ಟೀಂ ಇಂಡಿಯಾ ಕೋಚ್ ಆಯ್ಕೆ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ಗೌತಮ್ ಗಂಭೀರ್..!

By Naveen Kodase  |  First Published Jun 3, 2024, 5:32 PM IST

ಹಾಲಿ ಕೋಚ್ ರಾಹುಲ್‌ ದ್ರಾವಿಡ್‌ ಅವಧಿ ಟಿ20 ವಿಶ್ವಕಪ್‌ಗೆ ಅಂತ್ಯವಾಗಲಿದೆ. ಹೊಸ್ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಗಂಭೀರ್ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಯಾಗುತ್ತಿದೆ.


ದುಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ನಡುವೆಯೇ ಈ ಬಗ್ಗೆ ಗೌತಮ್ ಗಂಭೀರ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ ಎಂದಿದ್ದಾರೆ. 

ಹಾಲಿ ಕೋಚ್ ರಾಹುಲ್‌ ದ್ರಾವಿಡ್‌ ಅವಧಿ ಟಿ20 ವಿಶ್ವಕಪ್‌ಗೆ ಅಂತ್ಯವಾಗಲಿದೆ. ಹೊಸ್ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಗಂಭೀರ್ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಯಾಗುತ್ತಿದೆ. ಈ ನಡುವೆ ಇದರ ಬಗ್ಗೆ ಅಬುಧಾಬಿಯಲ್ಲಿ ಮಾತನಾಡಿದ ಗಂಭೀರ್, 'ಕೋಚ್ ಆಗುತ್ತೇನೆಂಬ ವರದಿಗಳಿಗೆ ನಾನು ಉತ್ತರಿಸಲ್ಲ. ಆದರೆ ಭಾರತ ತಂಡದ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಕೋಚ್ ಆಗಿ 140 ಕೋಟಿ ಜನ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆ' ಎಂದು ಹೇಳಿದ್ದಾರೆ.

Tap to resize

Latest Videos

ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ ಭಾರತ:

ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಲು ಯಶಸ್ವಿಯಾಗಿತ್ತು. ಇದಾದ ಬಳಿಕ ಕಳೆದೊಂದು ದಶಕದಿಂದ ಟೀಂ ಇಂಡಿಯಾ ಐಸಿಸಿ ಟ್ರೋಫಿ ಎದುರಿಸುತ್ತಲೇ ಬಂದಿದೆ. ಟೀಂ ಇಂಡಿಯಾ 2014ರ ಐಸಿಸಿ ಟಿ20 ವಿಶ್ವಕಪ್‌, 2015ರ ಏಕದಿನ ವಿಶ್ವಕಪ್, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2019ರ ಐಸಿಸಿ ಏಕದಿನ ವಿಶ್ವಕಪ್, 2021ರ ಐಸಿಸಿ ಟಿ20 ವಿಶ್ವಕಪ್, 2022ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಟೀಂ ಇಂಡಿಯಾ ಕಪ್ ಗೆಲ್ಲಲು ವಿಫಲವಾಗುತ್ತಲೇ ಬಂದಿದೆ. ಇದೀಗ ಕೆ ಎಲ್ ರಾಹುಲ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಸಕಲ ರೀತಿಯಲ್ಲಿ ಸಜ್ಜಾಗಿದೆ.

ಇನ್ನೊಂದೆಡೆ ಗೌತಮ್ ಗಂಭೀರ್, ಇತ್ತೀಚೆಗಷ್ಟೇ ಮುಕ್ತಾಯವಾದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಶಸ್ವಿ ಮೆಂಟರ್ ಆಗಿ ಹೊರಹೊಮ್ಮಿದ್ದರು. ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್ ಗಂಭೀರ್, ಇದೀಗ ಒಂದು ದಶಕದ ಬಳಿಕ ಮೆಂಟರ್ ಆಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ಇನ್ನೊಂದೆಡೆ ಭಾರತ ತಂಡವು ಐಸಿಸಿ ಟ್ರೋಫಿ ಬರ ನೀಗಿಸಲು ಗೌತಮ್ ಗಂಭೀರ್‌ಗೆ ಟೀಂ ಇಂಡಿಯಾ ಹೆಡ್ ಕೋಚ್ ಪಟ್ಟ ಕಟ್ಟಲಾಗುತ್ತದೆ ಎನ್ನುವ ಮಾತುಗಳು ಜೋರಾಗಿದ್ದು, ಇದು ನಿಜವಾಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

click me!