T20 World Cup 2024: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ..!

By Kannadaprabha NewsFirst Published Jun 11, 2024, 11:22 AM IST
Highlights

'ಎ' ಗುಂಪಿನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೂಪರ್ ಓವರ್ ನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಬಾಬರ್ ಆಜಂ ಪಡೆ, ಭಾನುವಾರ ಬದ್ಧವೈರಿ ಭಾರತಕ್ಕೆ ಶರಣಾಗಿದೆ. ತಂಡ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ಸೂಪರ್ -8 ಹಂತದ ಕನಸು ಜೀವಂತವಾಗಿರಲಿದೆ.

ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್‌ನ ಗುಂಪು ಹಂತದ ಮೊದಲ 2 ಪಂದ್ಯಗಳಲ್ಲಿ ಪರಾಭವಗೊಂಡಿ ರುವ ಪಾಕಿಸ್ತಾನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಕೆನಡಾ ವಿರುದ್ಧ ಸೆಣಸಾಡಲಿದೆ. ಸೋತರೆ ತಂಡ ಗುಂಪು ಹಂತದಲ್ಲೇ ಹೊರಬೀಳಲಿದೆ.

'ಎ' ಗುಂಪಿನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೂಪರ್ ಓವರ್ ನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಬಾಬರ್ ಆಜಂ ಪಡೆ, ಭಾನುವಾರ ಬದ್ಧವೈರಿ ಭಾರತಕ್ಕೆ ಶರಣಾಗಿದೆ. ತಂಡ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದ್ದು, ಈ ಪಂದ್ಯದಲ್ಲಿ ಗೆದ್ದರಷ್ಟೇ ಸೂಪರ್ -8 ಹಂತದ ಕನಸು ಜೀವಂತವಾಗಿರಲಿದೆ.

Latest Videos

T20 World Cup 2024 ಪಾಕ್‌ ಎದುರಿನ ಭಾರತದ ಸಪ್ತ ಗೆಲುವಿನಾಚೆ ಹಲವು ದಾಖಲೆ..!

ಗುಂಪಿನಲ್ಲಿರುವ ಭಾರತ ಹಾಗೂ ಅಮೆರಿಕ ಈಗಾಗಲೇ ತಲಾ 2 ಪಂದ್ಯ ಗಳನ್ನು ಗೆದ್ದಿವೆ. ಈ 2 ತಂಡಗಳ ಪೈಕಿ 1 ತಂಡ ಸೂಪರ್-8 ಪ್ರವೇಶಿಸುವುದು ಖಚಿತವಾಗಿದ್ದು, ಮತ್ತೊಂದು ಸ್ಥಾನದ ಮೇಲೆ ಪಾಕ್ ಕಣ್ಣಿಟ್ಟಿದೆ. ಆದರೆ ತಂಡ ಕೆನಡಾ, ಐರ್ಲೆಂಡ್ ವಿರುದ್ಧದ ಪಂದ್ಯ ದೊಡ್ಡ ಅಂತರದಲ್ಲಿ ಗೆದ್ದು, ಭಾರತ ಅಥವಾ ಅಮೆರಿಕ ಪೈಕಿ 1 ತಂಡ ಉಳಿದ 2 ಪಂದ್ಯಗಳಲ್ಲೂ ಸೋತರಷ್ಟೇ ಪಾಕ್‌ಗೆ ಸೂಪರ್ -8 ಪ್ರವೇಶಿ ಸುವ ಅವಕಾಶ ಸಿಗಲಿದೆ. ಅತ್ತ ಕೆನಡಾ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ಗೆದ್ದರೆ ಸೂಪರ್ -8 ರೇಸ್ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ.  ನೇರಪ್ರಸಾರ:

ಪಂದ್ಯ: ರಾತ್ರಿ 8ಕ್ಕೆ,

ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್

ಚಾಂಪಿಯನ್ಸ್ ಟ್ರೋಫಿ: ಭಾರತದ ಎಲ್ಲಾ ಪಂದ್ಯ ಲಾಹೋರಲ್ಲಿ ಆಯೋಜನೆ?

ಲಾಹೋರ್: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತದ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಯೋಜಿಸು ವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಐಸಿಸಿಗೆ ಸಲಹೆ ನೀಡಿದೆ. ಭಾರತ ತಂಡ ಟೂರ್ನಿಯಲ್ಲಿ ಆಡಲು ಪಾಕ್‌ ಗೆ ತೆರಳುವುದು ಇನ್ನೂ ಖಚಿತಗೊಂಡಿಲ್ಲ. 

ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಆದ್ರೆ ಭಾರತದ ಸಪೋರ್ಟ್‌ ಬೇಕು

ಈ ನಡುವೆ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಪಿಸಿಬಿ, ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಮುಂದಿನ ವರ್ಷ ಫೆ.19ರಿಂದ ಮಾ.9ರ ವರೆಗೆ ಟೂರ್ನಿ ನಡೆಯಲಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.

ವಿಶ್ವಕಪ್: ನೇಪಾಳ ಪರ ಕೊನೆಯ 2 ಪಂದ್ಯಗಳನ್ನು ಆಡಲಿರುವ ಸಂದೀಪ್

ಕಿಂಗ್‌ಸ್ಟನ್ (ಸೇಂಟ್ ವಿನ್ಸೆಂಟ್): ಅಮೆರಿಕ ವೀಸಾ ನಿರಾಕರಣೆ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್‌ನ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ಕೆರಿಬಿಯನ್‌ನಲ್ಲಿ ನಡೆಯಲಿರುವ ಗುಂಪು ಹಂತದ ಕೊನೆ 2 ಪಂದ್ಯಗಳಲ್ಲಿ ಆಡಲಿದ್ದಾರೆ. 

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಸಂದೀಪ್ ಇತ್ತೀಚೆಗಷ್ಟೇ ಖುಲಾಸೆಗೊಂಡಿದ್ದರು. ಆದರೆ ಅಮೆರಿಕ ವೀಸಾ ನೀಡಲು ನಿರಾಕರಿಸಿದ್ದರಿಂದ ಟೆಕ್ಸಾಸ್ ಹಾಗೂ ಫ್ಲೋರಿಡಾದ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಂದೀಪ್‌ಗೆ ಲಭಿಸಿಲ್ಲ. ಆದರೆ ಕೆರಿಬಿಯನ್ ವೀಸಾ ಸಿಕ್ಕ ಕಾರಣಕ್ಕೆ ಸಂದೀಪ್, ಸೇಂಟ್ ವಿನ್ಸೆಂಟ್‌ನಲ್ಲಿ ನಿಗದಿಯಾಗಿರುವ ಕೊನೆ 2 ಪಂದ್ಯಗಳಲ್ಲಿ ನೇಪಾಳ ತಂಡದ ಪರ ಕಣಕ್ಕಿಳಿಯಲಿದ್ದಾರೆ.

click me!