T20 World Cup 2024: ಹೇಗಿದೆ ಗುಂಪು-1ರ ಸೆಮೀಸ್‌ ರೇಸ್‌? ಯಾವ 2 ತಂಡಕ್ಕಿವೆ ಬೆಸ್ಟ್ ಚಾನ್ಸ್?

By Naveen KodaseFirst Published Jun 24, 2024, 4:40 PM IST
Highlights

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 1ರ ಸೆಮೀಸ್ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ

ಬೆಂಗಳೂರು: ಸೂಪರ್‌-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್‌ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ. ಕೊನೆ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದ್ದರೆ, ಅಫ್ಘಾನಿಸ್ತಾನಕ್ಕೆ ಬಾಂಗ್ಲಾ ಸವಾಲು ಎದುರಾಗಲಿದೆ. ತಂಡಗಳ ನಡುವಿನ ಸೆಮೀಸ್‌ ರೇಸ್‌ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ.

1. ಭಾರತ ಮತ್ತು ಬಾಂಗ್ಲಾ ಗೆದ್ದರೆ

Latest Videos

ಆಗ ಭಾರತದ ಅಂಕ 6 ಆಗಲಿದ್ದು, ಅಗ್ರಸ್ಥಾನಿಯಾಗಿ ಸೆಮೀಸ್‌ಗೇರಲಿದೆ. ಆಸೀಸ್‌, ಬಾಂಗ್ಲಾ, ಆಫ್ಘನ್‌ನ ಅಂಕಗಳು ತಲಾ 2 ಆಗಲಿವೆ. ಆಸೀಸ್‌ನ ನೆಟ್‌ ರನ್‌ರೇಟ್‌ ಉತ್ತಮವಾಗಿರುವ ಕಾರಣ ಸೆಮೀಸ್‌ಗೇರುವ ಸಾಧ್ಯತೆ ಹೆಚ್ಚು. ಆಸೀಸ್‌ 31ಕ್ಕಿಂತ ಹೆಚ್ಚು ರನ್‌ ಅಂತರದಲ್ಲಿ ಸೋತರೆ ಮಾತ್ರ ನೆಟ್‌ ರನ್‌ರೇಟ್‌ನಲ್ಲಿ ಆಫ್ಘನ್‌ಗಿಂತ ಹಿಂದಕ್ಕೆ ಬೀಳಲಿದೆ. ಈ 2 ತಂಡಗಳನ್ನೂ ನೆಟ್‌ ರನ್‌ರೇಟ್‌ನಲ್ಲಿ ಬಾಂಗ್ಲಾ ಹಿಂದಿಕ್ಕಬೇಕಿದ್ದರೆ, ಆಫ್ಘನ್‌ ವಿರುದ್ಧ ಬಾಂಗ್ಲಾ 31 ರನ್‌ನಿಂದ ಸೋಲಬೇಕು. ಭಾರತ ವಿರುದ್ಧ ಆಸೀಸ್‌ 55 ರನ್‌ನಲ್ಲಿ ಸೋಲಬೇಕು.

ಟೀಂ ಇಂಡಿಯಾ ಕೋಚ್ ಆಗುವ ಮುನ್ನ ಬಿಸಿಸಿಐ ಮುಂದೆ 5 ಕಂಡೀಷನ್ ಹಾಕಿದ ಗಂಭೀರ್..!

2. ಭಾರತ ಮತ್ತು ಆಫ್ಘನ್‌ ಗೆದ್ದರೆ

ಆಗ ಭಾರತ 6 ಅಂಕದೊಂದಿಗೆ ಅಗ್ರಸ್ಥಾನ ಪಡೆಯಲಿದ್ದು, ಆಫ್ಘನ್‌ 4 ಅಂಕದೊಂದಿಗೆ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ.

3. ಆಸೀಸ್‌ ಮತ್ತು ಆಫ್ಘನ್‌ ಗೆದ್ದರೆ

ಆಗ ಭಾರತ, ಆಸೀಸ್‌ ಹಾಗೂ ಆಫ್ಘನ್‌ಗೆ ತಲಾ 4 ಆಗುತ್ತದೆ. ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ 2 ತಂಡಗಳು ಸೆಮೀಸ್‌ಗೇರಲಿವೆ. ಭಾರತವನ್ನು ಹಿಂದಿಕ್ಕಬೇಕಿದ್ದರೆ ಆಸೀಸ್‌ ಹಾಗೂ ಆಫ್ಘನ್‌ಗೆ ದೊಡ್ಡ ಅಂತರದ ಗೆಲುವು ಅಗತ್ಯವಿದೆ. ಭಾರತ ವಿರುದ್ಧ ಆಸೀಸ್‌ 41 ರನ್‌ ಅಂತರದಲ್ಲಿ ಗೆದ್ದರೆ ನೆಟ್‌ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಲಿದೆ. ಅತ್ತ ಆಫ್ಘನ್‌ ತಂಡ ಬಾಂಗ್ಲಾವನ್ನು 83 ರನ್‌ನಿಂದ ಸೋಲಿಸಿದರೆ ಭಾರತ 3ನೇ ಸ್ಥಾನಕ್ಕೆ ಕುಸಿಯಲಿದೆ.

T20 World Cup 2024 ಆಸ್ಟ್ರೇಲಿಯಾ ಎದುರಿನ ಮಹತ್ವದ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

4. ಆಸೀಸ್‌ ಮತ್ತು ಬಾಂಗ್ಲಾ ಗೆದ್ದರೆ

ಆಗ ಭಾರತ ಹಾಗೂ ಆಸ್ಟ್ರೇಲಿಯಾ ತಲಾ 4 ಅಂಕದೊಂದಿಗೆ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದು ಸೆಮಿಫೈನಲ್‌ಗೇರಲಿವೆ. ತಲಾ 2 ಅಂಕದೊಂದಿಗೆ ಬಾಂಗ್ಲಾ ಮತ್ತು ಆಫ್ಘನ್‌ ಹೊರಬೀಳಲಿವೆ.

ಅಂ.ರಾ. ಕ್ರಿಕೆಟ್‌ನಲ್ಲಿ 45 ತಂಡಗಳ ವಿರುದ್ಧ ಗೆದ್ದ ಅಫ್ಘಾನಿಸ್ತಾನದ ನಬಿ!

ಸೇಂಟ್‌ ವಿನ್ಸೆಂಟ್‌: ಅಫ್ಘಾನಿಸ್ತಾನದ ಹಿರಿಯ ಕ್ರಿಕೆಟಿಗ ಮೊಹಮದ್‌ ನಬಿ ವಿಶ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 45 ವಿವಿಧ ತಂಡಗಳ ವಿರುದ್ಧ ಗೆದ್ದ ಅಪರೂಪದ ಸಾಧನೆ ಮಾಡಿದ್ದಾರೆ. 

ಅವರು ತಂಡದಲ್ಲಿದ್ದಾಗ ಅಫ್ಘಾನಿಸ್ತಾನ ಈ ವರೆಗೂ ಐರ್ಲೆಂಡ್‌, ಶ್ರೀಲಂಕಾ, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಪಾಕಿಸ್ತಾನ, ಇಟಲಿ, ಅರ್ಜೆಂಟೀನಾ, ಬಹಾಮಾಸ್‌, ತಾಂಜಾನಿಯಾ, ಚೀನಾ, ಸಿಂಗಾಪುರ, ಕುವೈತ್‌, ಇರಾನ್‌, ಮಾಲ್ಡೀವ್ಸ್‌, ನಮೀಬಿಯಾ, ನೇಪಾಳ, ಜಿಂಬಾಬ್ವೆ, ಬರ್ಮುಡಾ, ಸೌದಿ ಅರೇಬಿಯಾ ಸೇರಿದಂತೆ ಒಟ್ಟು 45 ದೇಶಗಳ ವಿರುದ್ಧ ಗೆದ್ದಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನು ಗೆಲ್ಲಬೇಕಿದೆ.
 

click me!