ಟೀಂ ಇಂಡಿಯಾ ಬ್ಯಾಟರ್ಗಳ ದೊಡ್ಡ ವೀಕ್ನೇಸ್ ಅಂದ್ರೆ ಅದು ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್. ಎಡಗೈ ವೇಗಿಗಳು ಅಂದ್ರೆ ಭಾರತೀಯ ಬ್ಯಾಟರ್ಗಳು ಬೆಚ್ಚಿ ಬೀಳ್ತಾರೆ. ಸುಲಭವಾಗಿ ಎಡಗೈ ವೇಗಿಗಳ ಬಲೆಗೆ ಬೀಳ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ರೋಹಿತ್ ಸೈನ್ಯಕ್ಕೆ ಎಡಗೈ ವೇಗಿಗಳೇ ಕಂಟವಕಾದ್ರು. ಎರಡೂ ಇನ್ನಿಂಗ್ಸ್ಗಳಲ್ಲೂ ಭಾರತೀಯ ಬ್ಯಾಟರ್ಗಳಿಗೆ ಕಾಟ ಕೊಟ್ರು.
ಬೆಂಗಳೂರು(ಡಿ.30): ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತ ಪ್ರದರ್ಶನ ನೀಡಿತು. ಆದ್ರೆ, ಹರಿಣಗಳ ಪಡೆಯ ಈ ಇಬ್ಬರು ಆಟಗಾರರು ಟೀಂ ಇಂಡಿಯಾ ಪಾಲಿಗೆ ವಿಲನ್ ಆದ್ರು. ಇವರಿಬ್ಬರೇ ರೋಹಿತ್ ಪಡೆ ಸೋಲಿಗೆ ಪ್ರಮುಖ ಕಾರಣರಾದ್ರು. ಯಾರು ಆ ಇಬ್ಬರು ಅಂತಿರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗತ್ತೆ.
ಹರಿಣಗಳ ನಾಡಲ್ಲೂ ರೋಹಿತ್ ಪಡೆಗೆ ಇವರೇ ವಿಲನ್..!
undefined
ಟೀಂ ಇಂಡಿಯಾ ಬ್ಯಾಟರ್ಗಳ ದೊಡ್ಡ ವೀಕ್ನೇಸ್ ಅಂದ್ರೆ ಅದು ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್. ಎಡಗೈ ವೇಗಿಗಳು ಅಂದ್ರೆ ಭಾರತೀಯ ಬ್ಯಾಟರ್ಗಳು ಬೆಚ್ಚಿ ಬೀಳ್ತಾರೆ. ಸುಲಭವಾಗಿ ಎಡಗೈ ವೇಗಿಗಳ ಬಲೆಗೆ ಬೀಳ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ರೋಹಿತ್ ಸೈನ್ಯಕ್ಕೆ ಎಡಗೈ ವೇಗಿಗಳೇ ಕಂಟವಕಾದ್ರು. ಎರಡೂ ಇನ್ನಿಂಗ್ಸ್ಗಳಲ್ಲೂ ಭಾರತೀಯ ಬ್ಯಾಟರ್ಗಳಿಗೆ ಕಾಟ ಕೊಟ್ರು.
ಟೀಂ ಇಂಡಿಯಾಗೆ ಶುರುವಾಗಿದೆ ವೇಗಿಗಳ ಕೊರತೆ! ಹೀಗಾಗಲು ಕಾರಣವೇನು?
ಯೆಸ್, ಹರಿಣಗಳ ಪಡೆಯ ಪೇಸ್ ಅಟ್ಯಾಕಿಂಗ್ನಲ್ಲಿ ಇಬ್ಬರು ಎಡಗೈ ವೇಗಿಗಳಿದ್ರು. ಒಬ್ರು ಮಾರ್ಕೋ ಯಾನ್ಸೆನ್ ಮತ್ತೊಬ್ರು ನಂಡ್ರೆ ಬರ್ಗರ್. ಇವರಿಬ್ಬರು ಪಂದ್ಯದುದ್ದಕ್ಕೂ ಅದ್ಭುತ ಬೌಲಿಂಗ್ನಿಂದ ಮಿಂಚಿದ್ರು ಮೊದಲ ಅದರಲ್ಲೂ ನಂದ್ರೆ ಬರ್ಗರ್, ಪದಾರ್ಪಣೆ ಪಂದ್ಯದ್ಲಲೇ ಧೂಳೆಬ್ಬಿಸಿದ್ರು. ಪರ್ಫೆಕ್ಟ್ ಪೇಸ್, ಲೈನ್ ಆ್ಯಂಡ್ ಲೆಂಥ್ ಮೂಲಕ ಟೀಂ ಇಂಡಿಯಾ ಬ್ಯಾಟರ್ಸ್ಗೆ ಕಡಿವಾಣ ಹಾಕಿದ್ರು. ಪಂದ್ಯದಲ್ಲಿ ಒಟ್ಟು 7 ವಿಕೆಟ್ ಬೇಟೆಯಾಡಿದ್ರು. ಇನ್ನು ಮಾರ್ಕೋ ಯಾನ್ಸೆನ್ 4 ವಿಕೆಟ್ ಪಡೆದುಕೊಂಡ್ರು. ಇವರಿಬ್ಬರು ಸೇರಿ 11 ವಿಕೆಟ್ ಕಬಳಿಸಿದ್ರು.
ಇಂಡಿಯಾ ಬ್ಯಾಟರ್ಸ್‌ಗೆ ಎಡಗೈ ವೇಗಿಗಳು ವಿಲನ್ ಆಗಿದ್ದು ಇದೇ ಮೊದಲಲ್ಲ. ಹಲವು ಬಾರಿ ಎಡಗೈ ವೇಗಿಗಳು ಟೀಂ ಇಂಡಿಯಾದ ಸೋಲಿಗೆ ಕಾರಣರಾಗಿದ್ದಾರೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮಿರ್‌ಗೆ ಆಡಲು ಭಾರತದ ಟಾಪ್-3 ಬ್ಯಾಟರ್ಗಳಾದ ಧವನ್, ರೋಹಿತ್, ಕೊಹ್ಲಿ ಪರದಾಡಿ ಔಟಾಗಿದ್ದರು. ಫೈನಲ್ ಸೋತು ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಳ್ತು.
ರಾಹುಲ್ ಜಿಯು-ಜಿತ್ಸು ಆಟ ನೋಡಿ ಭಜರಂಗ್ ಪೂನಿಯಾ ಶಾಕ್! ವಿಡಿಯೋ ವೈರಲ್
2019ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟ್ರೆಂಟ್ ಬೌಲ್ಟ್, 2021ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರೀದಿ, ಅಕ್ಷರಶ: ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್ನ ಧ್ವಂಸ ಮಾಡಿದ್ರು.
ಒಟ್ನಲ್ಲಿ ಭಾರತೀಯರು, ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲು ಕಲಿಯುವವರೆಗೂ, ಮಹತ್ವದ ಪಂದ್ಯಗಳಲ್ಲಿ ಸೋಲು ತಪ್ಪಿದ್ದಲ್ಲ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್