾಹುಲ್‌ ಜಿಯು-ಜಿತ್ಸು ಆಟ ನೋಡಿ ಭಜರಂಗ್ ಪೂನಿಯಾ ಶಾಕ್‌! ವಿಡಿಯೋ ವೈರಲ್‌

ಭಜರಂಗ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್‌, ಭಜರಂಗ್‌ ವಿರುದ್ಧ ಮ್ಯಾಟ್‌ನಲ್ಲಿ ಜಿಯು-ಜಿತ್ಸುವಿನ ಕೆಲ ಪಟ್ಟುಗಳನ್ನು ಪ್ರಯೋಗಿಸಿ ಅವರನ್ನು ನೆಲಕ್ಕುರುಳಿಸುವುದು ಕಂಡು ಬಂದಿದೆ. ರಾಹುಲ್‌ರ ಕೌಶಲ್ಯಗಳಿಗೆ ಭಜರಂಗ್‌ ಪೂನಿಯಾ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರೊಂದಿಗೆ ಕುಸ್ತಿ ಆಡುತ್ತ ಕಳೆದ ಸಮಯವನ್ನು ಸದಾ ನೆನಪಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

Rahul Gandhi Meets Wrestlers In Haryana Bajrang Punia Shares Conversation kvn
Author
First Published Dec 30, 2023, 7:21 AM IST

ನವದೆಹಲಿ(ಡಿ.30): ಇತ್ತೀಚೆಗೆ ಹರ್ಯಾಣದ ಝಾಜರ್‌ಗೆ ಭೇಟಿ ನೀಡಿದಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಜರಂಗ್‌ ಪೂನಿಯಾ ಹಾಗೂ ಇನ್ನೂ ಕೆಲ ಕುಸ್ತಿಪಟುಗಳ ಎದುರು ಜಿಯು-ಜಿತ್ಸು ಸಮರ ಕಲೆಯ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಭಜರಂಗ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್‌, ಭಜರಂಗ್‌ ವಿರುದ್ಧ ಮ್ಯಾಟ್‌ನಲ್ಲಿ ಜಿಯು-ಜಿತ್ಸುವಿನ ಕೆಲ ಪಟ್ಟುಗಳನ್ನು ಪ್ರಯೋಗಿಸಿ ಅವರನ್ನು ನೆಲಕ್ಕುರುಳಿಸುವುದು ಕಂಡು ಬಂದಿದೆ. ರಾಹುಲ್‌ರ ಕೌಶಲ್ಯಗಳಿಗೆ ಭಜರಂಗ್‌ ಪೂನಿಯಾ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರೊಂದಿಗೆ ಕುಸ್ತಿ ಆಡುತ್ತ ಕಳೆದ ಸಮಯವನ್ನು ಸದಾ ನೆನಪಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ಸಹ ದೇಶದ ಅಗ್ರ ಕುಸ್ತಿಪಟುಗಳ ಜೊತೆ ಮ್ಯಾಟ್‌ನಲ್ಲಿ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಸಾಕಷ್ಟು ಖುಷಿಯಾಗಿದೆ. ಕುಸ್ತಿಪಟುಗಳ ಜೊತೆಗಿನ ಸಮಾಲೋಚನೆ ಒಂದು ಅಪರೂಪದ ಅನುಭವ ಎಂದು ರಾಹುಲ್‌ ಗಾಂಧಿ ಬಣ್ಣಿಸಿದ್ದಾರೆ. ಜಿಯು-ಜಿತ್ಸು ಜಪಾನ್‌ನ ಒಂದು ಸಮರ ಕಲೆ. ರಾಹುಲ್‌ ಗಾಂಧಿ ಈ ಸಮರ ಕಲೆಯನ್ನು ಹಲವು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಬಹಳಷ್ಟು ಪರಿಣಿತಿ ಹೊಂದಿದ್ದಾರೆ ಎನ್ನಲಾಗಿದೆ.

Pro Kabaddi League: ಬೆಂಗಳೂರು ಬುಲ್ಸ್‌ಗೆ 1 ಅಂಕ ವಿರೋಚಿತ ಸೋಲು

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಸಮರ ಸಾರಿರುವ ಕುಸ್ತಿಪಟುಗಳಿಗೆ ರಾಹುಲ್‌ ಗಾಂಧಿ ಬೆಂಬಲ ಸೂಚಿಸಿದ್ದು, ಕುಸ್ತಿಪಟುಗಳ ಅಳಲನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದೇಶಕ್ಕೆ ಪದಕ ಗೆದ್ದಿರುವ ಕ್ರೀಡಾಪಟುಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುವಂಥ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ ಎಂದಿದ್ದಾರೆ.

ಕುಸ್ತಿ ಫೆಡರೇಶನ್‌ ಕಚೇರಿ ಬ್ರಿಜ್‌ಭೂಷಣ್‌ ನಿವಾಸದಿಂದ ಶಿಫ್ಟ್‌!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನ ಕಚೇರಿಯನ್ನು ಶುಕ್ರವಾರ, ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ರ ನಿವಾಸದಿಂದ ಸ್ಥಳಾಂತರಿಸಲಾಗಿದೆ.

ನವದೆಹಲಿಯ ಹರಿನಗರ್‌ನಲ್ಲಿ ನೂತನ ಕಚೇರಿ ತೆರೆಯಲಾಗಿದೆ ಎಂದು ಡಬ್ಲ್ಯುಎಫ್‌ಐ ತಿಳಿಸಿದೆ. ಫೆಡರೇಶನ್‌ ಬ್ರಿಜ್‌ಭೂಷಣ್‌ರ ನಿಯಂತ್ರಣದಲ್ಲೇ ಇದೆ. ಅವರ ಮನೆಯಿಂದಲೇ ಕುಸ್ತಿ ಚಟುವಟಿಕೆಗಳು ನಿಯಂತ್ರಣಗೊಳ್ಳುತ್ತಿದೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆರೋಪಿಸಿದ್ದರು.

Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!

ಕಳೆದ ವಾರ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಲು ಇದೂ ಒಂದು ಕಾರಣ ಎಂದು ವರದಿಯಾಗಿತ್ತು.

ಆಸ್ಟ್ರೇಲಿಯನ್‌ ಓಪನ್‌: ಪ್ರಶಸ್ತಿ ಮೊತ್ತ ಹೆಚ್ಚಳ

ಮೆಲ್ಬರ್ನ್‌: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪ್ರಶಸ್ತಿ ಮೊತ್ತವನ್ನು ಆಯೋಜಕರು ಹೆಚ್ಚಿಸಿದ್ದು, 2024ರಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗುವ ಟೆನಿಸಿಗರಿಗೆ 3.15 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ (ಅಂದಾಜು 17.8 ಕೋಟಿ ರು.) ಸಿಗಲಿದೆ. 2023ರಲ್ಲಿ ಪ್ರಶಸ್ತಿ ಮೊತ್ತ 2.97 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ (ಅಂದಾಜು 16.8 ಕೋಟಿ ರು.) ಇತ್ತು. 

ಇದೇ ವೇಳೆ ಟೂರ್ನಿಯ ಒಟ್ಟಾರೆ ಪ್ರಶಸ್ತಿ ಮೊತ್ತವು 10 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್ಸ್‌ (ಅಂದಾಜು 56 ಕೋಟಿ ರು.) ಹೆಚ್ಚಳವಾಗಿದೆ. 2024ರ ಜ.27ರಿಂದ ಟೂರ್ನಿ ಆರಂಭಗೊಳ್ಳಲಿದೆ.

Follow Us:
Download App:
  • android
  • ios