31 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಲಂಕಾ, 45 ಆಗುವಷ್ಟರಲ್ಲಿ ಮತ್ತೆ 5 ವಿಕೆಟ್ ನಷ್ಟಕ್ಕೊಳಗಾಯಿತು. ಆಫ್ರಿಕಾದ ದಾಳಿ ಮುಂದೆ ರನ್ ಗಳಿಸಲು ತಿಣುಕಾಡಿದ ಲಂಕಾ ಯಾವ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ. ಕುಸಾಲ್(19), ಮ್ಯಾಥ್ಯೂಸ್(16) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನೋಕಿಯಾ 4 ಓವರಲ್ಲಿ 7 ರನ್‌ಗೆ 4 ವಿಕೆಟ್ ಕಿತ್ತರು.
ನ್ಯೂಯಾರ್ಕ್: ಟಿ20 ವಿಶ್ವಕಪ್ ಮತ್ತೊಂದು ಲೋ ಸ್ಕೋರ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಎರಡೂ ಇನ್ನಿಂಗ್ಸ್ ಸೇರಿ 160ಕ್ಕಿಂತ ಕಡಿಮೆ ಮೊತ್ತ ದಾಖಲಾದ ಸೋಮವಾರದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗೆಲುವು ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಹರಿಣಗಳ ಮಾರಕ ದಾಳಿಗೆ ತತ್ತರಿಸಿ 19.1 ಓವರ್‌ಗಳಲ್ಲಿ 77 ರನ್‌ಗೆ ಸರ್ವಪತನ ಕಂಡಿತು. ಇದು ಟಿ20ಯಲ್ಲಿ ಲಂಕಾದ ಅತಿ ಕಡಿಮೆ ಸ್ಕೋರ್.
31 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಲಂಕಾ, 45 ಆಗುವಷ್ಟರಲ್ಲಿ ಮತ್ತೆ 5 ವಿಕೆಟ್ ನಷ್ಟಕ್ಕೊಳಗಾಯಿತು. ಆಫ್ರಿಕಾದ ದಾಳಿ ಮುಂದೆ ರನ್ ಗಳಿಸಲು ತಿಣುಕಾಡಿದ ಲಂಕಾ ಯಾವ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ. ಕುಸಾಲ್(19), ಮ್ಯಾಥ್ಯೂಸ್(16) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನೋಕಿಯಾ 4 ಓವರಲ್ಲಿ 7 ರನ್‌ಗೆ 4 ವಿಕೆಟ್ ಕಿತ್ತರು.
ಸುಲಭ ಗುರಿ ಸಿಕ್ಕರೂ ಆಫ್ರಿಕಾಕ್ಕೆ ಸುಲಭದಲ್ಲಿ ಗೆಲುವು ಲಭಿಸರಲಿಲ್ಲ. ನಿಧಾನವಾಗಿ ಒಂದೊಂದೇ ರನ್ ಕಲೆಹಾಕುತ್ತಾ ಬಂದ ತಂಡ 16.2 ಓವರಲ್ಲಿ ಗೆಲುವಿನ ದಡ ಸೇರಿತು. ಡಿ ಕಾಕ್ 20, ಕ್ಲಾಸೆನ್ 19 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಲಂಕಾ 19.1 ಓವರಲ್ಲಿ 77/10 (ಕುಸಾಲ್ 19, ನೋಕಿಯಾ 4-7, ರಬಾಡ 2-21, ಕೇಶವ್ 2-22)
ದ.ಆಫ್ರಿಕಾ 16.2 ಓವರಲ್ಲಿ 80/4 (ಡಿ ಕಾಕ್ 20, ಕ್ಲಾಸೆನ್ 19*, ಹಸರಂಗ 2-22)
ಪಂದ್ಯಶ್ರೇಷ್ಠ: ಏನ್ರಿಚ್ ನೋಕಿಯಾ.
ಟಿ20 ವಿಶ್ವಕಪ್: ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ vs ಸ್ಕಾಟ್ಲೆಂಡ್
ಬ್ರಿಡ್ಜ್‌ಟೌನ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.
ದೊಡ್ಡ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.ಇಂಗ್ಲೆಂಡ್ ತಂಡದಲ್ಲಿ ತಜ್ಞ ಟಿ20 ಆಟಗಾರರನ್ನು ಹೊಂದಿದ್ದು, ಈ ಸಲವೂ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
ನಾಯಕ ಬಟ್ಲರ್, ಫಿಲ್ ಸಾಲ್ಟ್, ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ವಿಲ್ ಜ್ಯಾಕ್ಸ್, ಲಿವಿಂಗ್‌ಸ್ಟೋನ್ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದ್ದು, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಟಾಪ್ಲಿ ಸೇರಿದಂತೆ ಮಾರಕ ವೇಗಿಗಳಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಲ್ರೌಂಡರ್‌ಗಳೂ ತಂಡದ ಪ್ಲಸ್ ಪಾಯಿಂಟ್.
ಅತ್ತ ಸ್ಕಾಟ್ಲೆಂಡ್ ಅರ್ಹತಾ ಸುತ್ತಿನ ಎಲ್ಲಾ 6 ಪಂದ್ಯಗಳಲ್ಲೂ ಗೆದ್ದು ಪ್ರಧಾನ ಸುತ್ತಿಗೇರಿದ್ದು, ಕೆಲ ಪಂದ್ಯಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಕ್ಕೆ ಸೋಲುಣಿಸುವ ಮೂಲಕ ‘ಬಿ’ ಗುಂಪಿನಲ್ಲಿ ಅಂಕ ಖಾತೆ ತೆರೆಯುವ ಕಾತರದಲ್ಲಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.
ಡಿಡಿ ಸ್ಪೋರ್ಟ್ಸ್ ಚಾನೆಲಲ್ಲಿ ಟಿ20 ವಿಶ್ವಕಪ್ ಪ್ರಸಾರ
ನವದೆಹಲಿ: ವೆಸ್ಟ್‌ಇಂಡೀಸ್, ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪ್ರಸಾರ ಮಾಡುವುದಾಗಿ ಪ್ರಸಾರ ಭಾರತಿ ಸೋಮವಾರ ಮಾಹಿತಿ ನೀಡಿದೆ. ಅಲ್ಲದೆ ಜು.26ರಿಂದ ಆ.11ರ ವರೆಗೆ ನಡೆಲಿರುವ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿ, ಭಾರತ-ಶ್ರೀಲಂಕಾ ನಡುವಿನ ಸರಣಿ, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಫೈನಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದಾಗಿ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ತಿಳಿಸಿದ್ದಾರೆ.