Latest Videos

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ 3ನೇ ಶಾಕ್, ಅಂತಾರಾಷ್ಟ್ರೀಯ ಟಿ20ಗೆ ಜಡೇಜಾ ವಿದಾಯ!

By Chethan KumarFirst Published Jun 30, 2024, 5:30 PM IST
Highlights

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಇದೀಗ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾ ಹೇಳಿದ್ದಾರೆ.
 

ಬಾರ್ಬಡೋಸ್(ಜೂ.30) ಐಸಿಸಿ ಟ್ರೋಫಿ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾ ದಶಗಳ ಬಳಿಕ ಕಪ್ ಮುಡಿಗೇರಿಸಿದೆ. ಸೌತ್ ಆಫ್ರಿಕಾ ವಿರುದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ಟ್ರೋಫಿ ಕೈವಶ ಮಾಡಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದೀಗ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ತಮ್ಮ ವಿದಾಯವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಜಡೇಜಾ ಘೋಷಿಸಿದ್ದಾರೆ. ಈ ಮೂಲಕ ಮೂವರು ಸ್ಟಾರ್ ಕ್ರಿಕೆಟಿಗರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೃದಯ ತುಂಬಿದ ಕೃತಜ್ಞತೆಯೊಂದಿಗೆ ನಾನು ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ವಿರಾಮ ಹೇಳುತ್ತಿದ್ದೇನೆ. ನಾನು ಪ್ರತಿ ಬಾರಿ ದೇಶಕ್ಕಾಗಿ ಅತ್ಯುತ್ತಮ ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ. ಹೆಮ್ಮೆಯಿಂದ, ಓಡುವ ಕುದುರೆಯಂತೆ ನಾನು ಮೈದಾನದಲ್ಲಿ ಅಷ್ಟೇ ಹೆಮ್ಮೆಯಿಂದ ದೇಶಕ್ಕಾಗಿ ಆಡಿದ್ದೇನೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಾನು ವಿದಾಯ ಘೋಷಿಸುತ್ತಿದ್ದೇನೆ. ಇತರ ಮಾದರಿಗಳಲ್ಲಿ ನಾನು ಮುಂದುವರಿಯುತ್ತೇನೆ. ಟಿ20 ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿತ್ತು. ನನ್ನ ಅಂತಾರಾಷ್ಟ್ರೀಯ ಕರಿಯರ್‌ನ ಉತ್ತುಂಗದ ಕ್ಷಣ ಇದಾಗಿದೆ. ಮನಸ್ಸು ತುಂಬಿದ ಕನಸುಗಳನ್ನು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು. ಪ್ರತಿ ಬಾರಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.  

ಗುಡ್ ಬೈ ಹೇಳಲು ಇದಕ್ಕಿಂತ ಒಳ್ಳೆ ಸಮಯ ಮತ್ತೊಂದಿಲ್ಲ: ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20ಗೆ ರೋಹಿತ್ ವಿದಾಯ.!

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ರೋಚಕ ಗೆಲುವು ದಾಖಸಲಿಸಿದ ಟೀಂ ಇಂಡಿಯಾ ಸಂಭ್ರಮ ಆಚರಿಸಿತ್ತು. ಇದೇ ಖುಷಿಯಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಕೊಹ್ಲಿ ಮೈದಾನದಲ್ಲೇ ಘೋಷಿಸಿದ್ದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮ ಕೂಡ ಟಿ20 ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದ್ದರು.

 

 

ಟ್ರೋಫಿ ಗೆದ್ದ ಮರುದಿನ ರವೀಂದ್ರ ಜಡೇಜಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಜಜೇಜಾ ಮುಂದುವರಿಯಲಿದ್ದಾರೆ. ಜೊತೆಗೆ ಐಪಿಎಲ್ ಟೂರ್ನಿ ಆಡಲಿದ್ದಾರೆ.  

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತ್ತು. ಟೂರ್ನಿಯುದ್ದಕ್ಕೂ ವಿರಾಟ್ ನಿರಾಸೆ ಅನುಭವಿಸಿದ್ದರೆ, ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಿಟ್ಟ ಪ್ರದರ್ಶನ ನೀಡಿದ್ದರು. 59 ಎಸೆತದಲ್ಲಿ 76 ರನ್ ಸಿಡಿಸಿದ್ದರು. ಅಕ್ಸರ್ ಪಟೇಲ್ 47 ಹಾಗೂ ಶಿವಂ ದುಬೆ 27 ರನ್ ಸಿಡಿಸಿದ್ದರು. ಈ ಗುರಿಯನ್ನು ಚೇಸ್ ಮಾಡಲು ಕಣಕ್ಕಿಳಿದ ಸೌತ್ ಆಫ್ರಿಕಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಕ್ವಿಂಟನ್ ಡಿಕಾಕ್ ತ್ರೀಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಅಬ್ಬರಿಂದ ಸೌತ್ ಆಫ್ರಿಕಾ ಗೆಲುವಿನ ಲಯದಲ್ಲಿತ್ತು. ಆದರೆ ಸೂಪರ್ ಬೌಲಿಂಗ್ ದಾಳಿಯಿಂದ ಭಾರತ 7 ರನ್ ಗೆಲುವು ದಾಖಲಿಸಿತು.

ಇದು ನನ್ನ ಕೊನೆಯ ಟಿ20 ವಿಶ್ವಕಪ್; ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಶಾಕ್ ಕೊಟ್ಟ ವಿರಾಟ್ ಕೊಹ್ಲಿ..!

click me!