T20 World Cup 2024: ಅಮೆರಿಕ ಎದುರು ದಕ್ಷಿಣ ಆಫ್ರಿಕಾವನ್ನು ಕಾಪಾಡಿದ ರಬಾಡ..!

Published : Jun 20, 2024, 09:42 AM ISTUpdated : Jun 20, 2024, 10:01 AM IST
T20 World Cup 2024: ಅಮೆರಿಕ ಎದುರು ದಕ್ಷಿಣ ಆಫ್ರಿಕಾವನ್ನು ಕಾಪಾಡಿದ ರಬಾಡ..!

ಸಾರಾಂಶ

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ 4 ವಿಕೆಟ್‌ಗೆ 194 ರನ್ ಕಲೆಹಾಕಿತು. ಡಿ ಕಾಕ್‌ರ ಸ್ಫೋಟಕ ಆಟ (40 ಎಸೆತದಲ್ಲಿ 74 ರನ್)ದ ನೆರವಿನಿಂದ ಮೊದಲ 10 ಓವರಲ್ಲಿ 1 ವಿಕೆಟ್ ನಷ್ಟಕ್ಕೆ 101 ರನ್ ಚಚ್ಚಿದರೂ, ಆ ಬಳಿಕ ರನ್ ಗಳಿಕೆಯಲ್ಲಿ ವೇಗ ಕಳೆದು ಕೊಂಡಿತು. ಆದರೂ ಕೊನೆಯಲ್ಲಿ ಕ್ಲಾಸೆನ್‌ನ ಹೋರಾಟ ತಂಡವನ್ನು ಸ್ಪರ್ಧಾತ್ಮಕ ಮೊತ್ತ ತಲುಪಿಸಿತು.

ನಾರ್ಥ್‌ಸೌಂಡ್: ಗುಂಪು ಹಂತದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ್ದ ಅಮೆರಿಕ, ಸೂಪರ್ -8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿಯುವ ನಿರೀಕ್ಷೆ ಮೂಡಿಸಿತ್ತು. ಕಗಿಸೋ ರಬಾಡ ಸಾಹಸ ತೋರದೆ ಹೋಗಿದ್ದರೆ, ದ.ಆಫ್ರಿಕಾಕ್ಕೆ ಟೂರ್ನಿಯಲ್ಲಿ ಮೊದಲ ಸೋಲು ಎದುರಾಗುತ್ತಿತ್ತೇನೋ. 18 ರನ್‌ಗಳ ಗೆಲುವಿನ ಅಂತರ ದೊಡ್ಡದಾಗಿ ಕಂಡರೂ, ಹರಿಣ ಪಡೆಗೆ ಈ ಗೆಲುವು ನಿರೀಕ್ಷಿತ ಸಮಾಧಾನ ತಂದಂತೆ ಕಾಣುತ್ತಿಲ್ಲ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ 4 ವಿಕೆಟ್‌ಗೆ 194 ರನ್ ಕಲೆಹಾಕಿತು. ಡಿ ಕಾಕ್‌ರ ಸ್ಫೋಟಕ ಆಟ (40 ಎಸೆತದಲ್ಲಿ 74 ರನ್)ದ ನೆರವಿನಿಂದ ಮೊದಲ 10 ಓವರಲ್ಲಿ 1 ವಿಕೆಟ್ ನಷ್ಟಕ್ಕೆ 101 ರನ್ ಚಚ್ಚಿದರೂ, ಆ ಬಳಿಕ ರನ್ ಗಳಿಕೆಯಲ್ಲಿ ವೇಗ ಕಳೆದು ಕೊಂಡಿತು. ಆದರೂ ಕೊನೆಯಲ್ಲಿ ಕ್ಲಾಸೆನ್‌ನ ಹೋರಾಟ ತಂಡವನ್ನು ಸ್ಪರ್ಧಾತ್ಮಕ ಮೊತ್ತ ತಲುಪಿಸಿತು.

ಸ್ಮೃತಿ ಮಂಧನಾ ಸತತ ಎರಡನೇ ಶತಕ; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ

ಅಮೆರಿಕಕ್ಕೆ ಸ್ಟೀವನ್ ಟೇಲರ್ ಉತ್ತಮ ಆರಂಭ ಒದಗಿಸಿದರು. 14 ಎಸೆತದಲ್ಲಿ 24 ರನ್ ಸಿಡಿಸಿದರು. ಆ್ಯಂಡ್ರಿಯಸ್‌ ಗೌಸ್‌ರಿಂದಲೂ ಉತ್ತಮ ಬೆಂಬಲ ದೊರೆಯಿತು. ಮೊದಲ  5 ಓವರಲ್ಲಿ 1 ವಿಕೆಟ್‌ಗೆ 51 ರನ್ ಗಳಿಸಿದ ಅಮೆರಿಕ, ಮುಂದಿನ 5 ಓವರಲ್ಲಿ ಕೇವಲ 22 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತು.

ಏಕಾಂಗಿ ಹೋರಾಟ ಮುಂದುವರಿಸಿದ್ದ ಗೌಸ್‌ಗೆ ಹರ್ಮೀತ್ ಸಿಂಗ್ ಜೊತೆಯಾದರು. ಇವರಿಬ್ಬರ ಸ್ಫೋಟಕ ಆಟ ಅಮೆರಿಕದ ಪಾಳಯದಲ್ಲಿ ಜಯದ ಆಸೆ ಚಿಗುರಿಸಿತು. ಕೊನೆಯ 3 ಓವರಲ್ಲಿ ಗೆಲ್ಲಲು 50 ರನ್ ಬೇಕಿದ್ದಾಗ, 18ನೇ ಓವರಲ್ಲಿ ಶಮ್ಸಿ 22 ರನ್ ಚಚ್ಚಿಸಿಕೊಂಡರು. ಅಮೆರಿಕಕ್ಕೆ 12 ಎಸೆತದಲ್ಲಿ 28 ರನ್ ಬೇಕಿತ್ತು. ಆದರೆ, ರಬಾಡ 19ನೇ ಓವರಲ್ಲಿ ಕೇವಲ 2 ರನ್ ನೀಡಿ, ಅಮೆರಿಕದ ಆಸೆಗೆ ತಣ್ಣೀರೆರೆಚಿದರು. 

T20 World Cup 2024: ಬೆವರು ಸುರಿಸದೇ ಟೀಂ ಇಂಡಿಯಾ ಸೆಮೀಸ್‌ಗೇರುತ್ತೆ..! ಇಲ್ಲಿದೆ ಸಿಂಪಲ್ ಲೆಕ್ಕಾಚಾರ

ಕೊನೆಯ ಓವರಲ್ಲಿ 26 ರನ್ ಬೇಕಿದ್ದಾಗ ಸಹಜವಾಗಿಯೇ ಅಮೆರಿಕ ಒತ್ತಡಕ್ಕೆ ಸಿಲುಕಿ ಸೋಲಿಗೆ ಶರಣಾಯಿತು. ಗೌಸ್ 47 ಎಸೆತದಲ್ಲಿ ತಲಾ 5 ಬೌಂಡರಿ, ಸಿಕರ್‌ನೊಂದಿಗೆ ಔಟಾಗದೆ 80 ರನ್ ಸಿಡಿಸಿ ಗಮನ ಸೆಳೆದರು. 

ಸ್ಕೋರ್: 
ದ.ಆಫ್ರಿಕಾ 20 ಓವರಲ್ಲಿ 194/4 (ಡಿ ಕಾಕ್ ಈ ಹಂತದಲ್ಲಿ ತಂಡ ಒತ್ತಡಕ್ಕೆ 74, ಮಾರ್ಕ್‌ಮ್ 46, ಕ್ಲಾಸೆನ್ 36, ಸೌರಭ್ 2-21, ಹರ್ಮೀತ್ 2-24), 
ಅಮೆರಿಕ 20 ಓವರಲ್ಲಿ 176/6 (ಗೌಸ್ 80*, ಹರ್ಮೀತ್ 38, ರಬಾಡ 3-18) 
ಪಂದ್ಯಶ್ರೇಷ್ಠ: ಡಿ ಕಾಕ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?