ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾನುವಾರ ಅಮೆರಿಕದಲ್ಲಿ ಚುಟುಕು ಸಮರಕ್ಕೆ ಚಾಲನೆ ಸಿಗಲಿದೆ. ಈ ಸಲ ಯಾರಾಗ್ತಾರೆ ಟಿ20 ಚಾಂಪಿಯನ್ ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಈ ನಡುವೆ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಹಲವು ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮಾತ್ರವಲ್ಲ. ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿಯೇ ರನ್ ಕಿಂಗ್.
ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಆಟಗಾರರು ಸಹ ಚುಟುಕು ಸಮರದಲ್ಲಿ ಆಡಲು ಎದುರು ನೋಡ್ತಿದ್ದಾರೆ. ಕೆಲವೊಂದಿಷ್ಟು ಪ್ಲೇಯರ್ಸ್ ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಲು ಒಬ್ಬನಂತೂ ಕಾಯ್ತಾ ಕೂತಿದ್ದಾನೆ. ಯಾರಾತ..? ನೀವೇ ನೋಡಿ ಗೊತ್ತಾಗುತ್ತೆ.
ಟಿ20 ಕ್ರಿಕೆಟ್ನಲ್ಲೂ ಕಿಂಗ್ ಕೊಹ್ಲಿ ರನ್ ಕಿಂಗ್..!
undefined
ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾನುವಾರ ಅಮೆರಿಕದಲ್ಲಿ ಚುಟುಕು ಸಮರಕ್ಕೆ ಚಾಲನೆ ಸಿಗಲಿದೆ. ಈ ಸಲ ಯಾರಾಗ್ತಾರೆ ಟಿ20 ಚಾಂಪಿಯನ್ ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಈ ನಡುವೆ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಹಲವು ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮಾತ್ರವಲ್ಲ. ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿಯೇ ರನ್ ಕಿಂಗ್.
ಕೊಹ್ಲಿ ದಾಖಲೆ ಮೇಲೆ ಬಾಬರ್ ಕಣ್ಣು
ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 4,037 ರನ್ ಹೊಡೆದಿದ್ದಾರೆ, 138ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 37 ಹಾಫ್ ಸೆಂಚುರಿ ಬಾರಿಸಿದ್ದಾರೆ. ಸದ್ಯ ಟಿ20ಯಲ್ಲಿ ಅವರೇ ಗರಿಷ್ಠ ರನ್ ಸರದಾರ. ಆದ್ರೆ ಪಾಕಿಸ್ತಾನದ ಬಾಬರ್ ಅಜಂ, 3,987 ರನ್ ಹೊಡೆದು ಕೊಹ್ಲಿ ಹಿಂದೆಯೇ ಇದ್ದಾರೆ. ಬಾಬರ್ ಮತ್ತು ಕೊಹ್ಲಿ ನಡುವೆ ಕೇವಲ 40 ರನ್‌ಗಳ ಅಂತರವಿದೆ. ಟಿ20 ವಿಶ್ವಕಪ್‌ನಲ್ಲಿ ಬಾಬರ್ ಒಂದು ಬಿಗ್ ಇನ್ನಿಂಗ್ಸ್ ಆಡಿದ್ರೆ, ಕೊಹ್ಲಿ ರೆಕಾರ್ಡ್ ಉಡೀಸ್ ಆಗಲಿದೆ.
ಈ ಸಲವೂ ವಿರಾಟ್ ದಾಖಲೆ ಅಜರಾಮರ
ಟಿ20 ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ ಗರಿಷ್ಠ ರನ್ ಸರದಾರ. 14 ಹಾಫ್ ಸೆಂಚುರಿ ಸಹಿತ 1,141 ರನ್ ಹೊಡೆದಿರುವ ಕೊಹ್ಲಿ, ಟಾಪ್ನಲ್ಲಿದ್ದಾರೆ. ವಿರಾಟ್ ಬಿಟ್ರೆ ಸದ್ಯ ವಿಶ್ವಕಪ್ ಆಡುತ್ತಿರುವವ ಪೈಕಿ ರೋಹಿತ್ ಶರ್ಮಾ 963 ರನ್ ಗಳಿಸಿದ್ದಾರೆ. ಇವರಿಬ್ಬರ ನಡುವೆ ಭಾರಿ ಅಂತರವಿದೆ. ಹಾಗಾಗಿ ಈ ಸಲ ವಿಶ್ವಕಪ್ನಲ್ಲಿ ಕೊಹ್ಲಿ ದಾಖಲೆ ಮುರಿಯೋಕೆ ಆಗಲ್ಲ.
ದಾಖಲೆ ವಿಶ್ವಕಪ್, ದಾಖಲೆಯ ವಿಕೆಟ್.!
ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್, ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಅಂದ್ರೆ 47 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಮೂರು ವಿಕೆಟ್ ಪಡೆದ್ರೆ, ವಿಕೆಟ್ ಹಾಫ್ ಸೆಂಚುರಿ ದಾಖಲಿಸಲಿದ್ದಾರೆ. ಎಲ್ಲಾ ಟಿ20 ವಿಶ್ವಕಪ್ಗಳನ್ನಾಡಿರುವ ದಾಖಲೆ ಹೊಂದಿರುವ ಶಕೀಬ್, ದಾಖಲೆ ಅಜರಾಮರ. ಯಾಕಂದ್ರೆ ಈ ಸಲವಂತೂ ಅವರ ರೆಕಾರ್ಡ್ ಬ್ರೇಕ್ ಮಾಡೋದು ಕಷ್ಟ.
ಟಿಮ್ ಸೌಥಿ ದಾಖಲೆ ಮುರಿತರಾ ಶಕೀಬ್..?
ನ್ಯೂಜಿಲೆಂಡ್‌ನ ಟಿಮ್ ಸೌಥಿ, 157 ವಿಕೆಟ್ ಪಡೆಯೋ ಮೂಲಕ ಟಿ20ಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದಾರೆ. ಶಕೀಬ್, 146 ವಿಕೆಟ್ ಪಡೆದಿದ್ದಾರೆ. ಈ ಇಬ್ಬರ ನಡುವೆ 11 ವಿಕೆಟ್‌ಗಳ ಅಂತರವಿದೆ. ಇಬ್ಬರು ಈ ವಿಶ್ವಕಪ್ನಲ್ಲಿ ಆಡ್ತಿರೋದ್ರಿಂದ ಇಬ್ಬರ ನಡುವೆ ಮೆಗಾ ಫೈಟ್ ಬೀಳಲಿದೆ.
ಗೇಲ್-ರೋಹಿತ್ ರೆಕಾರ್ಡ್ ಬ್ರೇಕ್ ಮಾಡೋರು ಯಾರು..?
ಚೊಚ್ಚಲ ಟಿ20 ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದ ಕ್ರಿಸ್ ಗೇಲ್, ಎರಡು ವಿಶ್ವಕಪ್ ಸೆಂಚುರಿ ಸಿಡಿಸಿದ್ದಾರೆ. ಗೇಲ್ ಬಿಟ್ರೆ ವಿಶ್ವಕಪ್ನಲ್ಲಿ ಯಾರೂ ಎರಡು ಶತಕ ಬಾರಿಸಿಲ್ಲ. ಗೇಲ್ ದಾಖಲೆ ಮುರಿಯಲು ತ್ರಿಮೂರ್ತಿಗಳು ರೇಸ್ನಲ್ಲಿದ್ದಾರೆ. ಇನ್ನು ರೋಹಿತ್ ಶರ್ಮಾ ಮತ್ತು ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ತಲಾ ಐದು ಶತಕ ಹೊಡೆದಿದ್ದಾರೆ. ಸೂರ್ಯಕುಮಾರ್ 4 ಸೆಂಚುರಿ ದಾಖಲಿಸಿದ್ದಾರೆ. ಈಗ ಟಾಪ್‌ಗೇರಲು ಈ ಮೂವರ ನಡುವೆ ನೇರ ಫೈಟ್ ಬಿದ್ದಿದೆ. ಒಟ್ನಲ್ಲಿ ಕೆಲವೊಂದು ದಾಖಲೆಗಳಿಂದ ಟಿ20 ವಿಶ್ವಕಪ್ ಕಿಕ್ ಏರಿಸಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್