ಇತ್ತೀಚೆಗಷ್ಟೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಆಹ್ವಾನಿಸಿತ್ತು. ಶುಕ್ರವಾರ ಟಾಟಾ ಸಂಸ್ಥೆಗೆ ಆಯೋಜನೆ ಹಕ್ಕು ಸಿಕ್ಕಿದ್ದು, 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರು, ಬಿಸಿಸಿಐಗೆ ಪಾವತಿಸಲಿದೆ. 2008ರಲ್ಲಿ ಐಪಿಎಲ್ ಆರಂಭಗೊಂಡಾಗ ಡಿಎಲ್‌ಎಫ್ 5 ವರ್ಷಕ್ಕೆ ಪ್ರಾಯೋಜಕತ್ವ ಪಡೆದು, ಪ್ರತಿ ವರ್ಷಕ್ಕೆ 40 ಕೋಟಿ ರು ಪಾವತಿಸಿತ್ತು.
ನವದೆಹಲಿ(ಜ.20): ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದೆ. 2028ರ ವರೆಗೆ ಐಪಿಎಲ್ ಪ್ರಾಯೋಜಕತ್ವ ಪಡೆದಿರುವ ಟಾಟಾ ಸಂಸ್ಥೆಯು ಪ್ರತಿ ಆವೃತ್ತಿಗೆ ಬಿಸಿಸಿಐಗೆ ₹500 ಕೋಟಿ ಪಾವತಿಸಲಿದೆ. 2022-23ರ ಆವೃತ್ತಿಗಳಲ್ಲಿ ಟಾಟಾ ಸಂಸ್ಥೆ ಶೀರ್ಷಿಕೆ ಹಕ್ಕು ಪಡೆದಿತ್ತು. ವರ್ಷಕ್ಕೆ ತಲಾ 335 ಕೋಟಿ ರು ಪಾವತಿಸಿತ್ತು.
ಇತ್ತೀಚೆಗಷ್ಟೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಆಹ್ವಾನಿಸಿತ್ತು. ಶುಕ್ರವಾರ ಟಾಟಾ ಸಂಸ್ಥೆಗೆ ಆಯೋಜನೆ ಹಕ್ಕು ಸಿಕ್ಕಿದ್ದು, 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರು, ಬಿಸಿಸಿಐಗೆ ಪಾವತಿಸಲಿದೆ. 2008ರಲ್ಲಿ ಐಪಿಎಲ್ ಆರಂಭಗೊಂಡಾಗ ಡಿಎಲ್‌ಎಫ್ 5 ವರ್ಷಕ್ಕೆ ಪ್ರಾಯೋಜಕತ್ವ ಪಡೆದು, ಪ್ರತಿ ವರ್ಷಕ್ಕೆ 40 ಕೋಟಿ ರು ಪಾವತಿಸಿತ್ತು.
ಕಿರಿಯರ ವಿಶ್ವಕಪ್: ಇಂದು ಭಾರತ vs ಬಾಂಗ್ಲಾ ಫೈಟ್
ಬ್ಲೂಮ್‌ಫಂಟೀನ್(ದ.ಆಫ್ರಿಕಾ): ದಾಖಲೆಯ 5 ಬಾರಿ ಪ್ರಶಸ್ತಿ ಗೆದ್ದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ 15ನೇ ಆವೃತ್ತಿಯ ಟೂರ್ನಿಯಲ್ಲೂ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಶನಿವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಉದಯ್ ಶಹರಾನ್ ನಾಯಕತ್ವದ ಭಾರತ ‘ಎ’ ಗುಂಪಿನಲ್ಲಿದ್ದು, ಗುಂಪು ಹಂತದಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದೆ. ಜ.25ಕ್ಕೆ ಐರ್ಲೆಂಡ್, ಜ.28ಕ್ಕೆ ಅಮೆರಿಕ ವಿರುದ್ಧ ಆಡಬೇಕಿದೆ.
6ನೇ ಯೂತ್ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ
ಇತ್ತೀಚೆಗಷ್ಟೇ ಅಂಡರ್-19 ಏಷ್ಯಾಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಆಲ್ರೌಂಡರ್ ಅರ್ಶಿನ್ ಕುಲ್ಕರ್ಣಿ, ಎಡಗೈ ಸ್ಪಿನ್ನರ್ ಸೌಮಿ ಕುಮಾರ್, ಬ್ಯಾಟರ್‌ಗಳಾದ ಮುಶೀರ್ ಖಾನ್, ಅರವೆಲ್ಲಿ ಅವಾನಿಶ್, ವೇಗಿ ರಾಜ್ ಲಿಂಬಾನಿ ಸೇರಿದಂತೆ ತಾರಾ ಆಟಗಾರರು ಭಾರತ ತಂಡದಲ್ಲಿದ್ದು, ಧನುಶ್ ಗೌಡ ತಂಡದಲ್ಲಿರುವ ಏಕೈಕ ಕನ್ನಡಿಗ ಎನಿಸಿಕೊಂಡಿದ್ದಾರೆ. ಶನಿವಾರ ಮತ್ತೆರಡು ಪಂದ್ಯಗಳು ನಡೆಯಲಿದ್ದು, ಇಂಗ್ಲೆಂಡ್-ಸ್ಕಾಟ್ಲೆಂಡ್, ಪಾಕಿಸ್ತಾನ-ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.
ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಡಿಸ್ನಿ+ಹಾಟ್‌ಸ್ಟಾರ್, ಸ್ಟಾರ್‌ಸ್ಪೋರ್ಟ್ಸ್
ದ.ಆಫ್ರಿಕಾ ಶುಭಾರಂಭ ಶುಕ್ರವಾರ ದ.ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 31 ರನ್ ಜಯಗಳಿಸಿತು. ಅಮೆರಿಕ ವಿರುದ್ಧ ಐರ್ಲೆಂಡ್ 7 ವಿಕೆಟ್ ಜಯಿಸಿತು.
IPL 2024 ಟೂರ್ನಿಗೂ ಮುನ್ನ ಗುಡುಗಿದ RCB ಕ್ರಿಕೆಟಿಗ, ಕೇವಲ 42 ಎಸೆತದಲ್ಲಿ ಶತಕ..! ಬೌಂಡ್ರಿ-ಸಿಕ್ಸರ್ ವಿಡಿಯೋ ವೈರಲ್
ಟೆಸ್ಟ್: ವಿಂಡೀಸ್ ವಿರುದ್ದ ಆಸೀಸ್‌ಗೆ 10 ವಿಕೆಟ್ ಜಯ
ಅಡಿಲೇಡ್: ವೆಸ್ಟ್ ಇಂಡೀಸ್ ವಿರುದ್ದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ 10 ವಿಕೆಟ್ ಗೆಲುವು ಸಾಧಿಸಿದೆ. 26 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆಸೀಸ್ 6.4 ಓವರಲ್ಲಿ ಜಯಗಳಿಸಿ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಹೇಜಲ್‌ವುಡ್ ಟೆಸ್ಟ್‌ವೊಂದರಲ್ಲಿ 11ನೇ ಬಾರಿ 5 ವಿಕೆಟ್ ಸಾಧನೆ ಮಾಡಿದರು.