T20 World Cup 2024: ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ ನಡೆಯುತ್ತಾ? ಸದ್ಯದ ಹವಾಮಾನ ವರದಿ ಏನು?

By Naveen Kodase  |  First Published Jun 27, 2024, 1:42 PM IST

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಇಂದಿನ ವೆದರ್‌ ರಿಪೋರ್ಟ್ ಹೇಗಿದೆ ನೋಡೋಣ ಬನ್ನಿ


ಗಯಾನ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಡಲಿವೆ. ಈ ಹೈವೋಲ್ಜೇಜ್ ಪಂದ್ಯಕ್ಕೆ ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ಎರಡನೇ ಸೆಮಿಫೈನಲ್ ಪಂದ್ಯದತ್ತ ನೆಟ್ಟಿದೆ. ಈಗಾಗಲೇ ಇಂದು ಬೆಳಗ್ಗೆ ನಡೆದ ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್ ಪಂದ್ಯವು ಯಾವುದೇ ಮಳೆಯ ಅಡಚಣೆಯಿಲ್ಲದೇ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಾಗಿ ಎರಡನೇ ಸೆಮಿಫೈನಲ್ ಪಂದ್ಯ ಏನಾಗಬಹುದು ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಹೌದು, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯವು ಸ್ಥಳೀಯ ಕಾಲಮಾನ ಬೆಳಗ್ಗೆ 10.30 ಹಾಗೂ ಭಾರತೀಯ ಕಾಲಮಾನ ಸಂಜೆ 8 ಗಂಟೆಯಿಂದ ಎರಡನೇ ಸಮಿಫೈನಲ್ ಪಂದ್ಯವು ಆರಂಭವಾಗಬೇಕಿದೆ. ಆದರೆ ಈ ಸಮಯದಲ್ಲಿ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ. 

Latest Videos

undefined

ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..! ದಿಟ್ಟ ನಿರ್ಧಾರ ಕೈಗೊಂಡ್ರಾ ರೋಹಿತ್?

ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ..?

Accuweather ವರದಿಯ ಪ್ರಕಾರ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುವ ವೇಳೆಯಲ್ಲಿ ಬಹುತೇಕ ಸಮಯ ಮಳೆ ಸುರಿಯಲಿದೆ ಎಂದು ವರದಿ ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಗಯಾನದ ಸ್ಥಳೀಯ ಕಾಲಮಾನ 9 ಗಂಟೆ(ಭಾರತೀಯ ಕಾಲಮಾನ 6.30)ಯಿಂದಲೇ ಮಳೆ ಸುರಿಯಲಿದ್ದು, 11 ಗಂಟೆಯ ವೇಳೆಗೆ (ಭಾರತೀಯ ಕಾಲಮಾನ 8.30ಕ್ಕೆ) ತುಂಬಾ ಜೋರಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

T20 World Cup 2024: ಸೆಮೀಸ್‌ನಲ್ಲಿ ಭಾರತಕ್ಕಿಂದು ಇಂಗ್ಲೆಂಡ್ ಚಾಲೆಂಜ್; 3ನೇ ಫೈನಲ್‌ ಮೇಲೆ ಟೀಂ ಇಂಡಿಯಾ ಕಣ್ಣು

ಗಯಾನದಲ್ಲಿಂದು ಮಳೆ ಸುರಿಯುವ ಸಾಧ್ಯತೆಯ ಹವಾಮಾನ ವರದಿ ಹೀಗಿದೆ:

ಸ್ಥಳೀಯ ಕಾಲಮಾನ(ಭಾರತೀಯ ಕಾಲಮಾನ)

9:00 AM (6:30 PM IST) - 40 %  ಮಳೆ ಬರುವ ಸಾಧ್ಯತೆ

10:00 AM (7:30 PM IST) - 66 % ಮಳೆ ಬರುವ ಸಾಧ್ಯತೆ

11:00 AM (8:30 PM IST) - 75 % ಮಳೆ ಬರುವ ಸಾಧ್ಯತೆ

12:00 PM (9:30 PM IST) - 49 % ಮಳೆ ಬರುವ ಸಾಧ್ಯತೆ

1:00 PM (10:30 PM IST) - 34 % ಮಳೆ ಬರುವ ಸಾಧ್ಯತೆ

2:00 PM (11:30 PM IST) - 34 % ಮಳೆ ಬರುವ ಸಾಧ್ಯತೆ

3:00 PM (12:30 PM IST) - 40 % ಮಳೆ ಬರುವ ಸಾಧ್ಯತೆ

ಮಳೆಯಿಂದ ಎರಡನೇ ಸೆಮಿಫೈನಲ್ ರದ್ದಾದ್ರೆ ಯಾರಿಗೆ ಲಾಭ..?

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಸ್ಥಳೀಯ ಕಾಲಮಾನ ಬೆಳಗ್ಗೆ 10.30ರಿಂದ ಈ ಪಂದ್ಯ ಆರಂಭವಾಗುತ್ತಿರುವುದರಿಂದ 7 ಗಂಟೆ 20 ನಿಮಿಷಗಳ ಕಾಲ ಪಂದ್ಯಕ್ಕಾಗಿ ಸಮಯವನ್ನು ಮೀಸಲಿಡಲಾಗಿದೆ. ಹೀಗಿದ್ದೂ ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದಿದ್ದರೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಫೈನಲ್‌ಗೆ ಎಂಟ್ರಿ ಕೊಡಲಿದೆ. ಯಾಕೆಂದರೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್ ಹಂತ ಪ್ರವೇಶಿಸಿದೆ. 
 

click me!