T20 World Cup 2024 ನಿರೀಕ್ಷೆಯಂತೆಯೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ತಡವಾಗಿ ಆರಂಭ

By Naveen Kodase  |  First Published Jun 27, 2024, 7:49 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಕದನವು ಟೀಂ ಇಂಡಿಯಾ ಪಾಲಿಗೆ ರಿವೇಂಜ್ ಮ್ಯಾಚ್ ಎನಿಸಿಕೊಂಡಿದೆ. ಯಾಕೆಂದರೆ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಇಂಗ್ಲೆಂಡ್ ತಂಡವು 10 ವಿಕೆಟ್ ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದೆ.


ಗಯಾನ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸಮಿಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಸದ್ಯ ಮಳೆ ನಿಂತಿದ್ದರೂ ಔಟ್‌ಫೀಲ್ಡ್‌ ಒದ್ದೆಯಾಗಿರುವುದರಿಂದ ಟಾಸ್ ಕೆಲಕಾಲ ತಡವಾಗಲಿದೆ. 

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಕದನವು ಟೀಂ ಇಂಡಿಯಾ ಪಾಲಿಗೆ ರಿವೇಂಜ್ ಮ್ಯಾಚ್ ಎನಿಸಿಕೊಂಡಿದೆ. ಯಾಕೆಂದರೆ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಇಂಗ್ಲೆಂಡ್ ತಂಡವು 10 ವಿಕೆಟ್ ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದೆ.

Tap to resize

Latest Videos

undefined

ಟಿ20 ವಿಶ್ವಕಪ್: ಇಂಗ್ಲೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿ; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

ಒಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟೂರ್ನಿಯಲ್ಲಿ ಅಜೇಯ ನಾಗಾಲೋಟದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದು, ಇದೀಗ ಮತ್ತೊಂದು ಗೆಲುವು ಸಾಧಿಸಿ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತು ಆತಂಕಕ್ಕೊಳಗಾಗಿದ್ದ ಇಂಗ್ಲೆಂಡ್ ತಂಡವು ಆ ಬಳಿಕ ಎಚ್ಚೆತ್ತುಕೊಂಡು ಸೆಮೀಸ್‌ ಪ್ರವೇಶಿಸಿದೆ.

ಮೀಸಲು ದಿನವಿಲ್ಲ: ಮಳೆಗೆ ರದ್ದಾದ್ರೆ ಭಾರತ ಫೈನಲ್‌ಗೆ!

ಗಯಾನಾದಲ್ಲಿ ಬುಧವಾರ ಮಳೆ ಮುನ್ಸೂಚನೆ ಇದ್ದು, ಭಾರತ-ಇಂಗ್ಲೆಂಡ್‌ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಇದು ಬೆಳಗ್ಗಿನ ಪಂದ್ಯವಾಗಿದ್ದು, ಹೀಗಾಗಿ ಪಂದ್ಯ ಮುಕ್ತಾಯಗೊಳಿಸಲು ಹೆಚ್ಚುವರಿ 250 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರಲ್ಲೂ ಫಲಿತಾಂಶ ಸಾಧ್ಯವಾಗದೆ ಇದ್ದರೆ, ಸೂಪರ್‌-8 ಹಂತದ ಗುಂಪು-1ರಲ್ಲಿ ಅಗ್ರಸ್ಥಾನ ಪಡೆದ ಭಾರತ ಫೈನಲ್‌ಗೇರಲಿದೆ. ಗುಂಪು-2ರಲ್ಲಿದ್ದ ಇಂಗ್ಲೆಂಡ್‌ 2ನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಕೊಹ್ಲಿ, ರಿಷಭ್‌, ಸೂರ್ಯಕುಮಾರ್‌, ಶಿವಂ ದುಬೆ, ಹಾರ್ದಿಕ್‌, ಅಕ್ಷರ್‌, ಜಡೇಜಾ, ಕುಲ್ದೀಪ್‌, ಬೂಮ್ರಾ, ಅರ್ಶ್‌ದೀಪ್‌,

ಇಂಗ್ಲೆಂಡ್‌: ಬಟ್ಲರ್‌(ನಾಯಕ), ಸಾಲ್ಟ್‌, ಬೇರ್‌ಸ್ಟೋವ್‌, ಬ್ರೂಕ್‌, ಮೊಯೀನ್‌, ಲಿವಿಂಗ್‌ಸ್ಟೋನ್, ಕರ್ರನ್‌, ಜೊರ್ಡನ್‌, ಆರ್ಷರ್‌, ರಶೀದ್, ರೀಸ್‌ ಟಾಪ್ಲಿ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

click me!