Latest Videos

ಸಲಾಂ ಕ್ಯಾಪ್ಟನ್‌ ರೋಹಿತ್‌ ಶರ್ಮಾ! ಕೊಟ್ಟ ಮಾತಿನಂತೆ ನಡೆದುಕೊಂಡ ನಾಯಕ!

By Kannadaprabha NewsFirst Published Jun 30, 2024, 3:59 PM IST
Highlights

2023ರಲ್ಲಿ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್‌ನಲ್ಲೇ ರೋಹಿತ್‌ ಭಾರತದ ಕನಸನ್ನು ನನಸಾಗಿಸುವ ಸನಿಹಕ್ಕೆ ತಲುಪಿದ್ದರು. ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆಗೊಂಡಿತ್ತು. ಆದರೆ, ನಿವೃತ್ತಿಗೂ ಮುನ್ನ ಭಾರತಕ್ಕೆ ಒಂದು ವಿಶ್ವಕಪ್‌ ಗೆಲ್ಲಿಸಿಯೇ ತೀರುವುದಾಗಿ ಪಣತೊಟ್ಟಿದ್ದ ರೋಹಿತ್‌, ಟಿ20 ವಿಶ್ವಕಪ್‌ಗೆ ಬೇಕಿದ್ದ ಬಲಿಷ್ಠ ತಂಡ ಕಟ್ಟಿದರು.

ಬೆಂಗಳೂರು: 2022ರಲ್ಲಿ ರೋಹಿತ್‌ ಶರ್ಮಾರನ್ನು ಎಲ್ಲಾ ಮೂರೂ ಮಾದರಿಯ ತಂಡಗಳಿಗೆ ನಾಯಕರನ್ನಾಗಿ ನೇಮಿಸಿದ್ದಕ್ಕೆ ನಿರ್ದಿಷ್ಟ ಕಾರಣವಿತ್ತು. ರೋಹಿತ್‌ಗೆ ಟ್ರೋಫಿ ಗೆಲ್ಲುವ ಛಾತಿ ಇದೆ ಎನ್ನುವುದೇ ಅವರ ನೇಮಕಾತಿಗೆ ಪ್ರಮುಖ ಕಾರಣ. ಭಾರತ ತಂಡದ ಚುಕ್ಕಾಣಿ ಹಿಡಿಯುವ ಮೊದಲು ರೋಹಿತ್‌, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಭಾರತಕ್ಕೆ ಗಗನ ಕುಸುಮದಂತಾಗಿದ್ದ ಐಸಿಸಿ ಟ್ರೋಫಿಯನ್ನು ಗೆಲ್ಲಿಸಿಕೊಡಬೇಕು ಎನ್ನುವ ಟಾಸ್ಕ್‌ನೊಂದಿಗೆ ಬಿಸಿಸಿಐ ನಾಯಕತ್ವದ ಹೊಣೆಯನ್ನು ರೋಹಿತ್‌ಗೆ ಹೆಗಲಿಗೆ ಹೊರಿಸಿತ್ತು.

2023ರಲ್ಲಿ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್‌ನಲ್ಲೇ ರೋಹಿತ್‌ ಭಾರತದ ಕನಸನ್ನು ನನಸಾಗಿಸುವ ಸನಿಹಕ್ಕೆ ತಲುಪಿದ್ದರು. ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆಗೊಂಡಿತ್ತು. ಆದರೆ, ನಿವೃತ್ತಿಗೂ ಮುನ್ನ ಭಾರತಕ್ಕೆ ಒಂದು ವಿಶ್ವಕಪ್‌ ಗೆಲ್ಲಿಸಿಯೇ ತೀರುವುದಾಗಿ ಪಣತೊಟ್ಟಿದ್ದ ರೋಹಿತ್‌, ಟಿ20 ವಿಶ್ವಕಪ್‌ಗೆ ಬೇಕಿದ್ದ ಬಲಿಷ್ಠ ತಂಡ ಕಟ್ಟಿದರು.

ಬ್ರಾಹ್ಮಣ ಕೋಚ್, ಬ್ರಾಹ್ಮಣ ಕ್ಯಾಪ್ಟನ್‌: ಟಿ20 ವಿಶ್ವಕಪ್‌ ಗೆಲುವಿನಲ್ಲೂ ಜಾತಿ ಹುಡುಕಿದ ನೆಟ್ಟಿಗರು!

ಕೊಟ್ಟ ಮಾತಿನಂತೆ ನಡೆದುಕೊಂಡ ನಾಯಕ!

ತಂಡದ ಅಗತ್ಯಕ್ಕೆ ಆಡುವುದಾಗಿ ಹೇಳಿದ್ದ ರೋಹಿತ್‌, ಏಕದಿನ ವಿಶ್ವಕಪ್‌ನಲ್ಲೇ ಅದನ್ನು ಮಾಡಿ ತೋರಿಸಿದ್ದರು. ಅವರ ಸ್ಫೋಟಕ ಆಟ ಭಾರತಕ್ಕೆ ಬಹುತೇಕ ಪಂದ್ಯಗಳಲ್ಲಿ ಅದ್ಭುತ ಆರಂಭಗಳನ್ನು ನೀಡಿತ್ತು. ಟಿ20 ವಿಶ್ವಕಪ್‌ನಲ್ಲೂ ರೋಹಿತ್‌ ನಿರ್ಣಾಯಕ ಪಾತ್ರ ವಹಿಸಿದರು.

ಟೂರ್ನಿಯ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದ ರೋಹಿತ್‌, ಸೂಪರ್‌-8 ಪಂದ್ಯಗಳಲ್ಲಿ ಅಬ್ಬರಿಸಿದರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಕೇವಲ 19 ಎಸೆತದಲ್ಲಿ ಫಿಫ್ಟಿ ಸಿಡಿಸಿ 41 ಎಸೆತದಲ್ಲಿ 92 ರನ್‌ ಚಚ್ಚಿದ ರೋಹಿತ್‌, 2023ರ ವಿಶ್ವಕಪ್‌ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳದೆ ಬಿಡಲಿಲ್ಲ. ರೋಹಿತ್‌ರ ಈ ಇನ್ನಿಂಗ್ಸ್‌ ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದಲೇ ಹೊರದಬ್ಬಿತು. ಸೆಮಿಫೈನಲ್‌ನಲ್ಲೂ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ರೋಹಿತ್‌, ಟೂರ್ನಿಯಲ್ಲಿ ಭಾರತ ಪರ ಅತಿಹೆಚ್ಚು ರನ್‌ ಕಲೆಹಾಕಿದರು.

ಟಿ20 ವಿಶ್ವಕಪ್ ಗೆಲುವಿನ ಸೂತ್ರಧಾರ ಮಹಾಗುರು ರಾಹುಲ್ ದ್ರಾವಿಡ್!

ತಂಡದ ನಿರ್ವಹಣೆಯಲ್ಲಿ 100% ಸಕ್ಸಸ್‌

ಬೌಲರ್‌ಗಳ ನಿರ್ವಹಣೆಯಲ್ಲೂ ಚಾಕಚಕ್ಯತೆ ತೋರಿದ ಶರ್ಮಾ, ತಂಡದ ಅತ್ಯುತ್ತಮ ಕ್ಷೇತ್ರರಕ್ಷಕರನ್ನು ಮಹತ್ವದ ಸ್ಥಳಗಳಲ್ಲಿ ನಿಯೋಜಿಸಿ ಕ್ಯಾಚ್‌, ರನೌಟ್‌ಗಳಿಂದ ಪಂದ್ಯದ ಗತಿ ಬದಲಾಗುವಂತೆ ಮಾಡಿದರು. ತಾವೂ ಅದ್ಭುತ ಫೀಲ್ಡಿಂಗ್‌ ನಡೆಸಿ ಇತರರಿಗೆ ಸ್ಫೂರ್ತಿ ತುಂಬಿದರು. ಬೌಲರ್‌ಗಳು ಲಯ ಕಳೆದುಕೊಂಡಾಗ ಅವರನ್ನು ಹುರಿದುಂಬಿಸುವಲ್ಲಿ ಹಿಂದೆ ಬೀಳದ ರೋಹಿತ್‌, ಟೂರ್ನಿಯ ಶ್ರೇಷ್ಠ ನಾಯಕ ಎನಿಸಿಕೊಂಡರು. ನಿರೀಕ್ಷೆ, ಜವಾಬ್ದಾರಿಗೆ ತಕ್ಕಂತೆ ಆಡಿದ ರೋಹಿತ್‌ ಒಬ್ಬ ಮಾದರಿ ನಾಯಕನಾಗಿ ಹೊರಹೊಮ್ಮಿದರು.
 

click me!