ಇಲ್ಲಿನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಯುಎಸ್‌ಎ ಬೌಲರ್‌ಗಳೆದರು ರನ್ ಗಳಿಸಲು ಪರದಾಡಿತು. ರಿಜ್ವಾನ್ 9 ರನ್ ಗಳಿಸಿದರೆ, ಉಸ್ಮಾನ್ ಖಾನ್ 3 ರನ್ ಗಳಿಸಿ ಚಿಕ್ಕಮಗಳೂರು ಮೂಲದ ಕನ್ನಡಿಗ ನೂಸ್ತುಶ್ ಕೆಂಜಿಗೆ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಫಖರ್ ಜಮಾನ್ ಬ್ಯಾಟಿಂಗ್ ಕೇವಲ 11 ರನ್‌ಗಳಿಗೆ ಸೀಮಿತವಾಯಿತು.
ಡಲ್ಲಾಸ್: ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್‌ಎ) ಕ್ರಿಕೆಟ್‌ನಲ್ಲೂ ತಮ್ಮ ಹೆಜ್ಜೆ ಗುರುತು ದಾಖಲಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ರನ್ನರ್ ಅಪ್ ಆಗಿದ್ದ ಪಾಕಿಸ್ತಾನ ಎದುರು ಯುಎಸ್‌ಎ ತಂಡವು ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿ 'ಎ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ನೆರೆಯ ಪಾಕಿಸ್ತಾನಕ್ಕೆ ಮೊದಲ ಪಂದ್ಯದಲ್ಲೇ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ಯುಎಸ್‌ಎ ಎದುರು ಅವಮಾನಕಾರಿ ಸೋಲು ಎದುರಾಗಿದೆ. ಕನ್ನಡಿಗ ನೂಸ್ತುಶ್ ಕೆಂಜಿಗೆ ಮಾರಕ ದಾಳಿ ನೆರವಿನಿಂದ ಅಮೆರಿಕ ತಂಡವು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಯುಎಸ್‌ಎ ಬೌಲರ್‌ಗಳೆದರು ರನ್ ಗಳಿಸಲು ಪರದಾಡಿತು. ರಿಜ್ವಾನ್ 9 ರನ್ ಗಳಿಸಿದರೆ, ಉಸ್ಮಾನ್ ಖಾನ್ 3 ರನ್ ಗಳಿಸಿ ಚಿಕ್ಕಮಗಳೂರು ಮೂಲದ ಕನ್ನಡಿಗ ನೂಸ್ತುಶ್ ಕೆಂಜಿಗೆ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಫಖರ್ ಜಮಾನ್ ಬ್ಯಾಟಿಂಗ್ ಕೇವಲ 11 ರನ್‌ಗಳಿಗೆ ಸೀಮಿತವಾಯಿತು.
The American fairytale continues 🇺🇸😍
USA beat Pakistan in one of the biggest results in history and are ready to take on India next.
Get your tickets now ➡️ https://t.co/FokQ0Cegga pic.twitter.com/ydqEQ3Onbx
undefined
ವಿಶ್ವಕಪ್ ಗೆದ್ದುಕೊಟ್ಟ ನಾಯಕ ಈಗ ವಾಟರ್ ಬಾಯ್..! ಆಸೀಸ್ ಸಕ್ಸಸ್‌ಗೆ ಇದೇ ರೀಸನ್ ಎಂದ ನೆಟ್ಟಿಗರು
ಇನ್ನು ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ರಕ್ಷಣಾತ್ಮಕ ಆಟವಾಡಿದ ನಾಯಕ ಬಾಬರ್ ಅಜಂ 43 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ ಬಾರಿಸಿದರೆ, ಶಾದಾಬ್ ಖಾನ್ ಕೇವಲ 25 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 40 ರನ್ ಬಾರಿಸಿ ನೂಸ್ತುಶ್ ಕೆಂಜಿಗೆ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಅಜಂ ಖಾನ್ ಕೂಡಾ ಶೂನ್ಯ ಸುತ್ತಿ ನೂಸ್ತುಶ್ ಕೆಂಜಿಗೆ ಅವರಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಕೊನೆಯಲ್ಲಿ ಇಫ್ತಿಕಾರ್ ಅಹಮದ್ 18 ಹಾಗೂ ಶಾಹೀನ್ ಅಫ್ರಿದಿ ಅಜೇಯ 23 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಪಾಕ್ ನಿಗದಿತ 20 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.
ಟಿ20 ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ನಿರ್ಮಿಸಿದ ಉಗಾಂಡದ 43 ವರ್ಷದ ಆಟಗಾರ..!
ಯುಎಸ್‌ಎ ಪರ ಮಿಂಚಿದ ಕನ್ನಡಿಗ: ಇನ್ನು ಕಳೆದ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ರನ್ನರ್ ಅಪ್ ಆಗಿರುವ ಪಾಕಿಸ್ತಾನ ಎದುರು ಕನ್ನಡದ ವೇಗಿ ನೂಸ್ತುಶ್ ಕೆಂಜಿಗೆ ಮಾರಕ ದಾಳಿ ನಡೆಸಿ ಮಿಂಚಿದರು. ಪಾಕಿಸ್ತಾನದ ಪ್ರಮುಖ ಮೂವರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಿ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಅಂತಿಮವಾಗಿ ನೂಸ್ತುಶ್ ಕೆಂಜಿಗೆ 4 ಓವರ್‌ನಲ್ಲಿ ಕೇವಲ 30 ರನ್ ನೀಡಿ 3 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಎಸ್‌ಎ ತಂಡವು ಆರಂಭದಲ್ಲೇ ಸ್ಟೀವನ್ ಟೇಲರ್(12) ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದು ತುದಿಯಲ್ಲಿ ನಾಯಕ ಮುನಾಕ್ ಪಟೇಲ್(50) ಸ್ಪೋಟಕ ಅರ್ಧಶತಕ ಹಾಗೂ ಆಂಡ್ರಿಸ್ ಗುಸ್(35), ಆರೋನ್ ಜೋನ್ಸ್(36) ಹಾಗೂ ನಿತೀಶ್ ಕುಮಾರ್(14) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
ಇನ್ನು ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ಪರ ಬೌಲಿಂಗ್ ಮಾಡಿದ ಅನುಭವಿ ವೇಗಿ ಇತರೆ ರನ್ ರೂಪದಲ್ಲೇ 7 ರನ್ ಸಹಿತ ಒಟ್ಟು 18 ರನ್ ಚಚ್ಚಿಸಿಕೊಂಡರು. ಇನ್ನು ಸೂಪರ್ ಓವರ್‌ನಲ್ಲಿ 19 ರನ್ ಗುರಿ ಪಡೆದ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೂಪರ್ ಓವರ್‌ನಲ್ಲಿ ಪಾಕ್ ಎದುರು ಯುಎಸ್‌ಎ 5 ರನ್ ರೋಚಕ ಜಯ ಸಾಧಿಸಿತು.