T20 World Cup 2024: ಅಮೆರಿಕ ಹೊರದಬ್ಬಿ ಸೆಮೀಸ್‌ಗೆ ಇಂಗ್ಲೆಂಡ್ ಲಗ್ಗೆ..!

By Kannadaprabha News  |  First Published Jun 24, 2024, 10:45 AM IST

ಇಂಗ್ಲೆಂಡ್ ಗುಂಪು-2ರಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ನೆಟ್ ರನ್ ರೇಟ್ (+1.992) ಉತ್ತಮವಾಗಿರುವುದರಿಂದ ಅಗ್ರ-2ರಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ 18.5 ಓವರಲ್ಲಿ 115ಕ್ಕೆ ಆಲೌಟಾಯಿತು.


ಬಾರ್ಬಡೊಸ್: ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವುದರೊಂದಿಗೆ ಸೂಪರ್ -8 ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಮೆರಿಕ ವಿರುದ್ಧ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾನುವಾರದ ನಿರ್ಣಾಯಕ ಪಂದ್ಯದಲ್ಲಿ 10 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್, ಈ ಬಾರಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿತು.

ಇಂಗ್ಲೆಂಡ್ ಗುಂಪು-2ರಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ನೆಟ್ ರನ್ ರೇಟ್ (+1.992) ಉತ್ತಮವಾಗಿರುವುದರಿಂದ ಅಗ್ರ-2ರಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ 18.5 ಓವರಲ್ಲಿ 115ಕ್ಕೆ ಆಲೌಟಾಯಿತು. ನಿತೀಶ್ 30, ಆಂಡರ್‌ಸನ್‌ 29 ರನ್ ಗಳಿಸಿದರು. 115ಕ್ಕೆ 5 ವಿಕೆಟ್ ಕಳೆದು ಕೊಂಡಿದ್ದ ತಂಡ ಬಳಿಕ ಒಂದೂ ರನ್ ಸೇರಿಸದೆ ಆಲೌಟಾಯಿತು. 19ನೇ ಓವರಲ್ಲಿ ಜೊರ್ಡನ್ ಹ್ಯಾಟ್ರಿಕ್ ಸೇರಿ 4 ವಿಕೆಟ್ ಕಿತ್ತರು.

Tap to resize

Latest Videos

undefined

ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತ ಸರಣಿ ಕ್ಲೀನ್‌ಸ್ವೀಪ್‌..! ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

ಸುಲಭ ಗುರಿಯನ್ನು ಇಂಗ್ಲೆಂಡ್ 9.4 38 ಎಸೆತಗಳಲ್ಲಿ 83 ರನ್ ಚಚ್ಚಿದ ಬಟ್ಲರ್ ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು. ಜೋಸ್ ಬಟ್ಲರ್ 38 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ನೊಂದಿಗೆ 83 ರನ್‌ ಚಚ್ಚಿದರೆ, ಸಾಲ್ಟ್ 25 ರನ್ ಗಳಿಸಿದರು.

ಸ್ಕೋರ್: 
ಅಮೆರಿಕ 18.5 ಓವರ್‌ಗಳಲ್ಲಿ 115/10 (ನಿತೀಶ್ 30, ಜೋರ್ಡನ್ 4-10, ರಶೀದ್ 2-13)
ಇಂಗ್ಲೆಂಡ್ 9.4 ಓವರಲ್ಲಿ 117/0 (ಬಟ್ಲರ್ 83*, ಸಾಲ್ಟ್ 25*)
ಪಂದ್ಯಶ್ರೇಷ್ಠ: ಆದಿಲ್ ರಶೀದ್.

ಸತತ 2 ಪಂದ್ಯದಲ್ಲಿ ವೇಗಿ ಕಮಿನ್ಸ್‌ ಹ್ಯಾಟ್ರಿಕ್‌ ವಿಕೆಟ್!

ಸೇಂಟ್‌ ವಿನ್ಸೆಂಟ್‌: ಅಫ್ಘಾನಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ ಸೂಪರ್‌-8 ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವ ಮೂಲಕ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್‌ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್‌ ಎನಿಸಿಕೊಂಡಿದ್ದಾರೆ.

ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್‌ ಕಿತ್ತಿದ್ದ ಕಮಿನ್ಸ್‌, ಭಾನುವಾರ ರಶೀದ್‌ ಖಾನ್‌, ಕರೀಂ ಹಾಗೂ ಗುಲ್ಬದಿನ್‌ ನೈಬ್‌ ವಿಕೆಟ್‌ ಪಡೆಯುವ ಮೂಲಕ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು. ಈ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಕಿತ್ತಿದ್ದು ಪಾಕಿಸ್ತಾನದ ವಾಸಿಂ ಅಕ್ರಂ. ಅವರು 1999ರಲ್ಲಿ ಶ್ರೀಲಂಕಾ ವಿರುದ್ಧ ಸತತ 2 ಟೆಸ್ಟ್‌ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

T20 World Cup 2024 ಭಾರತ vs ಆಸೀಸ್‌: ಸೆಮೀಸ್‌ ರೇಸ್‌ ಗೆಲ್ಲೋರ್‍ಯಾರು?

ಇನ್ನು, ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ 2 ಬಾರಿ ಹ್ಯಾಟ್ರಿಕ್‌ ಸಾಧನೆ ಮಾಡಿದ 5ನೇ ಬೌಲರ್‌ ಕಮಿನ್ಸ್‌. ಶ್ರೀಲಂಕಾದ ಮಾಲಿಂಗಾ, ನ್ಯೂಜಿಲೆಂಡ್‌ನ ಟಿಮ್‌ ಸೌಥಿ, ಸರ್ಬಿಯಾದ ಮಾರ್ಕ್‌ ಪಾವ್ಲೊವಿಚ್‌, ಮಾಲ್ಟಾದ ವಸೀಂ ಅಬ್ಬಾಸ್‌ ಕೂಡಾ ಈ ಸಾಧನೆ ಮಾಡಿದ್ದಾರೆ.

ಅಂ.ರಾ. ಕ್ರಿಕೆಟ್‌ನಲ್ಲಿ 6 ಬಾರಿ ಹ್ಯಾಟ್ರಿಕ್‌ ವಿಕೆಟ್‌ಗೆ ಬಲಿಯಾದ ಮಹ್ಮೂದುಲ್ಲಾ!

ಆ್ಯಂಟಿಗಾ: ಗುರುವಾರ ಬಾಂಗ್ಲಾದೇಶ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದರು. ಅವರು ಮಹ್ಮೂದುಲ್ಲಾ, ಮಹೆದಿ ಹಸನ್‌ ಹಾಗೂ ತೌಹೀರ್‌ರನ್ನು ಸತತ ಎಸೆತಗಳಲ್ಲಿ ಔಟ್‌ ಮಾಡಿದರು. ಇದರೊಂದಿಗೆ ಮಹ್ಮೂದುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್‌ ವಿಕೆಟ್‌ಗೆ ಬಲಿಯಾದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಅವರು ಈ ವರೆಗೂ ಒಟ್ಟು 6 ಬಾರಿ ಹ್ಯಾಟ್ರಿಕ್‌ ವಿಕೆಟ್‌ನಲ್ಲಿ ಭಾಗಿಯಾಗಿದ್ದಾರೆ. ಏಕದಿನದಲ್ಲಿ 2, ಟೆಸ್ಟ್‌ನಲ್ಲಿ 1 ಹಾಗೂ ಟಿ20 ಕ್ರಿಕೆಟ್‌ನಲ್ಲಿ 3 ಬಾರಿ ಹ್ಯಾಟ್ರಿಕ್‌ ವಿಕೆಟ್‌ಗೆ ಬಲಿಯಾಗಿದ್ದಾರೆ.
 

click me!