*ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು
*ಟಿ20 ವಿಶ್ವಕಪ್ ಟೂರ್ನಿ ಪಂದ್ಯದ ಬಳಿಕ ಶಮಿ ಟಾರ್ಗೆಟ್
*ಶಮಿ ಪರ ಬ್ಯಾಟ್ ಬೀಸಿದ್ದ ಸೆಹ್ವಾಗ್
*ಈ ಬೆನ್ನಲ್ಲೆ ಕ್ರಿಕೆಟ್ ದೇವರು ಸಚಿನ್ ಟ್ವೀಟ್!
ಬೆಂಗಳೂರು (ಅ. 26): T20 World Cup 2021 ಟೂರ್ನಿಯನ್ನು ಟೀಂ ಇಂಡಿಯಾ(Team India) ಸೋಲಿನೊಂದಿಗೆ ಆರಂಭಿಸಿದೆ. ಅದರಲ್ಲೂ ಬದ್ಧವೈರಿ ಪಾಕಿಸ್ತಾನ(Pakistan) ವಿರುದ್ಧದ ಸೋಲು ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ. ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಯನ್ನು (Mohammed Shami) ಟಾರ್ಗೆಟ್ ಮಾಡಿದ್ದರು. ಶಮಿಯನ್ನು ನಿಂದಿಸಿ ಹಲವರು ಪೋಸ್ಟ್ ಮಾಡಿದ್ದರು.
ಶಮಿ ವಿಶ್ವದರ್ಜೆಯ ಬೌಲರ್!
ಈ ಹಿನ್ನೆಲೆಯಲ್ಲಿ ಶಮಿ ವಿರುದ್ಧದ ಟೀಕೆಗೆ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ತಿರುಗೇಟು ನೀಡಿದ್ದರು. ವಿರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಟೀಕಾಕಾರ ವಿರುದ್ಧ ಸಿಡಿದೆದ್ದಿದ್ದರು ಶಮಿ ಬೆಂಬಲಕ್ಕೆ ನಾವಿದ್ದೇವೆ ಎಂದು ಟ್ವೀಟ್ ಮಾಡಿ ಬೆಂಬಲ ಸೂಚಿಸಿದರು. ಈಗ ಈ ಸಾಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಬೆಂಬಲಿಸಿ ಟ್ವೀಟ್ ಮಾಡಿರುವ ಸಚಿನ್ "ನಾವು ಭಾರತವನ್ನು ಬೆಂಬಲಿಸುವಾಗ ತಂಡದಲ್ಲಿರುವ ಭಾರತವನ್ನು ಪ್ರತಿನಿಧಿಸುವ ಪ್ರತಿ ಆಟಗಾರರನ್ನು ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ಒಬ್ಬರು ವಿಶ್ವ ದರ್ಜೆಯ ಬೌಲರ್ ಆಗಿದ್ದಾರೆ. ಎಲ್ಲ ಆಟಗಾರರು ಅನುಭವಿಸುವ ಕೆಟ್ಟ ದಿನವೊಂದಿರುತ್ತದೆ, ಅದನ್ನು ಶಮಿ ಮೊನ್ನೆ ಅನುಭವಿಸಿದ್ದಾರೆ. ನಾನು ಭಾರತ ಮತ್ತು ಶಮಿ ಪರ ನಿಲ್ಲುತ್ತೇನೆʼ ಎಂದು ಬರೆದಿದ್ದಾರೆ.
When we support , we support every person who represents Team India. is a committed, world-class bowler. He had an off day like any other sportsperson can have.
I stand behind Shami & Team India.
T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!
ಪಾಕಿಸ್ತಾನ ವಿರುದ್ಧದ ಸೋಲಿಗೆ ಹಲವು ಕಾರಣಗಳಿವೆ. ಆದರೆ ನೆಟ್ಟಿಗರು ಶಮಿ(Mohammed shami) ಪ್ರದರ್ಶನವನ್ನು ಟೀಕಿಸಿದ್ದರು. ಪಾಕಿಸ್ತಾನ ವಿರುದ್ಧ ಮೊಹಮ್ಮದ್ ಶಮಿ ವಿಕೆಟ್ ಕಬಳಿಸಿದ ದುಬಾರಿಯಾಗಿದ್ದಾರೆ. ಭಾರತ ತಂಡದಲ್ಲಿರುವ ಪಾಕಿಸ್ತಾನ ಪ್ರೇಮಿ ಮೊಹಮ್ಮದ್ ಶಮಿ ಎಂದು ನಿಂದಿಸಲಾಗಿತ್ತು. ಶಮಿ ಪಾಕಿಸ್ತಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಬೌಲಿಂಗ್ ಮಾಡಿದ್ದಾರೆ ಎಂದು ನಿಂದನೆ ಮಾಡಲಾಗಿತ್ತು.
ಶಮಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಸೆಹ್ವಾಗ್!
ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ನಿಜಕ್ಕೂ ಆಘಾತವಾಗಿದೆ. ಮೊಹಮ್ಮದ್ ಶಮಿ ಚಾಂಪಿಯನ್ ಬೌಲರ್. ಭಾರತ ತಂಡದ ಕ್ಯಾಪ್ ಧರಿಸಿದ ಆಟಗಾರ, ಭಾರತವನ್ನು ಅತೀಯಾಗಿ ಪ್ರೀತಿಸುತ್ತಾನೆ ಸಾಮಾಜಿಕ ಜಾಲತಾಣದಲ್ಲಿನ ದಾಳಿಕೋರರಿಗಿಂತ ದೇಶದ ಮೇಲೆ ಹೆಚ್ಚು ಪ್ರೀತಿ ಟೀಂ ಇಂಡಿಯಾ ಆಟಗಾರನಿಗಿದೆ. ನಾವು ಶಮಿ ಪರ ಇದ್ದೇವೆ. ಮುಂದಿನ ಪಂದ್ಯದಲ್ಲಿ ಜಲ್ವಾ ತೋರಿಸಿ ಎಂದು ಶಮಿ ಪರ ಸೆಹ್ವಾಗ್ ಟ್ವೀಟ್ (Virender Sehwag) ಮಾಡಿದ್ದರು.
ನಾನೂ ಕೂಡ ಇದರ ಭಾಗವಾಗಿದ್ದೆ : ಇರ್ಫಾನ್ ಪಠಾಣ್
T20 World Cup: ಟೀಂ ಇಂಡಿಯಾ ಸೋಲಿನೊಂದಿಗೆ ಮೌಕಾ ಮೌಕಾ ಜಾಹೀರಾತಿಗೆ ತೆರೆ..!
ಶಮಿ ಪರ ನಿಂತು ಟ್ವೀಟ್ ಮಾಡಿರುವ ಮಾಜಿ ವೇಗಿ ಇರ್ಫಾನ್ ಪಠಾಣ್ (Irfan Pathan), "ಸೋಲು ಗೆಲುವು ಇದ್ದಿದ್ದೆ. ನಾನು ಕೂಡ ಭಾರತ ಹಾಗೂ ಪಾಕಿಸ್ತಾನ ಹೋರಾಟದ ಭಾಗವಾಗಿದ್ದೆ. ನಾವು ಸೋತಿದ್ದೇವೆ. ಆದರೆ ಪಾಕಿಸ್ತಾನಕ್ಕೆ ಹೋಗಲು ಹೇಳಿಲ್ಲ. ಈ ರೀತಿಯ ಟೀಕೆ ನಿಲ್ಲಬೇಕು ಎಂದು" ಬರೆದಿದ್ದರು. ಶಮಿ ಪರ ಕ್ರಿಕೆಟ್ ದಿಗ್ಗಜರ ಸರಣಿ ಟ್ವೀಟ್‌ಗಳ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಟ್ವೀಟ್ ಮಾಡುವ ಮೂಲಕ ಶಮಿಗೆ ಬೆಂಬಲ ಸೂಚಿಸಿದ್ದರು. ಈಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟ್ವೀಟ್ ಇದಕ್ಕೆ ಇನ್ನಷ್ಷು ಬಲ ತುಂಬಿದೆ.