T20 World Cup - AFG vs NZ: ಅಫ್ಘಾನಿಸ್ತಾನ ಕೈಲಿ ಟೀಂ ಇಂಡಿಯಾ ಭವಿಷ್ಯ!

By Suvarna NewsFirst Published Nov 7, 2021, 11:52 AM IST
Highlights

*ಗೆದ್ದವರು ಸೆಮಿಫೈನಲ್‌ನಲ್ಲಿ ಸೋತವರು ಮನೆಗೆ
*ಟೀಂ ಇಂಡಿಯಾ ಪಾಲಿಗೂ ನಿರ್ಣಾಯಕವಾಗಲಿರುವ ಪಂದ್ಯ
*ಭಾರತದ ಕ್ರಿಕೆಟ್‌ ಅಭಿಮಾನಿಗಳಿಂದ ಅಫ್ಘನ್‌ಗೆ ಬೆಂಬಲ
*ಅಫ್ಘಾನಿಸ್ತಾನ‌ ಪರ ಭಾರತದಿಂದ ಸಾವಿರಾರು ಟ್ವೀಟ್ಸ್!
 

ಅಬು ಧಾಬಿ(ನ. 7 ): ಭಾರತ  ಸ್ಕಾಟ್ಲೆಂಡ್‌ (Scotland)ವಿರುದ್ಧ  ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ನೆಟ್‌ರನ್‌ರೇಟ್ (Net Run Rate) ಉತ್ತಮಪಡಿಸಿಕೊಂಡಿದೆ. ಟೀಂ ಇಂಡಿಯಾ (Team India) ಸ್ಕಾಟ್‌ಲೆಂಡ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ  ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಕೇವಲ ಉತ್ತಮ ನೆಟ್‌ರನ್ ರೇಟ್ ಮೂಲಕ ಸೆಮೆಫೈನಲ್‌ ತಲುಪಬೇಕಿರುವ ಭಾರತ ಮುಂದಿನ ಪಂದ್ಯಗಳಲ್ಲಿ ಕೂಡ ಉತ್ತಮ ನೆಟರನ್‌ ರೆಟ್‌ ಕಾಯ್ದುಕೊಳ್ಳಬೇಕಿದೆ. ಆದರೆ ರನ್‌ ರೇಟ್‌ ಪರಿಗಣನೆಗೆ ಬರುವ ಮುನ್ನ ನ್ಯೂಜಿಲೆಂಡ್-ಅಫ್ಘಾನಿಸ್ತಾನ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಿದರೆ ಮಾತ್ರ ಭಾರತಕ್ಕೆ ಸೆಮೀಸ್‌ (Semi Final) ಬಾಗಿಲು ತೆರೆದುಕೊಳ್ಳುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಭವಿಷ್ಯ ನಿರ್ಧರಿಸಲಿರುವ ಪಂದ್ಯ! 

ಭಾರತಕ್ಕೆ ನಿರ್ಣಾಯಕವಾಗಲಿರುವ ನ್ಯೂಜಿಲೆಂಡ್-ಅಫ್ಘಾನಿಸ್ತಾನ (New Zealand vs Afghanistan) ಪಂದ್ಯದ ಮೇಲೆ ಇಗ ಎಲ್ಲರ ಚಿತ್ತ ನೆಟ್ಟಿದೆ. ಭಾರತೀಯ ಕ್ರಿಕೆಟ್‌ ಅಭಿಮಾನಿಗಳು (Indian cricket Fans) ಕಾತರದಿಂದ ಎದುರು ನೋಡುತ್ತಿರುವ ನ್ಯೂಜಿಲೆಂಡ್-ಅಫ್ಘಾನಿಸ್ತಾನ  ಪಂದ್ಯವು ಭಾನುವಾರ ಅಬು ಧಾಬಿಯಲ್ಲಿ ನಡೆಯಲಿದೆ. ಸೂಪರ್ 12 ಗುಂಪು 2 ರಲ್ಲಿ ಸೆಮಿಫೈನಲ್‌ ಪ್ರವೇಶಿಸಲು ಕಾತರದಲ್ಲಿರುವ ಉಭಯ ತಂಡಗಳಿಗೂ ಇದು ನಿರ್ಣಾಯಕ ಪಂದ್ಯವಾಗಿದ್ದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. 

T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!

ನ್ಯೂಜಿಲೆಂಡ್‌ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ (Pakistan) ವಿರುದ್ದ ಸೋತಿದ್ದರೂ ಬಳಿಕ ತಾನಾಡಿದ 3 ಪಂದ್ಯಗಳಲ್ಲೂ ಗೆದ್ದಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಆಫ್ಘನ್‌ಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಒಂದು ವೇಳೆ ಆಫ್ಘನ್‌ ಗೆದ್ದರೂ ಭಾರತದ ನೆಟ್‌ ರನ್‌ ರೇಟನ್ನು ಹಿಂದಿಕ್ಕಬೇಕಾಗುತ್ತದೆ. ಹಾಗಾಗಿ ಸೋಮವಾರ ನಡೆಯಲಿರುವ ಭಾರತ-ನಮೀಬಿಯಾ ನಡುವಿನ ಪಂದ್ಯವು ಆಫ್ಘನ್‌ ಪಾಲಿಗೆ ನಿರ್ಣಾಯಕವಾಗಲಿದೆ.

 

𝐃𝐨𝐮𝐛𝐥𝐞 the fun! 🥳

Who wins today's matches? pic.twitter.com/MUpP4JtaWW

— T20 World Cup (@T20WorldCup)

 

ಸೆಮಿಸ್‌ ತಲುಪಲು 3 ತಂಡಗಳ ರೇಸ್!

2021 ರ T20 ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ  ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ  ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಹಾಗಾಗಿ ಅಂತಿಮ ನಾಲ್ಕರಲ್ಲಿ  ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ರೇಸ್ ನಡೆಯುತ್ತಿರುವುದರಿಂದ ಈ ಪಂದ್ಯಾವಳಿಗಳು ಕ್ರಿಕೆಟ್‌ ಅಭಿಮಾನಿಗಳ ಉತ್ಸಹಾವನ್ನು ಹೆಚ್ಚಿಸಿವೆ.

ಅಂಕಪಟ್ಟಿ : ಗ್ರೂಪ್‌ 1

ಸೂಪರ್‌-12 ಗ್ರೂಪ್‌ 1 ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಲಾ ನಾಲ್ಕು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಶ್ರೀ ಲಂಕಾ ನಾಲ್ಕನೇ ಸ್ಥಾನದಲ್ಲಿದೆ.  ಕೇವಲ ಒಂದು ಗೆಲುವನ್ನು ಕಂಡಿರುವ ವೆಸ್ಟ್‌ ಇಂಡೀಸ್ ಐದನೇ ಸ್ಥಾನದಲ್ಲಿದ್ದರೆ ಯಾವುದೇ ಗೆಲುವು ಕಾಣದ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಅಂಕಪಟ್ಟಿ : ಗ್ರೂಪ್‌ 2

ಸೂಪರ್‌-12 ಗ್ರೂಪ್‌ 2 ರಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ನ್ಯೂಜೆಲೆಂಡ್‌ ಎರಡನೇ ಸ್ಥಾನದಲ್ಲಿದೆ. ಭಾರತ ಹಾಗೂ ಅಫ್ಘಾನಿಸ್ತಾನ ತಲಾ ಎರಡು ಪಂದ್ಯಗಳಲ್ಲಿ ಗೆದ್ದು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಕೇವಲ ಒಂದು ಗೆಲುವನ್ನು ಕಂಡಿರುವ ನಮಿಬಿಯಾ ಐದನೇ ಸ್ಥಾನದಲ್ಲಿದ್ದರೆ ಯಾವುದೇ ಗೆಲುವು ಕಾಣದ ಸ್ಕಾಟ್ಲೆಂಡ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ‌ ಪರ ಭಾರತದಿಂದ ಸಾವಿರಾರು ಟ್ವೀಟ್ಸ್!

ನ್ಯೂಜಿಲೆಂಡ್ ವಿರುದ್ಧದ ಭಾನುವಾರದ ಪಂದ್ಯಕ್ಕೆ ಮೊಹಮ್ಮದ್ ನಬಿ (Mohammad Nabi) ನಾಯಕತ್ವದ ಆಫ್ಘನ್‌ ತಂಡಕ್ಕೆ ಭಾರತದ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿ ಬೆಂಬಲ ಸೂಚಿಸಿದ್ದಾರೆ. ಸಾವಿರಾರು ಟ್ವೀಟ್‌ಗಳ ಸುರಿಮಳೆ ಹರಿಸುವ ಮೂಲಕ ಅಫ್ಘಾನಿಸ್ತಾನ ಜಯ ಸಾಧಿಸಲಿ ಎಂದು ಆಶಿಸಿದ್ದಾರೆ. ಅಭಿಮಾನಿಗಳು ಮಾಡಿರುವ ಟ್ವೀಟ್‌ಗಳು ಎಲ್ಲೆಡೆ ವೈರಲ್‌ ಆಗುತಿದ್ದು ಅಫ್ಘಾನಿಸ್ತಾನ ಪರ 130 ಕೋಟಿ ಭಾರತೀಯರ ಆಶೀರ್ವಾದ ಇದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

 

Practice well, Stay hydrated and take good care of yourselves 😬 and win tomorrow 😇 https://t.co/ANFQzTwx1j

— Vijayakarthikeyan K (@Vijaykarthikeyn)

 

 

The whole of India would be praying for your win!!!!!!😊😊😊 https://t.co/YhKZa4bzNg

— Cric🏏 ❤️Baba (@BabaCrick)

 

click me!