ಸುಂಟರಗಾಳಿ ಬರುತ್ತಿದೆ ಹುಷಾರ್; ಎಲ್ಲಾ ತಂಡಗಳಿಗೆ ವಾರ್ನಿಂಗ್ ಕೊಟ್ಟ ಸಂಜಯ್ ಬಂಗಾರ್..!

By Kannadaprabha NewsFirst Published Jun 19, 2024, 2:21 PM IST
Highlights

ಈ ಬಾರಿಯ ಐಪಿಎಲ್‌ ಸಮರದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, 155ರ ಸ್ಟ್ರೈಕ್ರೇಟ್ನಲ್ಲಿ 741 ರನ್ ಕಲೆಹಾಕಿದ್ರು. ಆ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ರು. ಆದ್ರೆ, ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವಿರಾಟ್, ಟಿ20 ವಿಶ್ವಕಪ್‌ನಲ್ಲಿ ಫ್ಲಾಪ್ ಶೋ  ನೀಡ್ತಿದ್ದಾರೆ. 

ಬೆಂಗಳೂರು: ಸುಂಟರಗಾಳಿ ಬೀಸುವ ಮುನ್ನ ಪ್ರಶಾಂತತೆ ಆವರಿಸಿರುತ್ತೆ. ಕ್ರಿಕೆಟ್‌ನಲ್ಲಿ ಈ ಆಟಗಾರನೂ ಸೇಮ್. ಈತ ಫ್ಲಾಪ್ ಶೋ ನೀಡ್ತಿದ್ದಾನೆ ಅಂದ್ರೆ, ಮುಂದೆ ಎದುರಾಳಿಗಳಿಗೆ ಮಾರಿಹಬ್ಬ ಕಾದಿದೆ ಅಂತಾನೇ ಅರ್ಥ. ಯಾರು ಆ ಆಟಗಾರ ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ. 

12 ವರ್ಷಗಳಲ್ಲಿ ಕೊಹ್ಲಿ ಪಾಲಿಗೆ ಇದೇ ಕರಾಳ ವಿಶ್ವಕಪ್..! 

Latest Videos

ಈ ಬಾರಿಯ ಐಪಿಎಲ್‌ ಸಮರದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, 155ರ ಸ್ಟ್ರೈಕ್ರೇಟ್ನಲ್ಲಿ 741 ರನ್ ಕಲೆಹಾಕಿದ್ರು. ಆ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ರು. ಆದ್ರೆ, ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವಿರಾಟ್, ಟಿ20 ವಿಶ್ವಕಪ್‌ನಲ್ಲಿ ಫ್ಲಾಪ್ ಶೋ  ನೀಡ್ತಿದ್ದಾರೆ. 

ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಈವರೆಗೂ  ಗ್ರೂಪ್ ಸ್ಟೇಜ್ನಲ್ಲಿ ಆಡಿರೋ 3  ಪಂದ್ಯಗಳಿಂದ ಕೇವಲ 5 ರನ್‌ಗಳಿಸಿದ್ದಾರೆ. ಐರ್ಲೆಂಡ್ ವಿರುದ್ಧ 1 ರನ್‌ ಗಳಿಸಿದ್ದ ವಿರಾಟ್, ಪಾಕಿಸ್ತಾನ ವಿರುದ್ಧ 4 ರನ್ ಬಾರಿಸಿ ಪೆವಿಲಿಯನ್ ಸೇರಿದ್ರು. ಅಮೇರಿಕ ವಿರುದ್ಧ ಗೋಲ್ಡನ್ ಡಕೌಟ್ ಆದ್ರು. ಟಿ20 ವಿಶ್ವಕಪ್‌ವೊಂದರ ಗ್ರೂಪ್ ಹಂತದಲ್ಲಿ ಕೊಹ್ಲಿಯ ಅತ್ಯಂತ ಕಳಪೆ ದಾಖಲೆ ಇದಾಗಿದೆ. ಅದಕ್ಕೆ ಈ ಅಂಕಿಅಂಶಗಳೇ ಸಾಕ್ಷಿಯಾಗಿವೆ. 

2012ರಿಂದ T20 ವಿಶ್ವಕಪ್ ಆಡ್ತಿರೋ ವಿರಾಟ್, ಗ್ರೂಪ್ ಮ್ಯಾಚ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. 2012ರ ವಿಶ್ವಕಪ್‌ನ ಗ್ರೂಪ್‌ ಹಂತದಲ್ಲಿ 2 ಪಂದ್ಯಗಳನ್ನಾಡಿದ್ದ ಕೊಹ್ಲಿ, ಒಂದು ಅರ್ಧಶತಕ ಸಹಿತ 90 ರನ್ ಬಾರಿಸಿದ್ರು. 2014ರಲ್ಲಿ 4 ಪಂದ್ಯಗಳಿಂದ 85ರ ಸರಾಸರಿಯಲ್ಲಿ 2 ಅರ್ಧಶತಕಗಳೊಂದಿಗೆ 185 ರನ್ ಕಲೆಹಾಕಿದ್ರು. 2016ರಲ್ಲಿ 4 ಪಂದ್ಯಗಳನ್ನಾಡಿ 92ರ ಸರಾಸರಿಯೊಂದಿಗೆ 184 ರನ್ ಸಿಡಿಸಿದ್ರು.  2021ರ ವರ್ಲ್ಡ್‌ಕಪ್‌ನಲ್ಲಿ 3 ಪಂದ್ಯಗಳೊಂದಿಗೆ 68 ರನ್ ಮತ್ತು 2022ರಲ್ಲಿ 5 ಪಂದ್ಯಗಳಿಂದ 246 ರನ್ ಬಾರಿಸಿದ್ರು. 

ಕೊಹ್ಲಿಗೆ ಸೆಟ್‌ಬ್ಯಾಕ್‌ಗಳು, ಕಮ್‌ಬ್ಯಾಕ್‌ಗಳು ಹೊಸದಲ್ಲ..!

ಯೆಸ್, ಕೊಹ್ಲಿಗೆ ಸೆಟ್‌ಬ್ಯಾಕ್ಸ್‌, ಕಮ್‌ಬ್ಯಾಕ್‌ಗಳು ಹೊಸದಲ್ಲ. ಈ ಹಿಂದೆ ಹಲವು ಬಾರಿ ವಿರಾಟ್ ಫಿನಿಕ್ಸ್ನಂತೆ ಎದ್ದು ಬಂದಿದ್ದಾರೆ. ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಮೂರು ವರ್ಷ  ಶತಕಗಳ ಬರ ಎದುರಿಸಿದ್ದ ರನ್ ಮಷಿನ್, 2022ರ ಏಷ್ಯಾಕಪ್ನಲ್ಲಿ ಸ್ಟ್ರಾಂಗ್‌ ಕಮ್ಬ್ಯಾಕ್ ಮಾಡಿದ್ರು. ಅಲ್ಲಿಂದ ಇಲ್ಲಿವರೆಗು ಟೀಂ ಇಂಡಿಯಾ ಆಡಿದ ಎಲ್ಲಾ ಮಹತ್ವದ ಟೂರ್ನಿಗಳಲ್ಲೂ, ಕೊಹ್ಲಿಯೇ ಟಾಪ್ ಸ್ಕೋರರ್ ಆಗಿದ್ದಾರೆ. ಇದ್ರಿಂದ ಈ ಬಾರಿಯೂ ಕೊಹ್ಲಿ ಔಟ್ ಫಾರ್ಮ್ ಸುಳಿಯಿಂದ ಹೊರಬರಲಿದ್ದಾರೆ.ತಮ್ಮ ಹಳೆಯ ಖದರ್‌ಗೆ ಮರಳಲಿದ್ದಾರೆ ಅಂತ ಮಾಜಿ ಆಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವಿರಾಟ್ ಕೊಹ್ಲಿ ಮೊದಲ ಬಾರಿ ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಆಡ್ತಿದ್ದಾರೆ. ಇದ್ರಿಂದ ರನ್‌ಗಳಿಸಲು ಪರದಾಡ್ತಿದ್ದಾರೆ. ಆದ್ರೆ, ಅವರ ಫಾರ್ಮ್ ಬಗ್ಗೆ ಆತಂಕ ಪಡಬೇಕಿಲ್ಲ. ಸುಂಟರಾಳಿ ಬೀಸುವ ಮುನ್ನ ಪ್ರಶಾಂತತೆ ಆವರಿಸಿರುತ್ತೆ. ಅದರಂತೆ ಈಗ ಸೈಲಂಟಾಗಿರೋ ಕೊಹ್ಲಿ, ಮುಂದಿನ ಪಂದ್ಯಗಳಲ್ಲಿ ಅಬ್ಬರಿಸಲಿದ್ದಾರೆ ಅಂತ ಮಾಜಿ ಆಟಗಾರ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. 

ಅದೇನೆ ಇರಲಿ, ಸೂಪರ್ ಎಂಟರ ಪಂದ್ಯಗಳಲ್ಲಿ ವಿರಾಟ್, ವಿರಾಟರೂಪ ತೋರಲಿ. ಆ ಮೂಲಕ ತಂಡದ ಗೆಲುವಿನಲ್ಲಿ ಮಿಂಚಲಿ ಅನ್ನೋದೆ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!