ಪುಣೆ ಟೆಸ್ಟ್; ಬೃಹತ್ ಮೊತ್ತ ಸಿಡಿಸಿ ಭಾರತ ಇನಿಂಗ್ಸ್ ಡಿಕ್ಲೇರ್!

By Web Desk  |  First Published Oct 11, 2019, 4:01 PM IST

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ. ಕೊಹ್ಲಿ ದ್ವಿಶತಕ, ಜಡೇಜಾ ಸ್ಫೋಟಕ 91 ರನ್ ನೆರವಿನಿಂದ ಟೀಂ ಇಂಡಿಯಾ 2ನೇ ದಿನವೂ ಅಬ್ಬರಿಸಿತು.


ಪುಣೆ(ಅ.11): ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಅಬ್ಬರಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ, ನಾಯಕ ವಿರಾಟ್ ಕೊಹ್ಲಿ ದ್ವಿಶತಕ, ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅರ್ಧಶತಕ ಸಿಡಿಸಿದ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 601 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಇದನ್ನೂ ಓದಿ: ಬ್ರಾಡ್ಮನ್ to ಸಚಿನ್; ಕೊಹ್ಲಿ ದ್ವಿಶತಕಕ್ಕೆ ದಿಗ್ಗಜರ ದಾಖಲೆ ಪುಡಿ ಪುಡಿ!

Tap to resize

Latest Videos

undefined

3 ವಿಕೆಟ್ ನಷ್ಟಕ್ಕೆ 273 ರನ್‌ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು. ರಹಾನೆ 59 ರನ್ ಸಿಡಿಸಿ ಔಟಾದರೆ, ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಿಡಿಸಿ ದಾಖಲೆ ಬರೆದರು. 7ನೇ ದ್ವಿಶತಕ ಸಿಡಿಸೋ ಮೂಲಕ, ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಗರಿಷ್ಠ ದ್ವಿಶತಕ ದಾಖಲೆ ಪುಡಿ ಮಾಡಿದರು.

ಇದನ್ನೂ ಓದಿ: ದ್ರಾವಿಡ್- ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರಹಾನೆ!

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ 91 ರನ್ ಸಿಡಿಸಿ ಔಟಾದರು. ಕೊಹ್ಲಿ ಅಜೇಯ 254 ರನ್ ಸಿಡಿಸಿದರು. ಜಡೇಜಾ ವಿಕೆಟ್ ಪತನದೊಂದಿಗೆ ಭಾರತ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ 5 ವಿಕೆಟ್ ನಷ್ಟಕ್ಕೆ 601 ರನ್ ಸಿಡಿಸಿತು.

click me!