ಪಾಕ್ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್..! ಗಾಯಾಳು ರೋಹಿತ್ ಬಗ್ಗೆ ಇಲ್ಲಿದೆ ಹೊಸ ಅಪ್‌ಡೇಟ್

By Naveen Kodase  |  First Published Jun 6, 2024, 1:44 PM IST

ಭಾರತದ 9ನೇ ಓವರ್‌ನ ಎರಡನೇ ಇನಿಂಗ್ಸ್‌ನಲ್ಲಿ ಲಿಟ್ಲ್ ಹಾಕಿದ ಬೌನ್ಸರ್, ರೋಹಿತ್ ಶರ್ಮಾ ಭುಜಕ್ಕೆ ಅಪ್ಪಳಿಸಿತು, ಇದಾದ ಬಳಿಕ 10ನೇ ಓವರ್‌ನ ಕೊನೆಯ ಎಸೆತವನ್ನು ಎದುರಿಸಿ ಅರ್ಧಶತಕ ಪೂರೈಸಿ ಹಿಟ್‌ಮ್ಯಾನ್ ಪೆವಿಲಿಯನ್‌ಗೆ ವಾಪಾಸಾದರು. 


ನ್ಯೂಯಾರ್ಕ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐರ್ಲೆಂಡ್ ಎದುರು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಆದರೆ ಐರ್ಲೆಂಡ್ ಎದುರಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದ ಬಳಿಕ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ವಾಪಾಸ್ಸಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಆತಂಕಕ್ಕೆ ಈಡು ಮಾಡಿದೆ. ಮುಂಬರುವ ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿದ್ದು, ಇದೀಗ ಈ ಕುರಿತಂತೆ ಹೊಸ ಅಪ್‌ಡೇಟ್ ಹೊರಬಿದ್ದಿದೆ.

ಹೌದು, ರೋಹಿತ್ ಶರ್ಮಾ, ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿ ಅಜೇಯ 52 ರನ್ ಸಿಡಿಸಿದರು. ಇವರ ಈ ಸೊಗಸಾದ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಆದರೆ ಐರ್ಲೆಂಡ್ ವೇಗಿ ಜೋಶ್ವಾ ಲಿಟ್ಲ್ ಎಸೆದ ಚೆಂಡು ರೋಹಿತ್ ಶರ್ಮಾ ಭುಜಕ್ಕೆ ಅಪ್ಪಳಿಸಿತ್ತು. ಇದಾದ ಕೆಲ ಹೊತ್ತಿನಲ್ಲೇ ರೋಹಿತ್ ಶರ್ಮಾ ರಿಟೈರ್ಡ್‌ ಹರ್ಟ್ ಆಗಿ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದರು.

Latest Videos

undefined

ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್: 10 ಸೆಕೆಂಡ್‌ ಜಾಹೀರಾತಿಗೆ ಕನಿಷ್ಠ ₹50 ಲಕ್ಷ ನಿಗದಿ?

ಭಾರತದ 9ನೇ ಓವರ್‌ನ ಎರಡನೇ ಇನಿಂಗ್ಸ್‌ನಲ್ಲಿ ಲಿಟ್ಲ್ ಹಾಕಿದ ಬೌನ್ಸರ್, ರೋಹಿತ್ ಶರ್ಮಾ ಭುಜಕ್ಕೆ ಅಪ್ಪಳಿಸಿತು, ಇದಾದ ಬಳಿಕ 10ನೇ ಓವರ್‌ನ ಕೊನೆಯ ಎಸೆತವನ್ನು ಎದುರಿಸಿ ಅರ್ಧಶತಕ ಪೂರೈಸಿ ಹಿಟ್‌ಮ್ಯಾನ್ ಪೆವಿಲಿಯನ್‌ಗೆ ವಾಪಾಸಾದರು. 

ಇನ್ನು ಐರ್ಲೆಂಡ್ ಎದುರು ಪಂದ್ಯ ಗೆಲ್ಲುತ್ತಿದ್ದಂತೆಯೇ ಮಾತನಾಡಿದ ರೋಹಿತ್ ಶರ್ಮಾ, ತಮ್ಮ ರಿಟೈರ್ಡ್‌ ಹರ್ಟ್ ಕುರಿತಂತೆ ಸ್ವತಃ ಅಪ್‌ಡೇಟ್ ನೀಡುವ ಮೂಲಕ ಅಭಿಮಾನಿಗಳಿಗಿದ್ದ ಆತಂಕ ದೂರ ಮಾಡಿದರು. "ಹೌದು ನನ್ನ ತೋಳು ಸ್ವಲ್ಪ ನೋಯುತ್ತಿದೆ, ಆದರೆ ಆತಂಕಪಡುವಂತದ್ದು ಏನೂ ಆಗಿಲ್ಲ" ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.

ಕೇವಲ 25 ಡಾಲರ್ ಕೊಟ್ರೆ ಪಾಕ್ ಆಟಗಾರರ ಜತೆ ಪ್ರೈವೇಟ್ ಡಿನ್ನರ್..! ಎಂಥಾ ಗತಿ ಬಂತು ಪಾಕಿಸ್ತಾನಕ್ಕೆ ಎಂದ ನೆಟ್ಟಿಗರು

ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯಕ್ಕೆ ನಾಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಆದರೆ ಈ ಮೈದಾನದ ಪಿಚ್‌ ವ್ಯತಿರಿಕ್ತವಾಗಿ ವರ್ತಿಸಿದ್ದು, ಕೆಲವೊಮ್ಮೆ ದಿಢೀರ್ ಪುಟಿತ ಕಂಡರೆ ಮತ್ತೆ ಕೆಲವೊಮ್ಮೆ ಪುಟಿತ ಕಾಣುತ್ತಿರಲಿಲ್ಲ. ಈ ಪಿಚ್‌ ಬಗ್ಗೆ ಕ್ರಿಕೆಟ್ ತಜ್ಞರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಮುಂಬರುವ ಮೇ 09ರಂದು ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಮೇಲ್ನೋಟಕ್ಕೆ ಎರಡು ತಂಡಗಳು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನಿರೀಕ್ಷಿಸಲಾಗಿದೆ.

click me!