ಗೆಲುವಿನ ಇನ್ನಿಂಗ್ಸ್ ಬಳಿಕ ಅನುಷ್ಕಾ ಶರ್ಮಾಗೆ ಹಲವರ ಕರೆ, ಫೋನ್ ಸಂಭಾಷಣೆ ಮಾಹಿತಿ ಬಿಚ್ಚಿಟ್ಟ ಕೊಹ್ಲಿ!

By Suvarna News  |  First Published Oct 24, 2022, 3:55 PM IST

ಭಾರತದಲ್ಲಿ ಇದೀಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪರ್ಫಾಮೆನ್ಸ್ ಮಾತುಗಳು ಮುಗಿಯುತ್ತಿಲ್ಲ. ಪಾಕಿಸ್ತಾನ ಬಗ್ಗುಬಡಿದ ಕೊಹ್ಲಿಗೆ ಮೆಚ್ಚುಗೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಇನ್ನಿಂಗ್ಸ್ ಬಳಿಕ ಪತ್ನಿ ಅನುಷ್ಕಾ ಶರ್ಮಾ ಕರೆ ಮಾಡಿ ಕೊಹ್ಲಿ ಜೊತೆ ಮಾತನಾಡಿದ್ದಾರೆ. ಈ ವೇಳೆ ದೇಶದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಕುರಿತು ಹೇಳಿದ್ದಾರೆ. ಅನುಷ್ಕಾ ಜೊತೆಗಿನ ಫೋನ್ ಸಂಭಾಷಣೆ ವಿವರವನ್ನು ಸ್ವತಃ ಕೊಹ್ಲಿ ಬಹಿರಂಗಪಡಿಸಿದ್ದಾರೆ.


ಮುಂಬೈ(ಅ.24): ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಕೊಹ್ಲಿ ಅಬ್ಬರಕ್ಕೆ ಪಾಕಿಸ್ತಾನ ಧೂಳೀಪಟವಾಗಿದೆ. ಅಜೇಯ 82 ರನ್ ಸಿಡಿಸಿ ಟೀಂ ಇಂಡಿಯಾಗೆ ರೋಚಕ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಗೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಬಗ್ಗು ಬಳಿಕ ಡ್ರೆಸ್ಸಿಂಗ್ ರೂಂಗೆ ಆಗಮಿಸಿದ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕರೆಯೊಂದು ಕಾಯುತ್ತಿತ್ತು. ಅನುಷ್ಕಾ ಶರ್ಮಾ ಜೊತೆಗೆ ಮಾತನಾಡಿದ ಕೊಹ್ಲಿ ಮತ್ತಷ್ಟು ಪುಳಕಿತರಾಗಿದ್ದಾರೆ. ಕಾರಣ ಕೊಹ್ಲಿ ಗೆಲುವಿನ ಇನ್ನಿಂಗ್ಸ್ ಬೆನ್ನಲ್ಲೇ ಹಲವರು ಅನುಷ್ಕಾ ಶರ್ಮಾಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಹಲವರು ಅನುಷ್ಕಾ ಶರ್ಮಾಗೆ ಶುಭಕೋರಿದ್ದಾರೆ. ಭಾರತೀಯರು ಅತೀವ ಸಂತಸದಲ್ಲಿದ್ದಾರೆ. ಹಲವರು ನನಗೆ ಕರೆ ಮಾಡಿ ಸಂತಸ ಹಂಚಿಕೊಳ್ಳುತ್ತಿದ್ದಾರೆ ನನೇಗೇನು ಮಾಡಬೇಕು ಎಂದೇ ತೋಚುತ್ತಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ, ಹೊರಗಡೆ ಏನಾಗುತ್ತಿದೆ ಅನ್ನೋದು ನನ್ನ ಕೈಯಲ್ಲಿ ಇಲ್ಲ ಎಂದು ಕೊಹ್ಲಿ ಉತ್ತರಿಸಿದ್ದಾರೆ.

ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಬಳಿಕ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂ ಮೂಲಕ ಭಾವನಾತ್ಮಕ ಪತ್ರ ಬರೆದಿದ್ದರು. ಎಂಥಾ ಸೌಂದರ್ಯ, ದೀಪಾವಳಿ ಆಚರಿಸುತ್ತಿರುವ ಭಾರತೀಯರಲ್ಲಿ ಮತ್ತಷ್ಟು ಸಂತೋಷ ತಂದಿದ್ದಿ. ನನ್ನ ಪ್ರೀತಿಯ ಅದ್ಭುತ ವ್ಯಕ್ತಿ ನೀನು. ಶ್ರದ್ಧೆ, ಪರಿಶ್ರಮ, ನಂಬಿಕೆಯೊಂದಿಗೆ ಹೆಜ್ಜೆ ಇಡುತ್ತಿರುವ ನೀನು ಮನಸ್ಸಿಗೆ ಮತ್ತಷ್ಟುಮುದ ನೀಡುವ ಸಂದರ್ಭ ಇದು. ನನ್ನ ಜೀವನದಲ್ಲಿ ನೋಡಿದ ಅತ್ಯುತ್ತಮ ಪಂದ್ಯ ಇದು. ತಾಯಿ ಯಾಕೆ ಈ ರೀತಿ ಕಿರುಚಿತ್ತಿದ್ದಾರೆ, ಕುಣಿದಾಡುತ್ತಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಗಳು ತುಂಬಾ ಚಿಕ್ಕವಳು. ಆದರೆ ಒಂದು ದಿನ ನನ್ನ ತಂದೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು ಅನ್ನೋದನ್ನು ಅರ್ಥಮಾಡಿಕೊಳ್ಳುತ್ತಾಳೆ. ಕಠಿಣ ದಿನಗಳನ್ನು ಸವೆಸಿ, ಮತ್ತಷ್ಟು ಶಕ್ತಿಶಾಲಿಯಾಗಿ ಕಮ್‌ಬ್ಯಾಕ್ ಮಾಡಿದ್ದಾನೆ ಎಂದು ಅನುಷ್ಕಾ ಶರ್ಮಾ ಭಾವನಾತ್ಮಕ ಪತ್ರ ಬರೆದಿದ್ದಾರೆ. 

Tap to resize

Latest Videos

ಶಾಟ್‌ ಆಫ್‌ ದ ಸೆಂಚುರಿ... ಕೊಹ್ಲಿ ಬ್ಯಾಕ್‌ಫುಟ್‌ ಲಾಂಗ್‌ ಆನ್‌ ಸಿಕ್ಸ್‌ಗೆ ಸೋಷಿಯಲ್‌ ಮೀಡಿಯಾ ಫಿದಾ!

ಗೆಲುವಿನ ಬಳಿಕ ಭಾರತೀಯ ಅಭಿಮಾನಿಗಳು, ಆಟಗಾರರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಅಶ್ವಿನ್‌ ಗೆಲುವಿನ ರನ್‌ ಬಾರಿಸುತ್ತಲೇ ಆಟಗಾರರು ಮೈದಾನಕ್ಕೆ ಓಡೋಡಿ ಬಂದರು. ರೋಹಿತ್‌ ಶರ್ಮಾ, ಕೊಹ್ಲಿಯನ್ನು ಹೆಗಲಿಗೇರಿಸಿ ಕುಣಿದದ್ದು ವಿಶೇಷವಾಗಿತ್ತು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಭಾರತೀಯ ಅಭಿಮಾನಿಗಳು ಚಕ್‌ ದೇ ಇಂಡಿಯಾ ಹಾಡು ಹಾಡಿ, ಜೈಕಾರ ಕೂಗಿ ಸಂಭ್ರಮಿಸಿದರು.

 ಕೆಲ ವಾರಗಳ ಹಿಂದೆ ಅನೇಕರು ವಿರಾಟ್‌ ಕೊಹ್ಲಿ ಇನ್ನೂ ಭಾರತ ಟಿ20 ತಂಡದಲ್ಲಿ ಇರಬೇಕಾ? ಎಂದು ಪ್ರಶ್ನೆ ಮಾಡುತ್ತಿದ್ದರು. ಮುಂದಿನ ಒಂದೆರಡು ವರ್ಷ ಈ ಪ್ರಶ್ನೆಯನ್ನು ಮತ್ತಿನ್ಯಾರೂ ಕೇಳುವುದಿಲ್ಲ. ಕೊಹ್ಲಿಯ ಈ ಇನ್ನಿಂಗ್ಸ್ ಯಾರೂ ಮರೆಯಲೂ ಸಾಧ್ಯವಿಲ್ಲ. 2021ರ ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ, 2022ರ ವಿಶ್ವಕಪ್‌ನಲ್ಲಿ ಕೊನೆ ಬಾಲ್‌ ಥ್ರಿಲ್ಲರ್‌ ಗೆಲ್ಲುವ ಮೂಲಕ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡಿದೆ. 4 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಿದೆ.

ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!

click me!