ಲಾಹೋರ್(ಅ.26): T20 World Cup 2021 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ(Team India) ಸೋಲನ್ನು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಇದುವರೆಗೆ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ(Pakistan) ವಿರುದ್ಧ ಸೋಲದ ಭಾರತ ಇದೇ ಮೊದಲ ಬಾರಿಗೆ ಸೋಲಿನ ಕಹಿ ಅನುಭವಿಸಿದೆ. ಇದೀಗ ಈ ಸೋಲಿಗೆ ಟೀಂ ಇಂಡಿಯಾ ತಂಡದ ಆಯ್ಕೆಯಲ್ಲಿ ಮಾಡಿದ ಒಂದು ತಪ್ಪು ಪ್ರಮುಖ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್(Inzamam-ul-Haq) ಹೇಳಿದ್ದಾರೆ.
ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!
ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಆಯ್ಕೆಯಲ್ಲಿ ತಪ್ಪು ನಡೆದಿದೆ. ಸಂಪೂರ್ಣ ಫಿಟ್ ಆಗದ ಹಾರ್ದಿಕ್ ಪಾಂಡ್ಯಗೆ(Hardik Pandya) ಅವಕಾಶ ನೀಡಲಾಗಿದೆ. ಇದರಿಂದ ಟೀಂ ಇಂಡಿಯಾ ಐವರು ಬೌಲರ್ ಮೂಲಕ ದಾಳಿ ನಡೆಸಬೇಕಾಯಿತು. 6ನೇ ಬೌಲರ್ ಸೇವೆ ಕಳೆದುಕೊಂಡಿತು. ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಟೀಂ ಇಂಡಿಯಾ ಬೌಲಿಂಗ್ ವಿಭಾಗದಿಂದ ನಡೆಯಲಿಲ್ಲ. ಇತ್ತ ಪಾಂಡ್ಯರಿಂದ ಬ್ಯಾಟಿಂಗ್‌ನಲ್ಲೂ ನಿರೀಕ್ಷಿತ ರನ್ ಹರಿದು ಬರಲಿಲ್ಲ ಎಂದು ಇಂಜಾಮ್ ಉಲ್ ಹಕ್ ಹೇಳಿದ್ದಾರೆ.
Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್ ದೇವರು!
ಹಾರ್ದಿಕ್ ಪಾಂಡ್ಯ ಬದಲು ಮತ್ತೊರ್ವ ಆಲ್ರೌಂಡರ್‌ಗೆ ಅವಕಾಶ ನೀಡಿದ್ದರೆ ಬೌಲಿಂಗ್ ದಾಳಿ ವೇಳೆ ಕೊಹ್ಲಿ ಸೈನ್ಯಕ್ಕೆ ನರೆವಾಗುತ್ತಿತ್ತು. ಆದರೆ ಆಯ್ಕೆಯಲ್ಲಿ ಮಾಡಿದ ಒಂದು ತಪ್ಪು ಫಲಿತಾಂಶವನ್ನೇ ಬದಲಿಸಿತು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಹಾರ್ದಿಕ್ ಪಾಂಡ್ಯ 8 ಎಸೆತದಿಂದ 11 ರನ್ ಸಿಡಿಸಿದರು. 19ನೇ ಓವರ್‌ನಲ್ಲಿ ಪಾಂಡ್ಯ ದೊಡ್ಡ ಹೊಡೆತ ಪ್ರಯತ್ನ ಮಾಡಿದರು. ಆದರೆ ಪಾಂಡ್ಯ ಭುಜ ಹಾಗೂ ಫಿಟ್ನೆಸ್ ಅವಕಾಶ ಮಾಡಿಕೊಡಲಿಲ್ಲ. ಫಿಟ್ ಇಲ್ಲದ ಪಾಂಡ್ಯ ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿಲಿಲ್ಲ, ಬೌಲಿಂಗ್ ಮಾಡಲಿಲ್ಲ, ಫೀಲ್ಡಿಂಗ್ ಇಳಿಯಲಿಲ್ಲ. ಹೀಗಾಗಿ ಫಿಟ್ ಇಲ್ಲದ ಪಾಂಡ್ಯರನ್ನು ಆಯ್ಕೆ ಮಾಡಿದೇ ದೊಡ್ಡ ತಪ್ಪು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್
ಪಾಕಿಸ್ತಾನ ನಾಯಕ ಬಾಬರ್ ಅಜಮ್ ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ರಣತಂತ್ರ ರೂಪಿಸಿದ್ದರು. ಅತ್ಯುತ್ತಮ ತಂಡ ಆಯ್ಕೆ ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಈ ಬಾರಿ ಹೆಚ್ಚು ಆತ್ಮವಿಶ್ವಾಸದಲ್ಲಿತ್ತು. ತಂಡದ ಸ್ಟ್ರೆಂಥ್ ಮೂಲಕ ಆಡಲು ಸಜ್ಜಾಗಿತ್ತು. ಆದರೆ ಭಾರತ ಆತ್ಮವಿಶ್ವಾಸಕ್ಕಿಂತ ಹೆಚ್ಚಾಗಿ ಒತ್ತಡಲ್ಲಿತ್ತು. ಫಿಟ್ನೆಸ್ ಸಮಸ್ಯೆ, ಫಾರ್ಮ್ ಸಮಸ್ಯೆಯಿಂದ ಬಳಲಿತ್ತು. ಹೀಗಾಗಿ ಸೋಲಿಗೆ ಗುರಿಯಾಯಿತು ಎಂದು ಹಕ್ ಹೇಳಿದ್ದಾರೆ.
T20 World Cup: No Ball ನಲ್ಲಿ ಕೆ.ಎಲ್ ರಾಹುಲ್ ಔಟ್?
ಬಾಬರ್ ಅಜಮ್ ತಮ್ಮ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಸರಿಯಾಗಿ ಬಳಸಿಕೊಂಡರು. ಹೀಗಾಗಿ ಪಾಕಿಸ್ತಾನ ಬೌಲರ್‌ಗೆ ಹೆಚ್ಚಿನ ಒತ್ತಡ ಬೀಳಲಿಲ್ಲ. ಹೀಗಾಗಿ ತಮ್ಮ ಪ್ಲಾನ್ ಸರಿಯಾಗಿ ಜಾರಿಗೊಳಿಸಿದರು. ಟೀಂ ಇಂಡಿಯಾವನ್ನು ಅಬ್ಬರಿಸಲು ಬಿಡದೇ ಒತ್ತಡದಲ್ಲಿ ಸಿಲುಕಿಸುವಲ್ಲಿ ಯಶಸ್ವಿಯಾಯಿತು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.