ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗೋವಾ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಇಶಾನ್ ಕಾಡೇಕರ್(06), ಸಿದ್ಧಾರ್ಥ್ ಕೆ.ವಿ.(02), ಹಾಗೂ ಸುಯಾಶ್ ಪ್ರಭುದೇಸಾಯಿ(24) ವಿಕೆಟನ್ನು ತಂಡದ ಸ್ಕೊರ್ 45 ಆಗುವಷ್ಟರಲ್ಲೇ ಕಳೆದಿಕೊಂಡಿತು.
ಮೈಸೂರು(ಜ.20): ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಬೌಲರ್‌ಗಳ ಅಬ್ಬರದ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ಮೈಸೂರು ಕ್ರೀಡಾಂಗಣದಲ್ಲಿ ಆರಂಭಗೊಂಡ ಗೋವಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನವೇ ಮೇಲುಗೈ ಸಾಧಿಸಿದೆ. ದಿನದಂತ್ಯಕ್ಕೆ ಗೋವಾ 8 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗೋವಾ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಇಶಾನ್ ಕಾಡೇಕರ್(06), ಸಿದ್ಧಾರ್ಥ್ ಕೆ.ವಿ.(02), ಹಾಗೂ ಸುಯಾಶ್ ಪ್ರಭುದೇಸಾಯಿ(24) ವಿಕೆಟನ್ನು ತಂಡದ ಸ್ಕೊರ್ 45 ಆಗುವಷ್ಟರಲ್ಲೇ ಕಳೆದಿಕೊಂಡಿತು. ಆದರೆ 4ನೇ ವಿಕೆಟ್‌ಗೆ ನಾಯಕ ದರ್ಶನ್ ಮಿಶಾಲ್ ಹಾಗೂ ಸ್ನೇಹಲ್ 82 ರನ್ ಜೊತೆಯಾಟವಾಡಿದರು. 39 ರನ್ ಗಳಿಸಿದ್ದ ದರ್ಶನ್‌ಗೆ ಸ್ಪಿನ್ನರ್ ರೋಹಿತ್ ಪೆವಿಲಿಯನ್ ಹಾದಿ ತೋರಿಸಿದರೆ, ಸ್ನೇಹಲ್ ಹೋರಾಟದ 83 ರನ್ ಸಿಡಿಸಿ ವೇಗಿ ವೆಂಕಟೇಶ್ ಎಸೆತದಲ್ಲಿ ಔಟಾದರು. ಸದ್ಯ 10 ರನ್ ಗಳಿಸಿರುವ ಅರ್ಜುನ್ ತೆಂಡುಲ್ಕರ್ ಹಾಗೂ 6 ರನ್ ಗಳಿಸಿರುವ ಹೇರಂಬ್ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ದೊಡ್ಡ ಮೊತ್ತಕ್ಕಾಗಿ ಹೋರಾಡುತ್ತಿದ್ದಾರೆ.
undefined
ಟೀಂ ಇಂಡಿಯಾ ಕ್ರಿಕೆಟಿಗ ಕುಲ್ದೀಪ್ ಯಾದವ್ ಬಿಡಿಸಿದ ಶ್ರೀ ರಾಮನ ಚಿತ್ರ ವೈರಲ್..!
ವಿಜಯ್‌ಕುಮಾರ್ ವೈಶಾಕ್ 45 ರನ್‌ಗೆ 3 ವಿಕೆಟ್ ಕಿತ್ತರೆ, ಯುವ ಸ್ಪಿನ್ನರ್ ರೋಹಿತ್ ಕುಮಾರ್ 66 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ವೇಗಿಗಳಾದ ವಾಸುಕಿ ಕೌಶಿಕ್, ವೆಂಕಟೇಶ್ ತಲಾ 1 ವಿಕೆಟ್ ಪಡೆದರು,
ಸ್ಕೋರ್: ಗೋವಾ 228/8(ಮೊದಲ ದಿನದಂತ್ಯಕ್ಕೆ)
(ಸ್ನೇಹಲ್ 83, ದರ್ಶನ್ 39, ವೈಶಾಕ್ 3-45, ರೋಹಿತ್ 3-66)
ಮನೀಶ್ ಸೇರಿ ಇಬ್ಬರಿಗೆ ಗಾಯ
ಪಂದ್ಯದ ಮೊದಲ ದಿನವೇ ಕರ್ನಾಟಕದ ಇಬ್ಬರು ಗಾಯಗೊಂಡರು. ಮನೀಶ್ ಪಾಂಡೆ ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯುವ ವೇಳೆ ಗಾಯಗೊಂಡಿದ್ದಾರೆ. ಇನ್ನು 4 ವರ್ಷಗಳ ಬಳಿಕ ಕರ್ನಾಟಕ ರಣಜಿ ತಂಡಕ್ಕೆ ಮರಳಿರುವ ಡಿ.ನಿಶ್ಚಲ್ ಕೂಡಾ ಫೀಲ್ಡಿಂಗ್ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದರು.
U19 World Cup 2024: ಇಂದಿನಿಂದ ಅಂಡರ್ 19 ವಿಶ್ವಕಪ್ ಹಬ್ಬ..!
ಟಿ20: ಕಿವೀಸ್ ವಿರುದ್ಧ ಪಾಕ್‌ಗೆ 4ನೇ ಸೋಲು
ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನ ಸೋಲಿನ ಆಘಾತಕ್ಕೊಳಗಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಕಿವೀಸ್ 7 ವಿಕೆಟ್ ಜಯಗಳಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಕಿವೀಸ್ 4-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕ್, ರಿಜ್ವಾನ್(ಔಟಾಗದೆ 90) ಅಬ್ಬರದ ಹೊರತಾಗಿಯೂ 5 ವಿಕೆಟ್‌ಗೆ 158 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿಯನ್ನು ಕಿವೀಸ್ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬೆನ್ನತ್ತಿ ಜಯಗಳಿಸಿತು. ಡ್ಯಾರಿಲ್ ಮಿಚೆಲ್ 72, ಗ್ಲೆನ್ ಫಿಲಿಪ್ಸ್ 70 ರನ್ ಗಳಿಸಿದರು.