ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೆ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಾರಿ ಟೀಂ ಇಂಡಿಯಾಗಲ್ಲ, ಬದಲಾಗಿ ಐಪಿಎಲ್ ಟೂರ್ನಿಯಲ್ಲಿ ಕುಂಬ್ಳೆ ಕೋಚ್ ಆಗಿ ಕಣಕ್ಕಿಳಿಯುತ್ತಿದ್ದಾರೆ.
ಬೆಂಗಳೂರು(ಅ.11): ಟೀಂ ಇಂಡಿಯಾ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತೆ ಐಪಿಎಲ್ ಟೂರ್ನಿಗೆ ಕಾಲಿಡುತ್ತಿದ್ದಾರೆ. 2015ರಲ್ಲಿ ಮುಂಬೈ ತಂಡದ ಮೆಂಟರ್ ಸ್ಥಾನದಿಂದ ಕೆಳಗಿಳಿದ ಬಳಿಕ ಐಪಿಎಲ್‌ನಿಂದ ದೂರ ಉಳಿದಿದ್ದ ಕುಂಬ್ಳೆ, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಗೊಂಡಿದ್ದಾರೆ.
ಇದನ್ನೂ ಓದಿ: 2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!
undefined
ಮೈಕ್ ಹೆಸನ್ ದಿಢೀರ್ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅನಿಲ್ ಕುಂಬ್ಳೆ ಹಲವು ದಿಗ್ಗಜ ಕೋಚ್‌ಗಳನ್ನು ಸಂಪರ್ಕಿಸಿತ್ತು. ಕೊನೆಗೆ ಅನಿಲ್ ಕುಂಬ್ಳೆ ಮನ ಒಲಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್!
2016-17ರಲ್ಲಿ ಟೀಂ ಇಂಡಿಯಾ ಕೋಚ್ ಜವಾಬ್ದಾರಿ ನಿರ್ವಹಿಸಿದ ಅನಿಲ್ ಕುಂಬ್ಳೆ, ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದಿಂದ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿಯೂ ಗಮನಸೆಳೆದಿದ್ದ ಕುಂಬ್ಳೆ, ಬಳಿಕ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು.
2 ವರ್ಷಗಳ ಅವಧಿಗೆ ಕುಂಬ್ಳೆ, ಕಿಂಗ್ಸ್ ಇಲೆವನ್ ಪಂಜಾಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. 2020 ಹಾಗೂ 2021ರಲ್ಲಿ ಕುಂಬ್ಳೆ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.