ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲಿನ ನಂತರ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ವಿರುದ್ಧ ಮಾತುಗಳು ಕೇಳಿಬರ್ತಿವೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಬೇರೊಬ್ಬ ಆಟಗಾರನಿಗೆ ನಾಯಕನ ಪಟ್ಟ ಕಟ್ಟಲು BCCI ಚಿಂತನೆ ನಡೆಸಿದೆ.
ಬೆಂಗಳೂರು(ಡಿ.30): ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ನಿರೀಕ್ಷಿತ ಸಕ್ಸಸ್ ಸಿಗ್ತಿಲ್ಲ. ಇದ್ರಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಆತ ಇದ್ರೆ ಮಾತ್ರ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ನಮಗೆ ಯಶಸ್ಸು ಅಂತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಾರು ಆತ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಮತ್ತೆ ಕೊಹ್ಲಿಗೆ ನಾಯಕನ ಪಟ್ಟ ಕಟ್ಟ ಸಿಗುತ್ತಾ..?
undefined
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲಿನ ನಂತರ ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ವಿರುದ್ಧ ಮಾತುಗಳು ಕೇಳಿಬರ್ತಿವೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಬೇರೊಬ್ಬ ಆಟಗಾರನಿಗೆ ನಾಯಕನ ಪಟ್ಟ ಕಟ್ಟಲು BCCI ಚಿಂತನೆ ನಡೆಸಿದೆ. ಈ ನಡುವೆ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ಮತ್ತೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲು ಬಿಸಿಸಿಐ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಟೀಂ ಇಂಡಿಯಾಗೆ ಶುರುವಾಗಿದೆ ವೇಗಿಗಳ ಕೊರತೆ! ಹೀಗಾಗಲು ಕಾರಣವೇನು?
ಟೆಸ್ಟ್ ಫಾರ್ಮೆಟ್ನಲ್ಲಿ ಕೊಹ್ಲಿ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್..!
ಯೆಸ್, ವಿರಾಟ್ ಕೊಹ್ಲಿ ಟೆಸ್ಟ್ ಫಾರ್ಮೆಟ್ನಲ್ಲಿ ಭಾರತೀಯ ಕ್ರಿಕೆಟ್ ಕಂಡ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್. ಕೊಹ್ಲಿ ಕ್ಯಾಪ್ಟೆನ್ಸಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ದೇಶ-ವಿದೇಶಗಳಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದ್ರೆ, ಸೌರವ್ ಗಂಗೂಲಿ BCCI ಅಧ್ಯಕ್ಷರಾಗಿದ್ದಾಗ ಏಕಾಏಕಿ ಕೊಹ್ಲಿಯನ್ನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಯ್ತು. ಇದರಿಂದ ಮನನೊಂದು ಟೆಸ್ಟ್ ಕ್ಯಾಪ್ಟೆನ್ಸಿಗೆ ವಿರಾಟ್ ಕೊಹ್ಲಿ ಗುಡ್‌ಬೈ ಹೇಳಿದ್ರು.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ನಿರೀಕ್ಷಿತ ಯಶಸ್ಸು ಸಿಗ್ತಿಲ್ಲ. WTCಯಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಎಂಟ್ರಿ ನೀಡಲು ಕೊಹ್ಲಿಯ ಕ್ಯಾಪ್ಟನ್ಸಿಯೇ ಕಾರಣವಾಗಿತ್ತು. WTC ಫೈನಲ್ನಲ್ಲಿ ರೋಹಿತ್ ಗೇಮ್‌ಪ್ಲಾನ್, ರಣತಂತ್ರ ಯಾವುದು ವರ್ಕೌಟ್ ಅಗಲಿಲ್ಲ. ಆಸ್ಟ್ರೇಲಿಯಾ ಬ್ಯಾಟರ್ಗಳಿಗೆ ಆರ್ಭಟಕ್ಕೆ ಕಡಿವಾಣ ಹಾಕೋಕೆ, ರೋಹಿತ್ ಶರ್ಮಾ ಬಳಿ ಯಾವುದೇ ಪ್ಲಾನ್ ಇರಲಿಲ್ಲ. ಇನ್‌ಫ್ಯಾಕ್ಟ್ ರೋಹಿತ್‌ಗೆ ಆಸಿಸ್ ಬ್ಯಾಟ್ಸ್‌ಮನ್‌ಗಳ ವೀಕ್ನೇಸೇ ಗೊತ್ತಿರಲಿಲ್ಲ. ಫೀಲ್ಡ್ ಫ್ಲೇಸ್‌ಮೆಂಟ್, ಬೌಲಿಂಗ್ ರೊಟೇಷನ್ ಕೂಡ ಕಳಪೆಯಾಗಿತ್ತು.
ಪೋಲಿ ಆಗಿಬಿಟ್ರಾ ಟೀಮ್ ಇಂಡಿಯಾ ಯುವ ವೇಗಿ, ಟ್ವಿಟರ್‌ನಲ್ಲಿ ಮಾಡೆಲ್, ನಟಿಯರ ಹಸಿಬಿಸಿ ಚಿತ್ರಗಳಿಗೆ ಲೈಕ್!
ಇನ್ನು ರೋಹಿತ್ ನಾಯಕತ್ವದಲ್ಲಿ ಅಗ್ರೆಸಿವ್ ಕಾಣಿಸ್ತಿಲ್ಲ. ಆಟಗಾರರಲ್ಲಿ ಜೋಶ್, ಗೆಲ್ಲಬೇಕೆಂಬ ಛಲ ಕಾಣಲೇ ಇಲ್ಲ. ಆದ್ರೆ, ಕೊಹ್ಲಿ ನಾಯಕರಾಗಿದ್ದಾಗ ಅಗ್ರೆಸ್ಸಿವೆ ಕ್ಯಾಪ್ಟೆನ್ಸಿ ಮೂಲಕ ಆಟಗಾರರಲ್ಲಿ ಜೋಶ್ ತುಂಬುತ್ತಿದ್ರು. ಎದುರಾಳಿ ಬ್ಯಾಟ್ಸ್ಮನ್ಗಳನ್ನ ವೀಕ್ನೆಸ್ಗೆ ತಕ್ಕಂತೆ ಫೀಲ್ಡ್ ಸೆಟ್ ಮಾಡಿ ಖೆಡ್ಡಾಕ್ಕೆ ಕೆಡವುತ್ತಿದ್ರು. ತಂಡದ ಬೌಲರ್ಸ್ ಖತರ್ಕಾಕ್ ಸ್ಪೆಲ್ಗಳ ಮೂಲಕ ಮಿಂಚಿದ್ರು. ಇದರಿಂದ ಮತ್ತೆ ಕೊಹ್ಲಿ ನಾಯಕತ್ವದಲ್ಲಿ ಎದುರಿಸಲು BCCI ಮುಂದಾಗಿದೆ.
BCCIಯೇನೋ ಕೊಹ್ಲಿಗೆ ಮತ್ತೆ ಟೆಸ್ಟ್ ನಾಯಕತ್ವ ನೀಡಲು ಪ್ಲಾನ್ ಮಾಡಿದೆ. ಆದ್ರೆ, ಮೊದಲೇ BCCI ವಿರುದ್ಧ ಮುನಿಸಿಕೊಂಡಿರೋ ಕೊಹ್ಲಿ ಈ ಆಫರ್ನ ಒಪ್ತಾರಾ..? ಅನ್ನೋ ಪ್ರಶ್ನೆ ಮೂಡಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್