ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಸಖತ್ ಸ್ಟ್ರಾಂಗ್ ಆಗಿದೆ. ಆದ್ರೆ ಇದೇ ಮಾತನ್ನ ಬೌಲಿಂಗ್ ಬಗ್ಗೆ ಹೇಳೋಕಾಗಲ್ಲ. ಯಾಕಂದ್ರೆ, ಡು ಅರ್ ಮ್ಯಾಚ್‌ಗಳಲ್ಲಿ ನಮ್ಮ ಬೌಲರ್ಸ್ ಕೈಕೊಟ್ಟಿದ್ದಾರೆ. ಒಂದೇ ಒಂದು ವಿಕೆಟ್ ಪಡೆಯಲಾಗದೇ ಮಕಾಡೆ ಮಲಗಿದ್ದಾರೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಮ್ಯಾಚ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.! ಇಂಜುರಿ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದ ಹೊರಗುಳಿದಿದ್ರು. ಇದ್ರಿಂದ ತಂಡದ ಬೌಲಿಂಗ್ ವೀಕ್ ಆಗಿತ್ತು.
ಬೆಂಗಳೂರು: ಕ್ರಿಕೆಟಲ್ಲಿ ಬ್ಯಾಟರ್‌ಗಳು ಮ್ಯಾಚ್ ಗೆಲ್ಸಿದ್ರೆ, ಬೌಲರ್ಸ್ ಟೂರ್ನಮೆಂಟ್ ಗೆಲ್ಲಿಸಿಕೊಡ್ತಾರೆ. ಆದ್ರೆ, ಟೀಂ ಇಂಡಿಯಾದ ಬೌಲರ್‌ಗಳಲ್ಲಿ ಟಿ20 ವಿಶ್ವಕಪ್ ಗೆದ್ದು ಕೊಡೋ ಸಾಮರ್ಥ್ಯ ಇದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಈ ಪ್ರಶ್ನೆ ಮೂಡೋದಕ್ಕೆ ಕಾರಣ ಏನು ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!
ರೋಹಿತ್ & ದ್ರಾವಿಡ್‌ಗೆ ಕಾಡ್ತಿದೆ ಅದೊಂದು ಚಿಂತೆ..!
ಕಳೆದ ವರ್ಷ ತವರಿನಲ್ಲಿ ಏಕದಿನ ವಿಶ್ವಕಪ್ ಕೈಚೆಲ್ಲಿದ್ದ ಟೀಂ ಇಂಡಿಯಾ, ಈಗ ಟಿ20 ವಿಶ್ವಕಪ್ ಮೇಲೆ ಕಣ್ಣಟ್ಟಿದೆ. ಹೇಗಾದ್ರೂ ಮಾಡಿ, ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕು ಅಂತ ಪಣತೊಟ್ಟಿದೆ. ಆದ್ರೆ, ವಿಶ್ವಕಪ್ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ. ಅದಕ್ಕೆ ಕಾರಣ, ರೋಹಿತ್ ಶರ್ಮಾ ಪಡೆಯ ಬೌಲಿಂಗ್ ಡಿಪಾರ್ಟ್ಮೆಂಟ್.!
ಮತ್ತೊಮ್ಮೆ ಬಯಲಾಯ್ತು ಧೋನಿಯ ದೊಡ್ಡ ಗುಣ..! ಕಣ್ಣೀರು ಹಾಕಿದ ಅಭಿಮಾನಿಗೆ ಸಿಕ್ತು ಅಭಯ..!
ಯೆಸ್, ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಸಖತ್ ಸ್ಟ್ರಾಂಗ್ ಆಗಿದೆ. ಆದ್ರೆ ಇದೇ ಮಾತನ್ನ ಬೌಲಿಂಗ್ ಬಗ್ಗೆ ಹೇಳೋಕಾಗಲ್ಲ. ಯಾಕಂದ್ರೆ, ಡು ಅರ್ ಮ್ಯಾಚ್‌ಗಳಲ್ಲಿ ನಮ್ಮ ಬೌಲರ್ಸ್ ಕೈಕೊಟ್ಟಿದ್ದಾರೆ. ಒಂದೇ ಒಂದು ವಿಕೆಟ್ ಪಡೆಯಲಾಗದೇ ಮಕಾಡೆ ಮಲಗಿದ್ದಾರೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಮ್ಯಾಚ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.! ಇಂಜುರಿ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಟೂರ್ನಿಯಿಂದ ಹೊರಗುಳಿದಿದ್ರು. ಇದ್ರಿಂದ ತಂಡದ ಬೌಲಿಂಗ್ ವೀಕ್ ಆಗಿತ್ತು.
ಬುಮ್ರಾ ಜೊತೆ ಮತ್ತೊಂದು ತುದಿಯಿಂದ ದಾಳಿ ಮಾಡೋರ್ಯಾರು..?
ಈ ಬಾರಿ ಬುಮ್ರಾ ತಂಡದಲ್ಲಿರೋದ್ರಿಂದ ಸ್ವಲ್ಪ ಮಟ್ಟಿಗೆ ತಂಡದ ಬೌಲಿಂಗ್ ಬಲಿಷ್ಠವಾಗಿದೆ. IPLನಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಏಕೈಕ ಬೌಲರ್ ಅಂದ್ರೆ ಅಂದು ಬುಮ್ರಾ. 13 ಪಂದ್ಯಗಳನ್ನಾಡಿದ ಯಾರ್ಕರ್ ಸ್ಪೆಷಲಿಸ್ಟ್ ಕೇವಲ 6.48ರ ಎಕಾನಮಿಯಲ್ಲಿ ರನ್ ನೀಡಿ 20 ವಿಕೆಟ್ ಉರುಳಿಸಿದ್ರು. ಬುಮ್ರಾ ಫಾರ್ಮ್ ನೋಡಿದ್ರೆ, ಟಿ20 ವಿಶ್ವಕಪ್ನಲ್ಲೂ ವಿಕೆಟ್ ಬೇಟೆಯಾಡೋದು ಪಕ್ಕಾ. ಆದ್ರೆ, ಬುಮ್ರಾಗೆ ಯಾರು ಸಾಥ್ ನೀಡ್ತಾರೆ. ಮತ್ತೊಂದು ತುದಿಯಲ್ಲಿ ಮಿಂಚೋ ಬೌಲರ್ ಯಾರು ಅನ್ನೋದೆ ಈಗ ದೊಡ್ಡ ಪ್ರಶ್ನೆಯಾಗಿದೆ.
T20 World Cup: ಅಮೆರಿಕಗೆ ವಿಮಾನವೇರುವ ಮುನ್ನವೂ ಮಡದಿ ಅನುಷ್ಕಾ ಸ್ಮರಿಸಿದ ವಿರಾಟ್ ಕೊಹ್ಲಿ!
ಪಿಚ್ ಬೌಲರ್‌ಗಳಿಗೆ ನೆರವಾದ್ರೆ ಮಾತ್ರ ಸಿರಾಜ್ ಆಟ..!
ಕಳೆದ ಕೆಲ ಪಂದ್ಯಗಳಿಂದ ಮೊಹಮ್ಮದ್ ಸಿರಾಜ್ ಪ್ರದರ್ಶನ ಅಷ್ಟಕಷ್ಟೇ. ಅದರಲ್ಲೂ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಈ ಹೈದ್ರಾಬಾದ್ ಎಕ್ಸ್ಪ್ರೆಸ್ ಫ್ಲಾಪ್ ಶೋ ನೀಡಿದ್ದಾರೆ. ಪಿಚ್ ಕಂಡೀಷನ್ ಬೌಲರ್‌ಗಳಿಗೆ ಅನುಕೂಲವಾಗುವಂತೆ ಇದ್ದರಷ್ಟೇ ಸಿರಾಜ್ ವಿಕೆಟ್ ಉರುಳಿಸ್ತಾರೆ. ಇನ್ನು ಟೀಂ ಇಂಡಿಯಾ ಪರ ಸಿರಾಜ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಈ ಸಲದ ಐಪಿಎಲ್‌ನಲ್ಲಿ ಮಿಯಾ ಭಾಯ್ ಫ್ಲಾಪ್ ಶೋ ನೀಡಿದ್ರು. 14 ಪಂದ್ಯಗಳಿಂದ ಕೇವಲ 15 ವಿಕೆಟ್ ಕಿತ್ತಿದ್ರು.
ಡೆತ್ ಓವರ್‌ಗಳಲ್ಲಿ ದುಬಾರಿಯೋ ಆರ್ಶ್‌ದೀಪ್ ಸಿಂಗ್..!
ಆರ್ಶ್‌ದೀಪ್ ಸಿಂಗ್ ಕಥೆಯೂ ಅಷ್ಟೇ. ಸ್ಥಿರ ಪ್ರದರ್ಶನ ನೀಡುವಲ್ಲಿ ಆರ್ಶ್‌ದೀಪ್ ಫೇಲ್ ಆಗಿದ್ದಾರೆ. ಅದರಲ್ಲೂ ಡೆತ್ ಓವರ್ಗಳಲ್ಲಿ ದುಬಾರಿಯಾಗ್ತಾರೆ. ಐಪಿಎಲ್ ಸೀಸನ್ 17ರಲ್ಲಿ ಈ ಎಡಗೈ ವೇಗಿ, 14 ಪಂದ್ಯಗಳಿಂದ 19 ವಿಕೆಟ್ ಪಡೆದುಕೊಂಡಿದ್ದಾರೆ. ಆದ್ರೆ, 10ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ, ದುಬೆ ಮೇಲೆ ನಂಬಿಕೆ ಇಡುವಂತಿಲ್ಲ..!
ಇನ್ನು ಪೇಸ್ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮೇಲೆ ನಂಬಿಕೆ ಇಡುವಂತಿಲ್ಲ. ಐಪಿಎಲ್‌ನಲ್ಲಿ ಪಾಂಡ್ಯ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ವೈಫಲ್ಯ ಅನುಭವಿಸಿದ್ರು. ಶಿವಂ ದುಬೆ ಕೇವಲ ಬ್ಯಾಟಿಂಗ್‌ಗೆ ಸೀಮಿತರಾದ್ರು. ಸಮಾಧಾನದ ವಿಷ್ಯ ಅಂದ್ರೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್, ಚಹಲ್‌ರಿಂದ ಕೂಡಿದ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಅಮೆರಿಕ ಮತ್ತು ವಿಂಡೀಸ್ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ನೆರವಾಗಲಿವೆ. ಇದ್ರಿಂದ ಭಾರತದ ಸ್ಪಿನ್ನರ್ಸ್ ಮಿಂಚ್ತಾರಾ ಅಂತ ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್