ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ಮೊದಲ ಓವರಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ಔಟಾದರೆ, 5ನೇ ಓವರ್ ವೇಳೆ 23 ರನ್ ಆಗುವಷ್ಟರಲ್ಲಿ ತಂಡದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು.
ನ್ಯೂಯಾರ್ಕ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಹೈಲೈಟ್ಸ್ ಎಂಬಂತಿದ್ದ ಸೋಮವಾರದ ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಪಂದ್ಯ ರೋಚಕವಾಗಿ ಮುಕ್ತಾಯ ಗೊಂಡಿದ್ದು, 4 ರನ್‌ಗಳ ಗೆಲುವು ಸಾಧಿಸಿದ ಆಫ್ರಿಕಾ ಈ ಬಾರಿ ಟೂರ್ನಿಯಲ್ಲಿ ಸೂಪರ್ -8ಗೆ ಅಧಿಕೃತ ಪ್ರವೇಶ ಪಡೆದಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ 'ಡಿ' ಗುಂಪಿನಲ್ಲಿ ಅಂಕದೊಂದಿಗೆ ಅಗ್ರಸ್ಥಾನಿಯಾದರೆ, ಬಾಂಗ್ಲಾದೇಶ 2 ಪಂದ್ಯಗಳಲ್ಲಿ ಮೊದಲ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ಮೊದಲ ಓವರಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ಔಟಾದರೆ, 5ನೇ ಓವರ್ ವೇಳೆ 23 ರನ್ ಆಗುವಷ್ಟರಲ್ಲಿ ತಂಡದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಮಾರ್ಕರಮ್ 4, ಡಿ ಕಾಕ್ 18 ರನ್ ಗಳಿಸಿದರೆ, ಸ್ಟಬ್ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ 5ನೇ ವಿಕೆಟ್‌ಗೆ ಕ್ಲಾಸೆನ್ (44 ಎಸೆತಗಳಲ್ಲಿ 46) ಹಾಗೂ ಡೇವಿಡ್ ಮಿಲ್ಲರ್ (29) ಜೋಡಿ 79 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಬಾಂಗ್ಲಾ ಪರ ತಂಜೀದ್ ಹಸನ್ 18ಕ್ಕೆ 3, ತಸ್ಮಿನ್ ಅಹ್ಮದ್ 19ಕ್ಕೆ 2 ವಿಕೆಟ್ ಕಿತ್ತರು.
undefined
ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಸುಲಭ ಗುರಿ ಸಿಕ್ಕರೂ ದ.ಆಫ್ರಿಕಾದ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾ, 7 ವಿಕೆಟ್‌ಗೆ 109 ರನ್ ಗಳಿಸಿ ಕೊನೆ ಎಸೆತದಲ್ಲಿ ಸೋಲೊಪ್ಪಿಕೊಂಡಿತು. ಬಾಂಗ್ಲಾ ಕೂಡಾ ದ. ಆಫ್ರಿಕಾದಂತೆಯೇ ಸತತ ವಿಕೆಟ್ ಕಳೆದು ಕೊಳ್ಳುತ್ತಾ ಸಾಗಿತು.ಪ್ರಮುಖರು ಕೈ ಕೊಟ್ಟರೂ ತೌಹೀದ್ (37) ಹಾಗೂ ಮಹ್ಮದುಲ್ಲಾ (20) ತಂಡವನ್ನು ಕಾಪಾಡಿದರು. ಕೊನೆ ಓವರಲ್ಲಿ 11, ಕೊನೆ ಎಸೆತದಲ್ಲಿ 6 ರನ್ ಬೇಕಿದ್ದಾಗ ಬಾಂಗ್ಲಾ ಪಂದ್ಯ ಕೈಚೆಲ್ಲಿತು. ಕೇಶವ್ ಮಹಾರಾಜ್ 3 ವಿಕೆಟ್ ಕಿತ್ತರು.
The Proteas lead the way in Group D 🇿🇦 pic.twitter.com/DRPgdnLCsW
— ICC (@ICC)ಸ್ಕೋರ್: ದ.ಆಫ್ರಿಕಾ 113/6 (ಕ್ಲಾಸೆನ್ 46, ಮಿಲ್ಲರ್ 29, ತಂಜೀಮ್ 3-18), ಬಾಂಗ್ಲಾ
109/7( 37, 33-27, ಏನ್ರಿಚ್‌ನೋಕಿಯಾ 2-17) ಪಂದ್ಯಶ್ರೇಷ್ಠ: ಹೆನ್ರಿಚ್ ಕ್ಲಾಸೆನ್
ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ಗೆ ಸತತ 2ನೇ ಜಯ
ಆ್ಯಂಟಿಗಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಸತತ 2ನೇ ಗೆಲುವು ಸಾಧಿಸಿದ್ದು, ಸೂಪರ್-8 ಹಂತದ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಒಮಾನ್ ವಿರುದ್ಧ 7 ವಿಕೆಟ್ ಗೆಲುವು ಲಭಿಸಿತು. ಈ ಗೆಲುವಿನೊಂದಿಗೆ ಸ್ಕಾಟ್ಲೆಂಡ್ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 5 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಒಮಾನ್ ಹ್ಯಾಟ್ರಿಕ್ ಸೋಲಿನೊಂದಿಗೆ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.
ಮೊದಲು ಬ್ಯಾಟ್ ಮಾಡಿದ ಒಮಾನ್ 20 ಓವರಲ್ಲಿ 7 ವಿಕೆಟ್‌ಗೆ 150 ರನ್ ಕಲೆಹಾಕಿತು. ಭಾರತ ಮೂಲದವರಾದ ಪ್ರತೀಕ್ ಅಠಾವಳೆ 40 ಎಸೆತಗಳಲ್ಲಿ 54, ಅಯಾನ್ ಖಾನ್ ಔಟಾಗದೆ 41 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಯಕ ಆಖಿಬ್ ಇಲ್ಯಾಸ್ 6 ಎಸೆತಗಳಲ್ಲಿ 16 ರನ್ ಕೊಡುಗೆ ನೀಡಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್, ಸ್ಫೋಟಕ ಆಟವಾಡಿ ಕೇವಲ 13.1 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸಿ 20 ಎಸೆತಗಳಲ್ಲಿ 21 ರನ್ ಸಿಡಿಸಿದರೆ, ಬ್ರೆಂಡಾನ್ ಮೆಕ್‌ಮುಲೆನ್ 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 61 ರನ್ ಚಚ್ಚಿದರು. ಮೈಕಲ್ ಜಾನ್ಸ್ 16, ಮ್ಯಾಥ್ಯೂ ಕ್ರಾಸ್ ಔಟಾಗದೆ 15 ರನ್ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸ್ಕೋರ್:
ಒಮಾನ್ 20 ಓವರಲ್ಲಿ 150/7 (ಪ್ರತೀಕ್ 54, ಅಯಾನ್ 41*, ಸಫ್ಯಾನ್ 2-40),
ಸ್ಕಾಟ್ಲೆಂಡ್ 13.1 ಓವರಲ್ಲಿ 153/3 (ಮೆಗ್‌ಮುಲನ್ 61*, ಮುನ್ಸಿ 41, ಬಿಲಾಲ್ 1-12)
ಪಂದ್ಯಶ್ರೇಷ್ಠ: ಬ್ರೆಂಡಾನ್ ಮೆಕ್‌ಮುಲನ್.