T20 World Cup 2021: ಆಫ್ಘಾನ್ ಬ್ಯಾಟಿಂಗ್‌‌ನಿಂದ ಭಾರತಕ್ಕೆ ನಿರಾಸೆ, ನ್ಯೂಜಿಲೆಂಡ್‌ಗೆ ಸುಲಭ ಟಾರ್ಗೆಟ್!

By Suvarna NewsFirst Published Nov 7, 2021, 5:10 PM IST
Highlights
  • ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯ
  • ನ್ಯೂಜಿಲೆಂಡ್ ತಂಡಕ್ಕೆ 125 ರನ್ ಟಾರ್ಗೆಟ್
  • ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ
     

ಅಬು ಧಾಬಿ(ನ.07): ನಜೀಬುಲ್ಲಾ ಜರ್ದಾನ್(Najibullah Zadran) ಹೋರಾಟದಿಂದ ಆಫ್ಘಾನಿಸ್ತಾನ(Afghanistan) 8 ವಿಕೆಟ್ ನಷ್ಟಕ್ಕೆ 124 ರನ್ ಸಿಡಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 125 ರನ್ ಟಾರ್ಗೆಟ್ ನೀಡಿದೆ.  ನ್ಯೂಜಿಲೆಂಡ್(New zealand) ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯ ಟೀಂ ಇಂಡಿಯಾದ ಕುತೂಹಲ ಹೆಚ್ಚಿಸಿದೆ. 

T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ಈ ಪಂದ್ಯ ಟೀಂ ಇಂಡಿಯಾಗೂ(Team India) ಅತ್ಯಂತ ಮಹತ್ವದ್ದಾಗಿದೆ. ಕಾರಣ ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲುವು ಸಾಧಿಸಿದರೆ, ಟೀಂ ಇಂಡಿಯಾ ಸೆಮಿಫೈನಲ್(Semifinal) ಪ್ರವೇಶ ಜೀವಂತವಾಗಲಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಆಫ್ಘಾನಿಸ್ತಾನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಟಾಸ್(Toss) ಗೆದ್ದು ಬ್ಯಾಟಿಂಗ್ ಇಳಿದ ಆಫ್ಘಾನಿಸ್ತಾನ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊಹಮ್ಮದ್ ಶೆಹಜಾದ್ ಕೇವಲ 4 ರನ್ ಸಿಡಿಸಿ ಔಟಾದರು. ಇನ್ನು ಹಜ್ರತುಲ್ಲಾ ಜೈಜೈ ಕೇವಲ 2 ರನ್ ಸಿಡಿಸಿ ಔಟಾದರು. 12 ರನ್‌ಗೆ ಆಫ್ಘಾನಿಸ್ತಾನ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಆರಂಭಿಕರ ವಿಕೆಟ್ ಪತನದ ಬೆನ್ನಲ್ಲೇ ರಹಮಾನಲ್ಲಾ ಗುರ್ಬಾಜ್ 6 ರನ್ ಸಿಡಿಸಿ ಔಟಾದರು. 

19 ರನ್‌ಗೆ 3 ವಿಕೆಟ್ ಕಳೆದುಕೊಂಡ ಆಫ್ಘಾನಿಸ್ತಾನ ಗುಲ್ಬಾದಿನ್ ನೈಬ್ 15 ರನ್ ಸಿಡಿಸಿ ಔಟಾದರು. ಆಫ್ಘಾನಿಸ್ತಾನದ ಬ್ಯಾಟಿಂಗ್ ಭಾರತೀಯ ಅಭಿಮಾನಿಗಳ ಆತಂಕ ಹೆಚ್ಚಿಸಿತು. ಆದರೆ ನಜೀಬುಲ್ಲಾ ಜರ್ದಾನ್ ಹೋರಾಟದಿಂದ ಆಫ್ಘಾನಿಸ್ತಾನ ಚೇತರಿಸಿಕೊಂಡಿತು. 

Chris Gayle: ಅಭಿಮಾನಿಗೆ ಗ್ಲೌವ್ಸ್ ಹಂಚಿ ವಿದಾಯ ಖಚಿತಪಡಿಸಿದ್ರಾ ಯುನಿವರ್ಸ್ ಬಾಸ್?

ನಜೀಬುಲ್ಲಾ ಜರ್ದಾನ್ ದಿಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಆಫ್ಘಾನಿಸ್ತಾನ ಮೈಕೊಡವಿ ನಿಂತಿತು. ನಾಯಕ ಮೊಹಮ್ಮದ್ ನಬಿ 14 ರನ್ ಸಿಡಿಸಿ ಔಟಾದರು. ಜರ್ದಾನ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಜರ್ದಾನ್ 48 ಎಸೆತದಲ್ಲಿ 73 ರನ್ ಸಿಡಿಸಿ ಔಟಾದರು.  ಜರ್ದಾನ್ ಆಫ್ಘಾನಿಸ್ತಾನ ಪರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ದಾಖಲೆ ಬರೆದರು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಆಫ್ಘಾನ್ ಬ್ಯಾಟ್ಸ್‌ಮನ್
73 ನಜೀಬ್ ಜರ್ದಾನ್ v ನ್ಯೂಜಿಲೆಂಡ್, 2021
68 ಶೆಹಜಾದ್ v ಹಾಂಕಾಂಗ್, 2014
62 ಅಸ್ಗರ್ ಅಫ್ಘಾನ್ v ಶ್ರೀಲಂಕಾ, 2016
61 ಶೆಹಜಾದ್ v ಸ್ಕಾಟ್‌ಲೆಂಡ್, 2016

ಕರೀಮ್ ಜನತ್ ಕೇವಲ 2 ರನ್ ಸಿಡಿಸಿ ಔಟಾದರು. ರಶೀದ್ ಖಾನ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.  ಆಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 124 ರನ್ ಸಿಡಿಸಿತು. 

ನ್ಯೂಜಿಲೆಂಡ್ ಬೌಲಿಂಗ್ ಅಂಕಿ ಅಂಶ ಆಫ್ಘಾನಿಸ್ತಾನಕ್ಕೆ ಕೊಂಚ ಆತಂಕ ತಂದಿರುವುದು ನಿಜ. ಕಾರಣ ಸ್ಪಿನ್ ಅಸ್ತ್ರದಲ್ಲಿ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಲು ಆಫ್ಘಾನ್ ಮುಂದಾಗಿದೆ. ಆದರೆ ನ್ಯೂಜಿಲೆಂಡ್ ತಂಡದ ವೇಗಿಗಳು 7 ವಿಕೆಟ್ ಕಬಳಿಸಿದ್ದರೆ, ಸ್ಪಿನ್ ದಾಳಿಗೆ ಕೇವಲ 1 ವಿಕೆಟ್ ಮಾತ್ರ ಉರುಳಿ ಬಿದ್ದಿದೆ.

ಟೀಂ ಇಂಡಿಯಾ ರನ್‌ರೇಟ್ ಹಿಂದಿಕ್ಕಿಲು ಆಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು 81 ರನ್‌ಗಳಿಗೆ ಕಟ್ಟಿಹಾಕಬೇಕು. ಹೀಗಾದಲ್ಲಿ ಆಫ್ಘಾನಿಸ್ತಾನ ತಂಡ ಟೀಂ ಇಂಡಿಯಾವನ್ನು ಹಿಂದಿಕ್ಕಲಿದೆ. ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಸೆಮಿಫೈನಲ್ ಪ್ರೇವಶಿಸಲಿದೆ. ಪಾಕಿಸ್ತಾನ ಜೊತೆ ನ್ಯೂಜಿಲೆಂಡ್ ಸೆಮೀಸ್‌ಗೆ ಲಗ್ಗೆ ಇಡಲಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳು ಆಫ್ಘಾನ್ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಭಾರತ 3 ಹಾಗೂ ಆಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ
 

click me!