
ನವದೆಹಲಿ[ಡಿ.04]: ಭಾರತ ದಿಗ್ಗಜ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ತೆರೆ ಕಾಣಲಿದೆ. ಮಂಗಳವಾರ ಮಿಥಾಲಿ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಇದೇ ಸಂದರ್ಭದಲ್ಲಿ ಅವರ ಜೀವನಾಧಾರಿತ ಸಿನಿಮಾ ಘೋಷಣೆಯಾಯಿತು.
37ನೇ ವಸಂತಕ್ಕೆ ಕಾಲಿಟ್ಟ ಮಿಥಾಲಿ ರಾಜ್;ಶುಭಾಶಯಗಳ ಸುರಿಮಳೆ!
ಚಿತ್ರಕ್ಕೆ ‘ಶಾಬಾಶ್ ಮಿಥೂ’ ಎಂದು ಹೆಸರಿಟ್ಟಿದ್ದು, ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಚಿತ್ರವನ್ನು ರಾಹುಲ್ ಢೋಲಾಕಿಯಾ ನಿರ್ದೇಶಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಿಥಾಲಿಗೆ ಕೇಕ್ ತಿನ್ನಿಸಿದ ತಾಪ್ಸಿ, ಅವರಿಂದ ಹಸ್ತಾಕ್ಷರವನ್ನು ಪಡೆದುಕೊಂಡರು. ಸಿನಿಮಾ ಬಗ್ಗೆ ವಿವರಗಳನ್ನು ಬಹಿರಂಗಗೊಳಿಸುವ ಮೊದಲು ತಾಪ್ಸಿ ಇನ್‌ಸ್ಟಾಗ್ರಾಂನಲ್ಲಿ ಕ್ರಿಕೆಟ್ ಚೆಂಡಿನ ಚಿತ್ರವೊಂದನ್ನು ಹಾಕಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಚಿತ್ರ ಯಾವಾಗ ತೆರೆ ಕಾಣಲಿದೆ, ಭಾರತ ತಂಡದ ಇತರ ಆಟಗಾರ್ತಿಯರ ಪಾತ್ರಗಳನ್ನು ಯಾರು ನಿಭಾಯಿಸಲಿದ್ದಾರೆ, ಚಿತ್ರದಲ್ಲಿ ಯಾವ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ ಎನ್ನುವ ವಿವರಗಳನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.