ನವದೆಹಲಿ(ಅ.26): T20 world cup 2021 ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ(Team India) ಸೋಲು ಕಂಡಿದೆ. ಈ ಸೋಲನ್ನು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇದರ ನಡುವೆ ಭಾರತದಲ್ಲಿದ್ದುಕೊಂಡೆ ಪಾಕಿಸ್ತಾನ(Pakistan) ಪರ ಒಲವು ತೋರುತ್ತಿರುವ ಕೆಲವರು ಭಾರತ ವಿರುದ್ಧ ಪಾಕಿಸ್ತಾನ ಗೆಲವನ್ನು ಸಂಭ್ರಮಿಸಿದ್ದಾರೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ, ಭಾರತ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹೀಗೆ ಕಾನೂನು ಬಾಹಿರ ಚಟುವಟಿಕೆ(UAPA)ಕಾಯ್ದಿಯಡಿ ವಿದ್ಯಾರ್ಥಿಗಳು, ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.
ಭಾರತ ವಿರುದ್ಧ ಗೆದ್ದ ಪಾಕ್: ಅವಕಾಶ ಬಳಸಿ ಕಾಶ್ಮೀರ ವಿಚಾರ ಎತ್ತಿದ ಇಮ್ರಾನ್ ಖಾನ್
ಅಕ್ಟೋಬರ್ 24 ರಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಣಿಸಿದ ಪಾಕಿಸ್ತಾನದ ಸಂಭ್ರಮ ಹೇಳತೀರದು. ಈ ಗೆಲುವನ್ನು ಕಾಶ್ಮೀರದ(Jammu and Kashmir) ಎರಡು ಮೆಡಿಕಲ್ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ಭಾರತ ವಿರುದ್ಧ ಘೋಷಣೆ ಕೂಗಿದ್ದಾರೆ.
ಕಾಶ್ಮೀರದ ಸೌರಾದಲ್ಲಿರುವ ಇ ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ (SKIMS) ಮತ್ತು ಕರಣ್‌ನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು(GMC) ಹಾಸ್ಟೆಲ್ ವಿದ್ಯಾರ್ಥಿಗಳು ಪಾಕಿಸ್ತಾನ ಕ್ರಿಕೆಟ್ ತಂಡ 10 ವಿಕೆಟ್ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದರು. ಈ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಹಾಸ್ಟೆಲ್ ವಾರ್ಡನ್ ಕೂಡ ಭಾರತ ವಿರೋಧಿ ಘೋಷಣೆ ಕೂಗಿದ್ದಾರೆ. ಸೆಕ್ಷನ್ 13 UAPA ಕಾಯ್ದಿಯಡಿ ಈ ವಿದ್ಯಾರ್ಥಿಗಳು, ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.
Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್ ದೇವರು!
ಮೊಬೈಲ್ ಫೋನ್ ವಿಡಿಯೋ, ಹಾಸ್ಟೆಲ್ ಬಳಿ ಇರುವ ಸಿಸಿಟಿವ ದೃಶ್ಯಗಳನ್ನು ಪರಿಶೀಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಕೃತ್ಯ ಎಸಗಿರುವ ವಿದ್ಯಾರ್ಥಿಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ವಿಡಿಯೋದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಸಂಭ್ರಮಿಸಿತ್ತಿರುವ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ದೃಶ್ಯವಿದೆ. ಇದೀಗ ಪೊಲೀಸರು ವಿಡಿಯೋಗಳನ್ನು ಕಲೆ ಹಾಕಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ವಿದ್ಯಾರ್ಥಿಗಳ ಬಂಧನವಾಗಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್
ರಾಜಸ್ಥಾನದ ಉದಯಪುರದಲ್ಲಿರುವ ನೀರ್ಜ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಪಾಕಿಸ್ತಾನ ವಿರುದ್ಧದ ಗೆಲುವನ್ನು ಸಂಭ್ರಮಿಸಿದ್ದಾರೆ. ತಮ್ಮ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವ ಹಾಗೂ ಪಾಕ್ ಗೆಲುವು ಸಂಭ್ರಮಿಸುವ ಸ್ಟೇಟಸ್ ಹಾಕಿದ್ದಾರೆ. ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುತ್ತಿದ್ದೀರಾ ಎಂದು ಸಹ ಶಿಕ್ಷಕರು ಈ ಕುರಿತು ಶಿಕ್ಷಕಿ ನಫೀಸಾ ಬಳಿ ಕೇಳಿದ್ದಾರೆ. ಇದಕ್ಕೆ ನಫೀಸ್ ಯಾವುದೇ ಅಳುಕಿಲ್ಲದೆ ಹೌದು ಎಂದು ಸಂಭ್ರಮದಿಂದ ಹೇಳಿದ್ದಾರೆ. ಈ ಮಾತುಕತೆ ಬೆನ್ನಲ್ಲೇ ನಫೀಸಾ ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಷ್ಟೇ ಅಲ್ಲ ಶಾಲಾ ಆಡಳಿತ ಮಂಡಳಿಗೂ ತಲುಪಿದೆ. ತಕ್ಷಣವೇ ಸಭೆ ಕರೆದ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ನಫೀಸಾಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.